ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ನಗರದ ತಾಲೂಕು ಕಚೇರಿಯಲ್ಲಿ ಇಂದು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ವತಿಯಿಂದ 8 ನೇ ಶತಮಾನದ ಮಾನವ ಕುಲ ತಾನೊಂದೆ ಎಂದು ಕನ್ನಡ ನಾಡಿನ ಚಿನ್ನದ ರಾಜ,ಶಾಂತಿ ಸಹೋದ್ರತೆಯಿಂದ 64 ವರ್ಷಗಳ ಕಾಲ ಸುದೀರ್ಘವಾಗಿ ಭಾರತ ದೇಶವನ್ನು ಆಳಿದ ಅರಸ ಬೇರೆ ಬೇರೆ ಧರ್ಮೀಯರಿಗೆ ಆಶ್ರಯ ನೀಡಿದ.
ಹಿಂದೂ ಅರಸ ಪ್ರಜೆಗಳ ಹಿತಕ್ಕಾಗಿ ತನ್ನ ಹೆಬ್ಬರಳನ್ನೆ ದಾನ ಮಾಡಿದ ದಕ್ಷಿಣ ಅಶೋಕ ಎಂದೇ ಪ್ರಸಿದ್ಧಿ ಹೊಂದಿದ.
ಅರಸ,ಜಗತ್ತು ಕಂಡ ನಾಲ್ಕು ಶ್ರೇಷ್ಠ ಅರಸರಲ್ಲಿ ಒಬ್ಬರಾದ ರಟ್ಟಕುಲ(ರಡ್ಡಿ) ಸೂರ್ಯವಂಶಸ್ಥ ,ರಾಷ್ಟ್ರ
ಕೂಟ ದೊರೆ.
ಅಮೋಘವರ್ಷ ನೃಪತುಂಗ ಅರಸನ ಜಯಂತಿಯನ್ನು ಆಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರಡ್ಡಿ ಅಮ್ಮಾಪುರ್,ಮಲ್ಲಣ್ಣ ಸಾಹುಕಾರ್ ಜಾಲಿಬೆಂಚಿ,ಶಿವುಮೋನಯ್ಯ ಎಲ್.ಡಿ ನಾಯಕ,ಮಲ್ಲು ಬಾದ್ಯಾಪುರ,ಬಸನಗೌಡ ಕಮತಗಿ,ತಿರುಪತಿ ಯಂಕಗೋಳ್,ಮಾನಪ್ಪ ಕಟ್ಟಿಮನಿ,ನಿಂಗಣ್ಣ ಕುಳಗೇರಿ,ವೆಂಕಟೇಶ ರಾವೂರ್,ಮಹೇಶ್ ಶಾಬಾದಿ,ವಿರೇಶ್ ಕುಂಬಾರ,ಅಯ್ಯಣ್ಣ ಪೂಜಾರಿ,ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ವರದಿ : ಮೌನೇಶ ಆರ್ ಭೋಯಿ