Friday, June 12, 2026
Homeಆರೋಗ್ಯರಕ್ತದಾನ ಜೀವಧಾನಕ್ಕೆ ಸಮ: ಡಾ. ರಾಜಶ್ರೀ ಪಾಲಾದಿ

ರಕ್ತದಾನ ಜೀವಧಾನಕ್ಕೆ ಸಮ: ಡಾ. ರಾಜಶ್ರೀ ಪಾಲಾದಿ

ಕಲಬುರಗಿ: ನಗರದ ಕೆಬಿಎನ್ ಆಸ್ಪತ್ರೆಯ ಕೆಬಿಎನ್ ರಕ್ತನಿದಿ ಕೇಂದ್ರದಲ್ಲಿ ಪ್ರಸೂತಿ ವಿಭಾಗ, ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಹಾಗೂ ಗುಲ್ಬರ್ಗಾ ಪ್ರಸೂತಿ ಮತ್ತು ಸ್ತ್ರೀ ರೋಗ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ರಕ್ತ ದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾದ ಡಾ ರಾಜಶ್ರೀ ಪಾಲಾದಿ ಮಾತನಾಡುತ್ತ, ರಕ್ತ ದಾನ ಜೀವ ದಾನ ನೀಡುತ್ತದೆ. ಹೆರಿಗೆ ಸಮಯದಲ್ಲಿ ಕೆಲವು ಮಹಿಳೆಯರು ರಕ್ತದ ಕೊರತೆಯಿಂದ ಬಳಲುತ್ತಾರೆ, ಆಗ ರಕ್ತದಿಂದಲೇ ಅವರಿಗೆ ಮರುಜನ್ಮ ಸಿಗುತ್ತದೆ. ಹಸುಗೂಸು, ರಸ್ತೆ ಅಪಘಾತಕ್ಕೆ ತುತ್ತದವರು, ಸರ್ಜಿಕಲ್ ಸಮಯದಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ. ದೇಹದಲ್ಲಿ ಹೊಸ ರಕ್ತ ಉಂಟಾಗುವ ಸಾಧ್ಯತೆ ಇದ್ದು, ರಕ್ತ ದಾನಕ್ಕೆ ಯುವಕರು ಮುಂದಾಗಬೇಕು ಎಂದರು.

ವಿವಿಯ ಸಂಸ್ಥಾಪಕ ಕುಲಾಧಿಪತಿ ದಿವಗಂತ ಡಾ ಸಯ್ಯದ್ ಷಾ ಖುಸ್ರೋ ಹುಸ್ಸೇನಿ ಹಾಗೂ ಈಗಿನ ಕುಲಾಧಿಪತಿ ಡಾ ಸಯ್ಯದ ಮುಹಮ್ಮದ್ ಅಲ್ ಹುಸೇನಿಯವರು ಈ ಆಸ್ಪತ್ರೆಯಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಕೆಬಿಎನ್ ಜನರ ಸೇವೆಗಾಗಿ ಸದಾ ಸಿದ್ಧ ಎಂದರು. ಶಿಬಿರ ಆಯೋಜನೆಗಾಗಿ ಆಯೋಜಕರಿಗೆ ಅಭಿನಂದಿಸಿದರು.

ವೈದ್ಯಕೀಯ ಆಧೀಕ್ಷ ಡಾ. ಸಿದ್ಧಲಿಂಗ ಚೆಂಗಟಿ ಇವರು ರಕ್ತ ದಾನ ಶೇಷ್ಟದಾನ, ಕೆಬಿಎನ್ ರಕ್ತ ಕೇಂದ್ರ ಯಾವಾಗಲೂ ದಾನಿಗಳನ್ನು ಸ್ವಾಗತಿಸುತ್ತದೆ ಎಂದರು. ಆಯೋಜಕರಿಗೆ ಒಳ್ಳೆಯ ಕಾರ್ಯಕ್ರಮಕ್ಕಾಗಿ ಅಭಿನಂದನೆಗಳನ್ನು ತಿಳಿಸಿದರು.

ಡಾ. ಮಹಾವೀಶ ಮಾತನಾಡಿ ರಕ್ತ ದಾನದ ಮಹತ್ವವನ್ನು ತಿಳಿಸಿದರು. ಈ ಶಿಬಿರದಲ್ಲಿ ಆಸ್ಪತ್ರೆಯ ಆಧೀಕ್ಷಕಿ ಡಾ. ರಾಧಿಕಾ ಮಾಜಿ ಮೆಡಿಕಲ್ ಡೀನ್ ಡಾ. ಸಿದ್ದೇಶ ಸಿರವಾರ, ಶಿಬಿರದಲ್ಲಿ 50 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಡಾ. ಇಬ್ರಾಹಿಂ ಸಿದ್ದಿಕಿ, ಡಾ. ಮಹಾವೀಶ್ ಅಂಜುಮ್,
ಡಾ. ಗಜಾಲಾ ಸಿರಿನ್, ಗೀತಾಂಜಲಿ ಜೀವಣಗಿ ಮುಂತಾದವರು ಹಾಜರಿದ್ದರು.

ಹೆಚ್ಚಿನ ಸುದ್ದಿ