Saturday, February 14, 2026
HomeUncategorizedಯುವಶಕ್ತಿಯೇ ಅಹಿಂದದ ಭವಿಷ್ಯ: ಸಮಾನತೆಯ ರಾಜಕಾರಣಕ್ಕೆ ಒಗ್ಗೂಡಿ – ಅಹಿಂದ ಚಿಂತಕ ಲೋಹಿತ್ ನಾಯಕ.

ಯುವಶಕ್ತಿಯೇ ಅಹಿಂದದ ಭವಿಷ್ಯ: ಸಮಾನತೆಯ ರಾಜಕಾರಣಕ್ಕೆ ಒಗ್ಗೂಡಿ – ಅಹಿಂದ ಚಿಂತಕ ಲೋಹಿತ್ ನಾಯಕ.

ಅಹಿಂದ ಸಮುದಾಯದ ಯುವಕರು ಕೋಮುವಾದಿಗಳು ಹಾಗೂ ಸಮಾನತೆಯ ವಿರೋಧಿಗಳ ಕೈಗೊಂಬೆಯಾಗಬಾರದು ಎಂದು ಅಹಿಂದ ಚಿಂತಕರಾದ ಲೋಹಿತ್ ನಾಯಕ ಅವರು ಹೇಳಿದರು. ರಾಷ್ಟ್ರೀಯ ಅಹಿಂದ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಸಂಘಟನೆಯ ಕಾರ್ಯಕರ್ತರಿಗೆ ನಿಯೋಜಿತ ಕಾರ್ಯಾಗಾರಗಳು ಹಾಗೂ ಚಿಂತನಾ ಶಿಬಿರಗಳು ಅಗತ್ಯವೆಂದು ತಿಳಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಬಹುಜನ ಚಳುವಳಿ ಹಾಗೂ ಶೋಷಿತ ಸಮಾಜದ ಮಹಾನ್ ಐಕಾನ್‌ಗಳ ಬಗ್ಗೆ ಸಮಗ್ರ ಮಾಹಿತಿಯ ಕೊರತೆ ಇದೆ. ಈ ಅರಿವು ಯುವಪೀಳಿಗೆಯಲ್ಲಿ ಬೆಳೆಸುವುದು ಕಾಲದ ಅವಶ್ಯಕತೆ ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕದಲ್ಲಿ ಸುಮಾರು 75 ಶೇಕಡಾ ಜನಸಂಖ್ಯೆಯನ್ನು ಹೊಂದಿರುವ ಅಹಿಂದ ಸಮುದಾಯಗಳು ಪರಸ್ಪರ ಸಹಕಾರ, ಸಹಯೋಗ ಮತ್ತು ಸಹಬಾಳ್ವೆಯ ಆಧಾರದ ಮೇಲೆ ರಾಜಕಾರಣ ಕಟ್ಟಬೇಕಾಗಿದೆ. “ಅಹಿಂದ ಅಂದರೆ ವಿನ್-ವಿನ್ ಮಾದರಿ; ಇದು ಎಲ್ಲರಿಗೂ ನ್ಯಾಯ ದೊರಕಿಸುವ ದಾರಿ” ಎಂದು ಅವರು ಒತ್ತಿಹೇಳಿದರು.
ಯುವಕರು ಅಹಿಂದ ಸಂಘಟನೆಯಡಿ ಸಂಘಟಿತರಾಗಿ ತಮ್ಮ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಬೇಕು. ಕೆಲ ಶಕ್ತಿಗಳು ಯುವಕರನ್ನು ಮುಸ್ಲಿಂ ವಿರೋಧಿಗಳಂತೆ ಬಿಂಬಿಸಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಕೋಮುವಾದಿ ಪ್ರಚಾರದ ವಿರುದ್ಧ ತತ್ವಾಧಾರಿತ ಜಾಗೃತಿ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಸಂವಿಧಾನದ ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ ಅಹಿಂದ ಚಳುವಳಿ ಬಲವಾಗಬೇಕು ಎಂದು ಲೋಹಿತ್ ನಾಯಕ ಹೇಳಿದರು.

ಹೆಚ್ಚಿನ ಸುದ್ದಿ