Monday, December 23, 2024
Homeದೇಶಮೋದಿಯನ್ನು ಭಾವುಕರಾಗಿ ಅಪ್ಪಿಕೊಂಡ ತಮಿಳನಾಡು ಮೀನು ಬಲೆ ತಯಾರಕ!

ಮೋದಿಯನ್ನು ಭಾವುಕರಾಗಿ ಅಪ್ಪಿಕೊಂಡ ತಮಿಳನಾಡು ಮೀನು ಬಲೆ ತಯಾರಕ!


ಹೊಸದಿಲ್ಲಿ,ಸೆಪ್ಟೆಂಬರ್‌ 18: ವಿಶ್ವಕರ್ಮ ಮಹೋತ್ಸವದ ದಿನ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ವಿಶೇಷವಾಗಿ ಹಿಂದುಳಿದ ಸಮುದಾಯಗಳಿಗೆ ಪ್ರಯೋಜನವಾಗುವ ‘ಪಿ.ಎಂ ವಿಶ್ವಕರ್ಮ’ ಯೋಜನೆಗೆ ಇಂಡಿಯಾ ಇಂಟರ್ ನ್ಯಾಷನಲ್ ಕನ್ವೆನ್ಶನ್ ಮತ್ತು ಎಕ್ಸ್ ಪೋ ಸೆಂಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ನೀಡುವ ವೇಳೆ ತಮಿಳುನಾಡಿನ ಮೀನುಗಾರಿಕೆ ಬಲೆ ತಯಾರಕ ಕೆ ಪಳನಿವೇಲ್‌ ಅವರು ವೇದಿಕೆಯ ಮೇಲೆ ಭಾವುಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಅಪ್ಪಿಕೊಂಡಿದ್ದಾರೆ. ಈ ವೇಳೆಪ ಪ್ರಧಾನಿ ಮೋದಿ ನುರಿತು ಕುಶಲಕರ್ಮಿಯ ಬೆನ್ನು ತಟ್ಟಿ ಸಂತೈಸಿದ್ದಾರೆ.

ಪಿಎಂ ವಿಶ್ವಕರ್ಮ ಯೋಜನೆಯಿಂದಾಗಿ ಸಾಂಪ್ರದಾಯಿಕ ಕೌಶಲ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳಿಗೆ ಸಹಾಯವಾಗಲಿದೆ. ಇದಕ್ಕಾಗಿ 13,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಯೋಜನೆಯಿಂದಾಗಿ ಕುಶಲಕರ್ಮಿಗಳಿಗೆ ಆಧಾರವಿಲ್ಲದೆ ಒಂದು ಲಕ್ಷ ರೂಪಾಯಿವರೆಗೂ ಸಾಲ ಸಿಗಲಿದೆ. ಯೋಜನೆಯಡಿಯಲ್ಲಿ, ವಿಶ್ವಕರ್ಮರನ್ನು ಬಯೋಮೆಟ್ರಿಕ್ ಆಧಾರಿತ ಪಿಎಂ ವಿಶ್ವಕರ್ಮ ಪೋರ್ಟಲ್ ಬಳಸಿ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಲಾಗುತ್ತದೆ.

ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ, ಮೂಲ ಮತ್ತು ಸುಧಾರಿತ ತರಬೇತಿ ಒಳಗೊಂಡ ಕೌಶಲ್ಯ ಉನ್ನತೀಕರಣ, ಕೌಶಲ ಉನ್ನತೀಕರಣ, ಹದಿನೈದು ಸಾವಿರ ರೂಪಾಯಿಯಷ್ಟು ಟೂಲ್‌ಕಿಟ್‌ ಪ್ರೋತ್ಸಾಹ, ಶೇಕಡ 5ರಷ್ಟು ಬಡ್ಡಿ ದರದಲ್ಲಿ ಎರಡು ಲಕ್ಷ ರೂಪಾಯಿ ಸಾಲ ಸಿಗಲಿದೆ.ಕುಶಲಕರ್ಮಿಗಳಿಗೆ ಡಿಜಿಟಲ್‌ ವ್ಯವಹಾರಕ್ಕೆ ಬೆಂಬಲ ಸಿಗಲಿದೆ. ಅಕ್ಕಸಾಲಿಗರು, ಕ್ಷೌರಿಕರು, ಕಮ್ಮಾರರು, ಮಡಿವಾಳರು, ನೇಕಾರರು ಸೇರಿದಂತೆ ಸುಮಾರು ಮೂವತ್ತು ಲಕ್ಷ ಕುಟುಂಬಗಳಿಗೆ ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನ ಸಿಗಲಿದೆ. ಸೇವಾ ಕೇಂದ್ರಗಳಲ್ಲಿ ಈ ಯೋಜನೆಗೆ ಅರ್ಹರು ನೋಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಸುದ್ದಿ