Sunday, December 22, 2024
Homeಸಿನಿಮಾಮೈಸೂರಿನಲ್ಲಿ ಟಾಲಿವುಡ್ ಮಗಧೀರ; ಚಾಮುಂಡೇಶ್ವರಿ ದರ್ಶನ ಪಡೆದ ರಾಮ್ ಚರಣ್!

ಮೈಸೂರಿನಲ್ಲಿ ಟಾಲಿವುಡ್ ಮಗಧೀರ; ಚಾಮುಂಡೇಶ್ವರಿ ದರ್ಶನ ಪಡೆದ ರಾಮ್ ಚರಣ್!

ಮೊನ್ನೆಯಿಂದಲೇ ರಾಮ್ ಚರಣ್ ತೇಜಾ (Ram Charan) ಮೈಸೂರಿನಲ್ಲಿಯೇ ಇದ್ದರು. ಬಹು ಕೋಟಿ ಗೇಮ್ ಚೇಂಜರ್ (Game Changer) ಚಿತ್ರದ ಶೂಟಿಂಗ್ ಇಲ್ಲಿ ನಡೆಯುತ್ತಿತ್ತು. ಇದಕ್ಕಾಗಿಯೇ ಹೈದರಾಬಾದ್‌ನಿಂದ ಇಲ್ಲಿಗೆ ಆಗಮಿಸಿದ್ದರು. ಚಿತ್ರೀಕರಣದ ಬ್ರೇಕ್ ಸಮಯದಲ್ಲಿ ರಾಮ್ ಚರಣ್ ಚಾಮುಂಡೇಶ್ವರಿ (Chamundeshwari Temple) ಬೆಟ್ಟಕ್ಕೂ ಭೇಟಿ ಕೊಟ್ಟಿದ್ದಾರೆ.

ಅಂದ್ರೆ ಭಾನುವಾರ ಗೇಮ್ ಚೇಂಜರ್ ಚಿತ್ರದ ಶೂಟಿಂಗ್ (Shooting Complete) ಕಂಪ್ಲಟ್ ಮಾಡಿದ್ದಾರೆ. ಹಾಗಾಗಿಯೇ ವಾಪಸ್ ಹೋಗುವ ಮೊದಲು ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ. ಆ ವೇಳೆ ತೆಗೆದ ಫೋಟೋಗಳು ಇದೀಗ ಹೆಚ್ಚು ಗಮನ ಸೆಳೆಯುತ್ತಿವೆ. ಸೋಷಿಯಲ್ ಮಿಡಿಯಾದಲ್ಲೂ ಇವು ಹರಿದಾಡುತ್ತಿವೆ. ಇವುಗಳು ಸೇರಿದಂತೆ ಚಿತ್ರದ ಇತರ ಮಾಹಿತಿ ಈ ಒಂದು ಸ್ಟೋರಿಯಲ್ಲಿದೆ ಓಮ್ಮೆ .

ರಾಮ್ ಚರಣ್ ಆಗಾಗ ಬೆಂಗಳೂರಿಗೆ ಬಂದು ಹೋಗ್ತಾರೆ!

ರಾಮ್ ಚರಣ್ ತೇಜಾ ಆಗಾಗ ಕರ್ನಾಟಕಕ್ಕೆ ಬರ್ತಾನೇ ಇರ್ತಾರೆ. ಬೆಂಗೂರಿನ ದೇವನಹಳ್ಳಿ ಬಳಿಯೇ ಇವರ ಫಾಮ್ ಹೌಸ್ ಕೂಡ ಇದೆ. ರವಿಚಂದ್ರನ್ ಕೊಟ್ಟ ಜಾಗದಲ್ಲಿಯೇ ಚಿರಂಜೀವಿ ಒಂದು ಫಾಮ್ ಹೌಸ್ ಮಾಡಿದ್ದಾರೆ. ಅಲ್ಲಿಯೇ ರಾಮ್ ಚರಣ್ ಬರ್ತಾನೇ ಇರ್ತಾರೆ.

ಗೇಮ್ ಚೇಂಜರ್ ಆಗಿಯೇ ಬಂದಿದ್ದ ರಾಮ್‌ ಚರಣ್‌

ಆದರೆ ಈ ಸಲ ನೇರವಾಗಿ ಮೈಸೂರಿಗೆ ಬಂದಿದ್ದಾರೆ. ಇಲ್ಲಿ ಗೇಮ್ ಚೇಂಜರ್ ಚಿತ್ರದ ಶೂಟಿಂಗ್ ಪ್ಲಾನ್ ಆಗಿತ್ತು. ಆ ಕಾರಣಕ್ಕೇನೆ ಮೊನ್ನೆಯಿಂದಲೇ ರಾಮ್ ಚರಣ್ ಮೈಸೂರಿನಲ್ಲಿದ್ದರು. ಡೈರೆಕ್ಟರ್ ಎಸ್.ಶಂಕರ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.

ಬಹು ಕೋಟಿ ವೆಚ್ಚದ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್‌

ಗೇಮ್‌ ಚೇಂಜರ್ ಚಿತ್ರ ಬಹು ಕೋಟಿಯಲ್ಲಿ ರೆಡಿ ಆಗುತ್ತಿದೆ. 400 ಕೋಟಿ ವೆಚ್ಚದಲ್ಲಿಯೇ ಇದು ತಯಾರಾಗುತ್ತಿದೆ. ಸಿನಿಮಾದ ಕಂಟೆಂಟ್ ಸ್ಪೆಷಲ್ ಆಗಿದೆ. ಪೊಲಿಟಿಕಲ್ ಆಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಹಾಗೆ ವಿಶೇಷ ಕಂಟೆಂಟ್ ಇರೋ ಈ ಚಿತ್ರದ ಮೈಸೂರು ಶೆಡ್ಯೂಲ್ ಭಾನುವಾರ ಪೂರ್ಣಗೊಂಡಿದೆ. ಶೂಟಿಂಗ್‌

ಗೇಮ್ ಚೇಂಜರ್ ಸಿನಿಮಾ ಮುಂದಿನ ವರ್ಷ ರಿಲೀಸ್‌

ಚಿತ್ರೀಕರಣ ಮುಗಿದ್ಮೇಲೆ ರಾಮ್ ಚರಣ್ ತೇಜಾ ನೇರವಾಗಿ ಹೈದ್ರಾಬಾದ್‌ಗೆ ಹೊರಟು ಹೋಗಿಲ್ಲ. ಬದಲಾಗಿ ಚಾಮುಂಡಿ ಬೆಟ್ಟಕ್ಕೆ ತೆರೆಳಿದ್ದರು. ತಾಯಿ ಚಾಮುಂಡೇಶ್ವರಿಯ ದರುಶನ ಪಡೆದಿದ್ದಾರೆ. ದರುಶನ ಪಡೆದೇ ಹೈದ್ರಾಬಾದ್‌ಗೆ ಪಯಣ ಬೆಳೆಸಿದ್ದಾರೆ.

ರಾಮ್‌ ಚರಣ್ ತೇಜಾ ಫೋಟೋ ಫುಲ್ ವೈರಲ್

ರಾಮ್ ಚರಣ್ ತೇಜಾ ನಟನೆಯ ಗೇಮ್ ಚೇಂಜರ್ ಚಿತ್ರ ಮುಂದಿನ ವರ್ಷ ರಿಲೀಸ್ ಆಗುತ್ತಿದೆ. ಕಿಯಾರಾ ಅಡ್ವಾಣಿ ಇಲ್ಲಿ ರಾಮ್ ಚರಣ್‌ಗೆ ಜೋಡಿ ಆಗಿದ್ದಾರೆ. ಥಮನ್ ಎಸ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಇನ್ನುಳಿದಂತೆ ಚಾಮುಂಡಿ ಬೆಟ್ಟಕ್ಕೆ ರಾಮ್ ಚರಣ್ ತೇಜಾ ಭೇಟಿಕೊಟ್ಟ ಫೋಟೋ ವೈರಲ್ ಆಗಿವೆ.

ಹೆಚ್ಚಿನ ಸುದ್ದಿ