Tuesday, August 11, 2026
HomeUncategorizedಮೇಯರ್ಸ್ ಕಪ್–2026 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ

ಮೇಯರ್ಸ್ ಕಪ್–2026 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ

ವಿಜಯಪುರ: ವಿಜಯಪುರ ನಗರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಪೊಲೀಸ್ ಕವಾಯತು ಮೈದಾನದಲ್ಲಿ ಮೇಯರ್ಸ್ ಕಪ್–2026 ಕ್ರಿಕೆಟ್ ಟೂರ್ನಮೆಂಟ್ ಜರುಗಲಿದೆ. ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ, ಪಾಲ್ಗೊಂಡಿದ್ದ ತಂಡಗಳಿಗೆ ಶುಭಹಾರೈಸಿದೆ.

ಮಹಾನಗರ ಪಾಲಿಕೆ ತಂಡ, ಪಾಲಿಕೆ ಸದಸ್ಯರ ತಂಡ, ಕಂದಾಯ ಇಲಾಖೆ ತಂಡ, ವಕೀಲರ ತಂಡ, ಮಾಧ್ಯಮ ತಂಡ ಸೇರಿದಂತೆ ಸುಮಾರು 10ತಂಡಗಳು ಪಾಲ್ಗೊಂಡಿವೆ.

ಇದು 10 ಓವರ್ ಗಳ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ವಿಜೇತ ತಂಡಕ್ಕೆ ಹಾಗೂ ಉತ್ತಮ ಬ್ಯಾಟ್ಸ್’ಮನ್- ಉತ್ತಮ ಬೌಲರ್ ಗಳಿಗೆ ವಿಶೇಷ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಇಂತಹ ಕ್ರೀಡಾ ಚಟುವಟಿಕೆಗಳು ಕ್ರೀಡಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ.

ಹೆಚ್ಚಿನ ಸುದ್ದಿ