Saturday, June 13, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಮುಂಡಗೋಡದಲ್ಲಿ ಶ್ರೀ ಡಿ ಕೆ ಶಿವಕುಮಾರ ಆವರ ಕರ್ನಾಟಕ ಸರ್ಕಾರದ  ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ...

ಮುಂಡಗೋಡದಲ್ಲಿ ಶ್ರೀ ಡಿ ಕೆ ಶಿವಕುಮಾರ ಆವರ ಕರ್ನಾಟಕ ಸರ್ಕಾರದ  ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು,  ಅದಕ್ಕಾಗಿ ನಾಳೆ ಸಂಜೆ 4:30 ಗಂಟೆಗೆ ಮುಂಡಗೋಡದ ಶಿವಾಜಿ ಸರ್ಕಲ್ ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯೋತ್ಸವ ಕಾರ್ಯಕ್ರಮವನ್ನು ‘ತಾಲೂಕ ಬ್ಲಾಕ್ ಕಾಂಗ್ರೆಸ ಸಮಿತಿ’ ವತಿಯಿಂದ ಆಯೋಜಿಸಲಾಗಿದೆ

ಮುಂಡಗೋಡ: ಆತ್ಮೀಯ ಕಾಂಗ್ರೆಸ್ ಪಕ್ಷದ ಮುಖಂಡರೆ ಘಟಕದ ಅಧ್ಯಕ್ಷರೆ ಹಾಗೂ ಕಾರ್ಯಕರ್ತರೆ,ದಿನಾಂಕ :03-06-26 ರಂದು ಬುಧವಾರ  ಸಂಜೆ 4:00 ಗಂಟೆಗೆ ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ  ಡಿ ಕೆ ಶಿವಕುಮಾರ್ ರವರು ಕರ್ನಾಟಕ ಸರ್ಕಾರದ  ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು,  ಅದಕ್ಕಾಗಿ ನಾಳೆ ಸಂಜೆ 4:30 ಗಂಟೆಗೆ ಮುಂಡಗೋಡದ ಶಿವಾಜಿ ಸರ್ಕಲ್ ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಾಗಾಗಿ ಕಾಂಗ್ರೆಸ್ ಪಕ್ಷದ  ಮುಖಂಡರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರು ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು,  ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ  ಪದಾಧಿಕಾರಿಗಳು, ವಿವಿಧ ಶೆಲ್ ಗಳ ಅಧ್ಯಕ್ಷರು ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ  ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು   ಶ್ರೀ ಡಿ ಕೆ ನಡಗೇರ ಮತ್ತು ಶ್ರೀ ಕೃಷ್ಣ ಎಚ್ ಹಿರೇಹಳ್ಳಿ ಅವರು ಹೇಳಿದ್ದಾರೆ…

ಶ್ರೀ ಡಿ ಕೆ ನಡಗೇರ
ಅಧ್ಯಕ್ಷರು ತಾಲೂಕ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಮುಂಡಗೋಡ

ಶ್ರೀ ಕೃಷ್ಣ ಎಚ್ ಹಿರೇಹಳ್ಳಿ
ಅಧ್ಯಕ್ಷರು ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಂಡಗೋಡ

ವರದಿ: ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ