ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೈಕ್ಷಣಿಕ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡೆದು ಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಾರಾಯಣಪುರ ಠಾಣೆ ಪಿಎಸ್‌ಐ ರಾಜಶೇಖರ ರಾಠೋಡ್ ಹೇಳಿದರು.
ಮಾರನಾಳ ದೊಡ್ಡ ತಾಂಡಾ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಎರಡನೇ ಹಂತದ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಸಹ ಪೋಷಕರ ಕನಸು ನನಸು ಮಾಡಲು ನಿರಂತರ ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಕೊಡೇಕಲ್ ಠಾಣೆ ಪಿಎಸ್‌ಐ ಅಯ್ಯಪ್ಪ ಮಾತನಾಡಿ, ಮಕ್ಕಳು ಶಾಲೆಯ ಆಟ-ಪಾಠದ ಜತೆಗೆ ಪಠೇತರ ಚಟುವಟಿಕೆಗೂ ಆದ್ಯತೆ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಮೊಬೈಲ್ ಬಿಟ್ಟು ಹೆಚ್ಚು ಓದಿನತ್ತ ಗಮನಹರಿಸಬೇಕು ಎಂದರು. ಅಲ್ಲದೇ ದಿನ
ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾಮುನಾಯಕ್, ಗ್ರಾಪಂ ಸದಸ್ಯರಾದ ನಾರಾಯಣ ನಾಯಕ್, ದೊಡ್ಡದೀರಪ್ಪನಾಯಕ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗಣೇಶ ನಾಯಕ್,ಸದಸ್ಯ ರೇಖಪ್ಪ ನಾಯಕ್, ಶಿಕ್ಷಣ ಪ್ರೇಮಿ ಮೋತಿಲಾಲ್ ನಾಯಕ್, ಪ್ರಧಾನ ಗುರುಗಳಾದ ಆನಂದ ಕರಿಹೋಲ್, ಶಿಕ್ಷಕರಾದ ಪವಿತ್ರಾ ಸೇರಿ ಅನೇಕ ಅತಿಥಿ ಶಿಕ್ಷಕರು, ಗಣ್ಯರು ಪಾಲ್ಗೊಂಡಿದ್ದರು.
ಜಿಲ್ಲಾ ವರದಿದಿಗಾರರು : ಶಿವು ರಾಠೋಡ