ಚನ್ನಮ್ಮನ ಕಿತ್ತೂರು: ಕಾದರವಳ್ಳಿ : ಸಾವಿತ್ರಿಬಾಯಿ ಪುಲೆಯವರು ತಾವು ಶಿಕ್ಷಿತರಾಗಿ ದೇಶದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ದಾರಿ ದೀವಿಗೆಯಾಗಿ ಸಮಾಜದ ಶೋಷಿತ ವರ್ಗವಾಗಿದ್ದ ಮಹಿಳೆಯ ಸಬಲೀಕರಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಡಾ.ಗಜಾನನ ಸೊಗಲನ್ನವರ ಹೇಳಿದರು.
ಕಾದರವಳ್ಳಿ ಗ್ರಾಮದ ಎಸ್ ವಿ ಕುಲಕರ್ಣಿ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಹಾಗೂ ಪೋಷಕ-ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿತ್ರಿಬಾಯಿ ಪ್ರಥಮ ಶಿಕ್ಷಕಿಯಾಗಿ ಸ್ವತಃ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ಪ್ರಾರಂಭಿಸಿದ್ದರು. ಸರ್ಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಲಿಕಾ ಪರಿಸರ ನಿರ್ಮಾಣ ಮತ್ತು ಕಲಿಕಾ ಚಟುವಟಿಕೆಗಳ ಕುರಿತು ಮತ್ತು ಶೈಕ್ಷಣಿಕ ಪ್ರಗತಿ ಚರ್ಚೆಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಹಶಿಕ್ಷಕ ಎ.ಎಸ್.ಪೂಜಾರ ಮಾತನಾಡಿ, ಪೋಷಕ-ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವಿವರಿಸಿದರು. ಮುಖ್ಯೋಪಾದ್ಯಾಯ ಎಸ್. ಎನ್.ಗುಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ.ತುರಮರಿ, ಎಂ.ಕೆ.ನಾವಲಗಿ, ಎಸ್ .ಡಿ.ಎಂ.ಸಿ. ಸದಸ್ಯರಾದ ರುದ್ರಪ್ಪ ಹೈಬತ್ತಿ, ಈರಣ್ಣ ಗಣಾಚಾರಿ, ಶಿವಲಿಂಗಪ್ಪ ಹುಗ್ಗಿ, ಬಸವಂತಪ್ಪ ಕಳಸಣ್ಣವರ, ಬಾಬು ಧರೆನ್ನವರ, ಮಡಿವಾಳೆಪ್ಪ ನೀರಲಕಟ್ಟಿ, ಈರಯ್ಯ ಪೂಜಾರ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಹನಮಂತ ಬಿರಾದಾರ ಪಾಟೀಲ
