Monday, February 9, 2026
HomeUncategorizedಭದ್ರಾವತಿ-ಅಣ್ಣಾವ್ರು,ಅಪ್ಪುವಿಗೆ ಅಭಿಮಾನದ ಗುಡಿ: ಕಂಚಿನ ಪ್ರತಿಮೆಗಳ ಲೋಕಾರ್ಪಣೆ

ಭದ್ರಾವತಿ-ಅಣ್ಣಾವ್ರು,ಅಪ್ಪುವಿಗೆ ಅಭಿಮಾನದ ಗುಡಿ: ಕಂಚಿನ ಪ್ರತಿಮೆಗಳ ಲೋಕಾರ್ಪಣೆ

ಭದ್ರಾವತಿ: ಡಾ.ರಾಜಕುಮಾರ್ ಹಾಗು ಡಾ.ಪುನೀತ್ ರಾಜಕುಮಾರ್ ಅವರು ಈ ನಾಡಿಗೆ ಸಲ್ಲಿಸಿರುವ ಸೇವೆಯನ್ನು ಯಾರು ಸಹ ಮರೆಯಲು ಸಾಧ್ಯವಿಲ್ಲ. ಇವರಿಬ್ಬರ ಬದುಕು ಪ್ರತಿಯೊಬ್ಬರಿಗೂ ಆದರ್ಶ ವಾಗಿದ್ದು, ಅಭಿಮಾನಿಗಳು ಇವರಿಬ್ಬರ ಹೆಸರಿನ ದೇವಾಲಯ ನಗರದಲ್ಲಿ ನಿರ್ಮಿಸಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.

ಗುರುವಾರ ಬಿ.ಎಚ್ ರಸ್ತೆ. ಮಾರುಕಟ್ಟೆ ಸಮೀಪ ಅಭಿಮಾನಿಗಳಿಂದ ನೂತನವಾಗಿ ನಿರ್ಮಿಸಿರುವ ವರನಟ ಡಾ.ರಾಜಕುಮಾರ್ ಹಾಗು ಕರ್ನಾಟಕ ರತ್ನ ಪುನೀತ್ ರಾಜಕುಮಾರ್‌ ರವರ ದೇವಾಲಯ ಹಾಗು ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಈ ದೇವಾಲಯದಲ್ಲಿ ಪ್ರತಿದಿನ ಧಾರ್ಮಿಕ ಆಚರಣೆಗಳು ನಡೆಯಲಿವೆ ಎಂದರು.

ಅಭಿಮಾನಿಗಳಿಂದ ನಿರ್ಮಿಸಿರುವ ವರನಟ ಡಾ.ರಾಜಕುಮಾರ್ ಹಾಗು ಕರ್ನಾಟಕ ರತ್ನ ಪುನೀತ್ ರಾಜಕುಮಾರ್‌ ರವರ ದೇವಾಲಯ ಹಾಗು ಕಂಚಿನ ಪ್ರತಿಮೆಗಳನ್ನು ಅಶ್ವಿನಿ ರಾಜಕುಮಾರ್ ಲೋಕಾರ್ಪಣೆ ಗೊಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಎಸ್. ಕುಮಾರ್, ನಗರಸಭೆ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಮಾತನಾಡಿ, ನಗರದಲ್ಲಿ ಡಾ.ರಾಜ ಕುಮಾರ್ ಹಾಗು ಡಾ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಬಳಗ ತುಂಬಾ ದೊಡ್ಡ ಪ್ರಮಾಣ ದಲ್ಲಿದೆ. ಇವರಿಬ್ಬರ ಹೆಸರಿನಲ್ಲಿ ಕೇವಲ ದೇವಾಲಯ ಮಾತ್ರವಲ್ಲ ಪ್ರಮುಖ ರಸ್ತೆಗಳಿಗೆ ಇವರಿಬ್ಬರ ಹೆಸರನ್ನು ನಾಮಕರಣಗೊಳಿಸಲಾಗಿದೆ ಎಂದರು.

ವೇದಿಕೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಪ್ರಮುಖರಾದ ಎಂ.ಶ್ರೀಕಾಂತ್, ಬಿ.ಕೆ.ಜಗನ್ನಾಥ್, ಬಿ.ಕೆ ಶಿವಕುಮಾರ್, ಎಚ್.ಎಲ್ ಷಡಾಕ್ಷರಿ, ಬಿ.ಎಸ್. ಗಣೇಶ್, ಬಿ.ಎಸ್ ಬಸವೇಶ್,ನಗರಸಭೆ ಸದಸ್ಯರಾದ ಜಾರ್ಜ್, ಬಸವರಾಜ್ ಬಿ ಆನೆಕೊಪ್ಪ, ಡಾ.ರಾಜಕುಮಾರ್ ಮತ್ತು ಡಾ.ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಪದಾಧಿ ಕಾರಿಗಳಾದ ಅಧ್ಯಕ್ಷ ಬಿ.ಎಂ ಅರ್ಪಿತ್ ಕುಮಾರ್(ಅಪ್ಪು), ಜಿ.ಕೆ ದೇವೇಂದ್ರ (ದೇವ), ವೆಂಕಟೇಶ್, ಲಲಿತ್ ಕುಮಾರ್, ಬಿ.ಟಿ ರವಿಕುಮಾರ್, ಎಲ್. ಶಂಕರ್,ವೆಂಕಟೇಶ್, ಗೋಪಿ, ಭೂಮಿನಾಥನ್, ಮಹೇಶ್, ಎಲ್. ಶಂಕರ್, ಸುಮನ್, ಸುನೀಲ್, ರಕ್ಷಿತ್, ಅಮೋಘ, ಪ್ರಜ್ವಲ್, ನಿತಿನ್, ಮದನ್ ಮತ್ತು ಕೆ.ಸಿ ಮನು ಹಾಗು ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು, ಅಧ್ಯಕ್ಷರು, ಪದಾಧಿಕಾರಿಗಳು ಸೇರಿ ದಂತೆ ವಿವಿಧ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ