Monday, December 23, 2024
HomeUncategorizedಬೋನಾಳ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ 275 ನೇ ಜಯಂತಿ ಆಚರಣೆ.

ಬೋನಾಳ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ 275 ನೇ ಜಯಂತಿ ಆಚರಣೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನಾಳ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ 275 ನೇ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಸುರಪುರ ಸಂಸ್ಥಾನದ ಯುವ ರಾಜರಾದ ರಾಜಾ ಲಕ್ಮಿ ನಾರಾಯಣ್ ನಾಯಕ್ ಬಹರಿ ಬಹಾದ್ದೂರ್ ರವರು ಹಜರತ್ ಟಿಪ್ಪು ಸುಲ್ತಾನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ನಂತರ ಹಜರತ್ ಟಿಪ್ಪು ಸುಲ್ತಾನ್ ಬಳಗದ ಯುವಕರು ಮತ್ತು ಎಲ್ಲಾ ಗಣ್ಯ ಮಹನೀಯರು ಸೇರಿ ಸುರಪುರ ಸಂಸ್ಥಾನದ ಯುವ ರಾಜರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಹಜರತ್ ಟಿಪ್ಪು ಸುಲ್ತಾನರ ಬಗ್ಗೆ ಬಹಳ ವಿಸ್ತಾರವಾಗಿ ರಾಹುಲ್ ಹುಲಿಮನಿ, ಮತ್ತು ರಾಮು ನಾಯಕ ಅವರು ಮಾತನಾಡಿದರು. ಹಾಗೂ ಹತ್ತನೇ ತರಗತಿ ಮತ್ತು 12ನೇ ತರಗತಿ ಉತ್ತೀರ್ಣರಾದರಿಗೆ, ರಾಜ್ಯಮಟ್ಟಕ್ಕೆ ಆಯ್ಕೆಯಾದ ಎರಡು ವಿದ್ಯಾರ್ಥಿಗಳು ಕಬ್ಬಡಿ ಪಂದ್ಯಾವಳಿಯಲ್ಲಿ ಸನ್ಮಾನಿಸಲಾಯಿತು.

ಮಹಾಂತೇಶ್ ದೇವರ ಗೋನಾಲ ಅವರು ಹಜರತ್ ಟಿಪ್ಪು ಸುಲ್ತಾನರ ಬಗ್ಗೆ ಬಹಳ ಅದ್ಭುತ ನುಡಿಗಳನ್ನು ತಿಳಿಸಿದರು ಮತ್ತು ಎಲ್ಲಾ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಎಂದು ಹೇಳಿದರು , ಈ ಸಂದರ್ಭದಲ್ಲಿ ವಜಾಹತ್ ಹುಸೇನ್ ಉಸ್ತಾದ, ಶಿವಲಿಂಗ ಹಸನಾಪುರ, ಆಬಿದ್ ಪಗಡಿ, ಊರಿನ ಹಿರಿಯರಾದ
ಸಂಗನಗೌಡ ಬೆಳ್ಳಿ, ವಿಶ್ವನಾಥ್ ರೆಡ್ಡಿ, ಗುಲಾಮ್ ಹುಸೇನ್, ಖತಾಲ್ ಸಾಬ, ಪಾಡೆಸಾಬ್, ಲಾಲಸಾಬ್ ಮುಲ್ಲಾ , ನಬಿಸಾಬ್, ಮುನ್ವರಸಾಬ್ ಹಜರತ್ ಟಿಪ್ಪು ಸುಲ್ತಾನ್ ಸಂಘದ ತಾಲೂಕ ಅಧ್ಯಕ್ಷರು, ಶೇಖ್ ಅಲಿ ಹಜರತ್ ಟಿಪ್ಪು ಸುಲ್ತಾನ ಸಂಘದ ಬೋನಾಳ ಅಧ್ಯಕ್ಷರು ಹಾಗೂ ಹಜರತ್ ಟೀಪ್ಪು ಸುಲ್ತಾನ ಸೇವಾ ಸಂಘ ಬೋನಾಳ ಗ್ರಾಮದ ಹಿರಿಯರು. ಮುಖಂಡರು. ಯುವಖರು. ಮಹಿಳೆಯರು. ಸದಸ್ಯರು ಉಪಸ್ಥಿತರಿದ್ದರು.

ವರದಿಗರರು : ಶಿವು ರಾಠೋಡ ಯಾದಗಿರಿ

ಹೆಚ್ಚಿನ ಸುದ್ದಿ