Are there crypto casinos in Sydney au

  1. Strategies To Win Roulette At Casino: Spin the reels of your favourite casino pokies online at our top casino, Betway Casino, and experience an internet gambling site like no other.
  2. Best Casino Payouts In Australia - We truly understand the importance that you want to be able to play a trusted slot game at a trusted casino and this is why we only ever endorse scam free games that are completely trustworthy.
  3. European Roulette Odds Calculator Uk: That means you should stay up to speed with the latest results, forms, transfers, roster alterations, and news coming from the games competitive scene.

Live australian roulette online crypto casino

Best Australia Online Casino Ask Gamblers
Its time to take it back to days of yore in IGTs 5-reel extravaganza, Medieval Money.
Slots Welcome Bonus Canada
In conclusion, it is important to understand the terms related to a bonus before claiming the bonus.
Be as it may, lets take a critical look at what ZAR players stand to gain from CasinoCasino.

Menominee cryptocurrency casino Canberra

Ditobet Casino No Deposit Bonus 100 Free Spins
All pokies Casino India has a great loyalty program for its most loyal players.
Roulette Casino Numbers
Bonuses & promotions are guaranteed to be issued at the moment.
Slot Rocket Reels By Hacksaw Gaming Demo Free Play

Thursday, April 17, 2025
Homeಜಿಲ್ಲಾ ಸುದ್ದಿಗಳುಬೈರತಿ ಸುರೇಶ ಬೆಂಬಲಿಗನಿಂದ ದಲಿತ ವಿದ್ಯಾರ್ಥಿ ಹಾಗೂ ಮಹಿಳೆ ಮೇಲೆ ದೌರ್ಜನ್ಯ ಕಠಿಣ ಕ್ರಮಕ್ಕೆ ದಲಿತ...

ಬೈರತಿ ಸುರೇಶ ಬೆಂಬಲಿಗನಿಂದ ದಲಿತ ವಿದ್ಯಾರ್ಥಿ ಹಾಗೂ ಮಹಿಳೆ ಮೇಲೆ ದೌರ್ಜನ್ಯ ಕಠಿಣ ಕ್ರಮಕ್ಕೆ ದಲಿತ ಒಕ್ಕೂಟ ಆಗ್ರಹ

ಬೆಂಗಳೂರು ನೆ 06 :
ಅಪ್ರಾಪ್ತ ವಿದ್ಯಾರ್ಥಿಯನ್ನು ನಗ್ನಗೊಳಿಸಿ, ಮಾರಣಾಂತಿಕವಾಗಿ ಥಳಿಸಿ, ದಲಿತ ಸಮುದಾಯದ ಆತನ ತಾಯಿಗೆ ಜಾತಿ ನಿಂದನೆ ಮಾಡಿ, ಆಶ್ಲೀಲವಾಗಿ ನಿಂದಿಸಿ, ಅವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿರುವ ಸಂತೋಷ್ ಕುಮಾರ್ ಮತ್ತು ಲಕ್ಷ್ಮಿನಾರಾಯಣ ಅಲಿಯಾಸ್ ಮೋನಿ ಇವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ-1989 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ತಿದ್ದುಪಡೆ ಕಾಯ್ದೆ- 2015ರ ಅಡಿಯಲ್ಲಿ ಬಂಧಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದೇವೆ ಎಂದು ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರಾದ ಪಿ. ಮೂರ್ತಿ ತಿಳಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಸಂಚಾಲಕ ಗುರುಮೂರ್ತಿ, ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಕೇಶವಮೂರ್ತಿ, ಬಾಲಕೃಷ್ಣ , ಬಾಬು, ಮರಿಸ್ವಾಮಿ, ಚಂದನ್ ರಾವ್, ಸಂಗೀತ, ಮೀನಾ ಸೇರಿದಂತೆ ಗಣ್ಯರೂ ಭಾಗಿ.

ಮೀನಾ ಬಿ ತಂದೆ ಬಂಗಾರಪ್ಪ ಇವರು ಪರಿಶಿಷ್ಟ ಜಾತಿಗೆ ಸೇರಿದ್ದು ಗಂಗಾನಗರದಲ್ಲಿ ವಾಸವಾಗಿದ್ದಾರೆ. ಇವರು ಇಬ್ಬರು ಮಕ್ಕಳು ಮತ್ತು ತಮ್ಮ ತಾಯಿ ಜೊತೆ ಒಟ್ಟಿಗೆ ವಾಸ ಮಾಡುತ್ತಿದ್ದಾರೆ. ಗಂಗಾನಗರದ 3ನೇ ರಸ್ತೆಯಲ್ಲಿರುವ ಪಿ.ಡಬ್ಲ್ಯು.ಡಿ. ಕ್ಲಾಸ್ ಒನ್ ಗುತ್ತಿಗೆದಾರ ಸಂತೋಷ್ ಕುಮಾರ್ ಇವರ ಚಿಕ್ಕಪ್ಪನ ಮನೆಯಲ್ಲಿ ಮೀನಾ ಬಿ ಇವರ ಚಿಕ್ಕಮ್ಮ ವಾಸ ಮಾಡುತ್ತಿದ್ದು, ಸಂತೋಷ್ ಕುಮಾರ್ ತಂಗಿ ಚೈತ್ರಾ ಮತ್ತು ಮೀನಾ ಬಿ ಇವರ ಚಿಕ್ಕಮ್ಮ ಸುಮಾರು 15 ವರ್ಷಗಳಿಂದ ಸ್ನೇಹಿತೆಯರಾಗಿರುತ್ತಾರೆ. ಮೀನಾ ಬಿ ಮೊದಲನೇ ಮಗ ಆರ್.ತೇಜಸ್ ಒಂದನೇ ವರ್ಷದ ಡಿಪ್ಲೋಮಾ ಇನ್ ಸಿವಿಲ್ ಇಂಜನೀಯರಿಂಗ್ ಓದುತಿದ್ದು ಚೈತ್ರಾ ಇವರಿಗೆ ಪರಿಚಯವಾಗಿರುತ್ತಾನೆ. 10ನೇ ತರಗತಿ ಓದುತ್ತಿರುವ ಚೈತ್ರಾ ಇವರ ಮಗಳು ಸಹ ಪರಿಚಯವಾಗಿರುತ್ತಾಳೆ. ಎಲ್ಲರೂ ಪರಸ್ಪರ ಅನ್ನೋನ್ಯತೆಯಿಂದ ಇರುತ್ತಾರೆ.

ಇದ್ದಕ್ಕಿದ್ದಂತೆ ಮೀನಾ ಬಿ ಇವರ ಮನೆಯಲ್ಲಿ ಇಟ್ಟಿದ್ದ ಸುಮಾರು ಮೂರುವರೆ ಲಕ್ಷ ಬೆಲೆಬಾಳುವ ಒಡವೆ ಕಾಣೆಯಾಗುತ್ತದೆ. ಇದರಿಂದ ಆತಂಕವಾಗಿ ಆರ್.ಟಿ.ನಗರ ಪೋಲೀಸ್ ಠಾಣೆಯಲ್ಲಿ ಮಾರ್ಚ್ 31, 2024ರಂದು ದೂರು ಕೊಡುತ್ತಾರೆ. ಈ ಕುರಿತು ಆರ್.ತೇಜಸ್ ಇವನನ್ನು ವಿಚಾರಿಸಲಾಗಿ, ಚೈತ್ರಾ ಆಂಟಿ ತನ್ನ ಮಗಳ ಶಾಲಾ ಫೀಜಿಗೆ ಮತ್ತಿತರ ಅಗತ್ಯಗಳಿಗೆ ಅರ್ಜೆಂಟಾಗಿ ಹಣದ ಅವಶ್ಯಕತೆ ಇದೆ ಎಂದು ಕೇಳಿದರು. ಅದಕ್ಕೆ ನಿನ್ನ ಒಡವೆ ಗಿರವಿ ಅಂಗಡಿಯಲ್ಲಿ ಆಟೋ ಡ್ರೈವರ್ ಜಗದೀಶ್ ಮೂಲಕ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೆ ಅಡ ಇಟ್ಟು ಅದರಲ್ಲಿ 80,000/- ರೂ. ಚೈತ್ರಾ ಆಂಟಿಗೆ, ಆಟೋ ಡ್ರೈವರ್ ಜಗದೀಶ್ ಇವರಿಗೆ 20,000/-ರೂ. ಕೊಟ್ಟು ಉಳಿದ 20,000/- ರೂ. ಖರ್ಚು ಮಾಡಿರುವುದಾಗಿ ತಿಳಿಸುತ್ತಾನೆ. ಆಗ ಆಟೋ ಡ್ರೈವರ್ ಜಗದೀಶ್ 20.000/-ರೂ ಹಿಂದಿರುಗಿಸುತ್ತಾನೆ. ಆದರೆ ಮೀನಾ ಬಿ ಇವರು ಚೈತ್ರಾ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ. ನಂತರ ಚೈತ್ರಾ ತನ್ನಲ್ಲಿ ಉಳಿದಿರುವ ಸ್ವಲ್ಪ ಹಣ ಇವರಿಗೆ ಹಿಂದಿರುಗಿಸಿದ್ದಾರೆ. ಆ ನಂತರವೂ ಈ ಎರಡು ಕುಟುಂಬಗಳ ನಡುವೆ ಉತ್ತಮ ಸಂಬಂಧವಿರುತ್ತದೆ.

ಈ ನಡುವೆ, ಆಗಸ್ಟ್ 15ರಂದು ಪಿ.ಡಬ್ಲ್ಯು.ಡಿ. ಕ್ಲಾಸ್ ಒನ್ ಗುತ್ತಿಗೆದಾರ ಸಂತೋಷ್ ಕುಮಾರ್ ಮೀನಾ ಬಿ ಇವರ ಮಗ ಆರ್.ತೇಜಸ್ ಇವನನ್ನು ಮನೆಗೆ ಕರೆಸಿಕೊಂಡು ಅವನ ಐ ಫೋನ್ ಕಿತ್ತುಕೊಂಡು ಸುಮಾರು 2ಗಂಟೆವರೆಗೆ ಚೆಕ್ ಮಾಡಿ, ಇನ್ನು ಮುಂದೆ ನನ್ನ ತಂಗಿ ಮಗಳ ಜೊತೆ ಮಾತನಾಡಬೇಡ, ಆಗಸ್ಟ್ 18ನೇ ತಾರೀಖು ನಡೆಯುವ ಗಣೇಶ ಉತ್ಸವದಲ್ಲಿ ಭಾಗವಹಿಸಬೇಡ, ಹಾಗೇನಾದರೂ ಮಾಡಿದರೆ ನಿನ್ನ ಸಾಯಿಸಿ ತಿಥಿ ಮಾಡಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿ ಮೊಬೈಲ್ ಕೊಟ್ಟು ಕಳುಹಿಸಿದ್ದಾನೆ. ಇದರಿಂದ ಭಯಭೀತನಾಗಿ, ಪ್ರತಿ ವರ್ಷ ಗಣೇಶ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಆರ್.ತೇಜಸ್ ಈ ಬಾರಿ ಗಣೇಶ ಉತ್ಸವದಲ್ಲಿ ಭಾಗವಹಿಸದೇ ದೂರವಿರುತ್ತಾನೆ.

ಅಗಸ್ಟ್ 21ನೇ ತಾರೀಯಿ ಬೆಳಿಗ್ಗೆ 8ಗಂಟೆಗೆ ಗಂಗೇನಹಳ್ಳಿ ವಾರ್ಡ್ ನಂಬರ್ 34ರ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಅಲಿಯಾಸ್ ಮೋನಿ ಆರ್.ತೇಜಸ್ ಇವನ ಮೊಬೈಲ್ ಸಂಖ್ಯೆ 9972703575ಗೆ ಕರೆ ಮಾಡಿ, ಸಿ.ಬಿ.ಐ ರಸ್ತೆಯಲ್ಲಿರುವ ಕಾಫಿ ಡೇ ಹತ್ತಿರ ಬರುವಂತೆ ತಿಳಿಸಿ, ಅಲ್ಲಿಂದ ಹೆಬ್ಬಾಳದ ವೆಟರ್ನರಿ ಕಾಲೇಜ್ ಕ್ಯಾಂಪಸ್ಸಿನ ಫುಟ್ಬಾಲ್ ಮೈದಾನಕ್ಕೆ ಕರೆದುಕೊಂಡು ಹೋಗಿ, ಸಂತೋಷ್ ಕುಮಾರ್ಗೆಗೆ ಕರೆ ಮಾಡಿ ಕರೆಸಿಕೊಳ್ಳುತ್ತಾನೆ. ಅಲ್ಲಿಂದ ನಿರ್ಜನ ಪ್ರದೇಶವಾಗಿರುವ ಪಿಗ್ ಫಾರ್ಮಿಗೆ ಅವನನ್ನು ಎಳೆದುಕೊಂಡು ಹೋಗುತ್ತಾರೆ. ಆಗ ಸಂತೋಷ್ ಕುಮಾರ್ ಜಾತಿ ನಿಂದನೆ ಮಾಡಿ, ಆರ್.ತೇಜಸ್ ಇವನ ತಾಯಿಗೆ ಆಶ್ಲೀಲವಾಗಿ ಬೈಯ್ಯು, ನನ್ನ ತಂಗಿ ಮಗಳ ಜಿತೆ ಯಾಕೆ ಸಲಿಗೆಯಿಂದ ಇದ್ದೀಯಾ? ನೀನು ಇನ್ನೆಂದೂ ನಮ್ಮ ಮನೆ ಕಡೆ ಕಾಣಿಸಬಾರದು, ಹಾಗೇ ಮಾಡುತ್ತೇನೆ ಇರು, ಬೋಳಿ ಮಗನೇ, ಎಂದು ಆಕ್ರೋಶದಿಂದ ಒದ್ದು, ಕೆಳಗೆ ಬೀಳಿಸಿ, ಕತ್ತಿನ ಮೇಲೆ ಕಾಲಿಟ್ಟು ತುಳಿಯುತ್ತಾನೆ. ನಂತರ ಅವನ ಬಟ್ಟೆ ಬಿಚ್ಚಿ, ಬೆತ್ತಲೆ ಮಾಡಿ, ಮರ್ಮಾಂಗಕ್ಕೆ ಹೊಡೆದು, ಅವನ ಮೊಬೈಲ್ ಕಿತ್ತುಕೊಂಡು ವೀಡಿಯೋ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ಯಾರಿಗಾದರೂ ತಿಳಿಸಿದರೇ, ಸದರಿ ವೀಡಿಯೋವನ್ನು ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡಿ, ನಂತರ ಬಟ್ಟೆ ಕೊಟ್ಟು, ಇಮೇಲ್ ಪಾಸ್ ವರ್ಡ್, ಫೋನ್ ಸ್ಟೀನ್ ಲಾಕ್ ಓಪನ್ ಮಾಡುವ ವಿವರ ಪಡೆದು ಪುನಹ ಕಾಫಿ ಡೇ ಹತ್ತಿರ ಕರೆದುಕೊಂಡು ಹೋಗಿ, ಅಲ್ಲಿ ಅಂಡರ್ ಪಾಸ್ ಕಾರ್ ಪಾರ್ಕಿಂಗಿನಲ್ಲಿರುವ ಲಕ್ಷ್ಮಿನಾರಾಯಣ ಆಲಿಯಾಸ್ ಮೋನಿ ಇವರ ಸಂಬಂಧಿಕರ ಶೆಡ್ಡಿನಲ್ಲಿರುವ ರೂಮಿನಲ್ಲಿ ಕೂಡಿ ಹಾಕಿ ಮನಬಂದಂತೆ ಮಾರಣಾಂತಿಕವಾಗಿ ಥಳಿಸಿದ್ದಾರೆ.

ಆಗಸ್ಟ್ 21ನೇ ತಾರೀಖು ಬೆಳಿಗ್ಗೆ 8ಗಂಟೆಯಿಂದ 10ಗಂಟೆ ಅವಧಿಯಲ್ಲಿ ಈ ಎಲ್ಲಾ ಘಟನೆಗಳು ನಡೆದಿರುತ್ತವೆ. ಅಂದು ಮಧ್ಯಾನ್ನ ಮೀನಾ ಬಿ ಮನೆ ಹತ್ತಿರ ಬಂದು ಲಕ್ಷ್ಮಿನಾರಾಯಣ ಆಲಿಯಾಸ್ ಮೋನಿ ಹೆದರಿಕೆ ಹುಟ್ಟಿಸುವ ರೀತಿಯಲ್ಲಿ ಗುರಾಯಿಸಿ ಹೋಗಿದ್ದಾನೆ. ತೀವ್ರವಾಗಿ ಥಳಿತಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಆರ್. ತೇಜಸ್ ನೋವಿನಿಂದ ಜ್ವರ ಬಂದು ಹಾಸಿಗೆ ಹಿಡಿಯುತ್ತಾನೆ. ಯಾವುದೇ ಕಾರಣವಿಲ್ಲದೇ ಸಂತೋಷಕುಮಾರ್ ಮತ್ತು ಲಕ್ಷ್ಮಿ ನಾರಾಯಣ ಅಲಿಯಾಸ್ ಮೋನಿ ಮಾಡಿರುವ ಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಸಂಪೂರ್ಣವಾಗಿ ತನ್ನ ತಾಯಿಗೆ ವಿವರಿಸಿದ್ದಾನೆ. ದೊಡ್ಡವರ ಸಹವಾಸ ನಮಗೇಕಪ್ಪಾ, ನಮಗೆ ಹಿಂದೆಮುಂದೆ ಯಾರೂ ಇಲ್ಲ. ಇನ್ನು ಮೇಲೆ ಯಾರ ಸ್ನೇಹಿತರ ಸಹವಾಸಕ್ಕೂ ನೀನು ಹೋಗಬೇಡ ಎಂದು ತಾಯಿ ಬುದ್ಧಿವಾದ ಹೇಳಿ, ಆಗಿರುವ ಘಟನೆಯನ್ನು ಮರೆಸಲು ಪ್ರಯತ್ನಿಸಿದ್ದಾರೆ.

ಆದರೇ, ಮೀನಾ ಬಿ ಇವರ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರದ, ಅವರ ಪಕ್ಕದ ರಸ್ತೆಯಲ್ಲಿ ವಾಸವಿರುವ ಲಕ್ಷ್ಮಿನಾರಾಯಣ ಅಲಿಯಾಸ್, ಮೋನಿ ಗಂಗೇನಹಳ್ಳಿ ವಾರ್ಡ್ 34ರ ಕಾಂಗ್ರೆಸ್ ಅಧ್ಯಕ್ಷ, ಸಂತೋಷಕುಮಾರ್ ಇವನ ಪ್ರಚೋದನೆಯಿಂದ ದಿನಾಂಕ 23-08-2024ರಂದು ಮೀನಾ ಬಿ ಇವರ ನಂಬರ್ 9591026129 ತನ್ನ ಮೊಬೈಲ್ ನಂಬರ್ 9880304439ನಿಂದ ಕರೆ ಮಾಡಿ. ನಮ್ಮ ಮನೆ ಸಂಸಾರ ಹಾಳು ಮಾಡೀದ್ದೀಯಲ್ಲೇ ಎಂದು ಅತ್ಯಂತ ಅಶ್ಲೀಲ ಪದಗಳಿಂದ ನಿಂದಿಸಿ, ನಿನ್ನ ಮಗ ನನ್ನ ಕಣ್ಣಿಗೆ ಕಾಣಿಸಬಾರದು, ಬೇಗ ಮನೆ ಖಾಲಿ ಮಾಡು, ನಿನ್ನ ಮಗ ಫೇಕ್ ಆಕೌಂಟ್ ಮಾಡಿದ್ದಾನೆ ಎಂದು ದಾಖಲಿಸಲು ಸಾಧ್ಯವಾಗದ ಆಶ್ಲೀಲ ಬೈಗುಳದಿಂದ ಮನಸ್ಸಿಗೆ ತೋಚಿದಂತೆ ಅವಾಚ್ಯವಾಗಿ ನಿಂದಿಸಿದ್ದಾನೆ. ಪರಿಶಿಷ್ಟ ಜಾತಿಯ ಮಹಿಳೆಯಾದ ಅವರ ಗೌರವಕ್ಕೆ ಧಕ್ಕೆ ತಂದಿದ್ದಾನೆ. ನನ್ನ ಮಗ ತಪ್ಪು ಮಾಡಿದ್ದರೇ, ದೂರು ಕೊಟ್ಟು, ಜೈಲಿಗೆ ಹಾಕಿಸಿ, ಶಿಕ್ಷೆ ಕೊಡಿಸಿ ಎಂದಿದ್ದಕ್ಕೆ, ಕಂಪ್ಲೇಂಟ್ ಗಿಂಪ್ಲೇಂಟ್ ನಮ್ಮ ಜಿಂದಗೀಲೇ ಇಲ್ಲ. ನಿಮ್ಮನ್ನು ಸುಟ್ಟು ಹಾಕಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿ, ನೀವು ಕಾಣೀಸ್ಕೋಬಾರ್ದು, ಬೇಗ ಮನೆ ಖಾಲಿ ಮಾಡು, ನಿನ್ನ ಮಗ ನಿನ್ನ ಗಂಡನಿಗೆ ಹುಟ್ಟಿದ್ದಾನೋ ಅಥವಾ ಕಸ ಗುಡುಸುವವರಿಗೇನಾದರೂ ಹುಟ್ಟಿದ್ದಾನಾ, ಎಂದು ನಗರದ ಸ್ವಚ್ಛತೆ ಕಾಪಾಡುವ ಇಡೀ ಪೌರ ಕಾರ್ಮಿಕ ಸಮುದಾಯವನ್ನೂ ನಿಂದಿಸಿದ್ದಾನೆ.

(ಲಕ್ಷ್ಮಿನಾರಾಯಣ ಆಲಿಯಾಸ್ ಮೋನಿ ಹಾಗೂ ಮೀನಾ ಬಿ ಇವರ ನಡುವೆ ನಡೆದ ಮೊಬೈಲ್ ಫೋನ್ ಸಂಭಾಷಣೆಯ ಸಿ.ಡಿ.ಯನ್ನು ಲಗತ್ತಿಸಲಾಗಿದೆ).

ಈ ರೀತಿ ಪದೇ ಪದೇ ಮೀನಾ ಬಿ ಇವರಿಗೆ ಫೋನ್ ಕರೆ ಮಾಡಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕುವುದು ನಿರಂತರವಾಗಿ ಲಕ್ಷ್ಮಿನಾರಾಯಣ ಅಲಿಯಾಸ್ ಮೋನಿ ಮಾಡಿರುತ್ತಾನೆ. ಮಾರನೇ ದಿನ, ದಿನಾಂಕ 24-08- 2024ರಂದು ಅವರ ಮೊಬೈಲ್ ನಂಬರ್ಗೆ ಪುನಹ ಕರೆ ಮಾಡಿ, ಏ ನೀನು ಅವ್ರ ಹತ್ತಿರ, ಆ ಮಣಿ ಹತ್ರ ಹೇಳ್ಕೊಂಡಿದ್ದೀಯಂತೆ, ಅವನು ನೀನು ಬಂದು ಏನು ಕಿತ್ತೊಳ್ಳಕೆ ಆಗಲ್ಲ ಎಂದು ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಇವನ ಗೂಂಡಾಗಿರಿಗೆ, ಪ್ರಾಣ ಬೆದರಿಕೆಗೆ ಹೆದರಿ ಮೀನಾ ಬಿ ತನ್ನ ಮಗನನ್ನು ಅವನು ಓದುತ್ತಿದ್ದ ಕಾಲೇಜ್‌ ನಿಂದ ಬಿಡಿಸಿ, ಬೇರೆ ಕಾಲೇಜಿಗೆ ಅಡ್ಮಿಷನ್ ಮಾಡಿಸಿದ್ದಾರೆ. ತನ್ನ ಕಿರಿ ಮಗ ಮತ್ತು ವಯಸ್ಸಾದ ತಾಯಿ ಜೊತೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು, ಗೌರವ ಕಳೆದುಕೊಂಡು, ಉಸಿರು ಬಿಗಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಸಂತೋಷ್ ಕುಮಾರ್ ಮತ್ತು ಲಕ್ಷ್ಮಿ ನಾರಾಯಣ ಅಲಿಯಾಸ್ ಮೋನಿ ಇವರಿಂದ ಅಥವಾ ಇವರ ಕಡೆಯವರಿಂದ ಯಾವ ಘಳಿಗೆಯಲ್ಲಾದರೂ ತಮ್ಮ ಕೊಲೆಯಾಗಬಹುದು ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಈ ಕುಟುಂಬಕ್ಕೇನಾದರೂ ಅನಾಹುತವಾದಲ್ಲಿ ಇವರೇ ಕಾರಣರಾಗಿರುತ್ತಾರೆ. ಈಗಲೂ ಆರ್.ತೇಜಸ್ ಇವನ ಐ ಫೋನ್ ಸಂತೋಷ್ ಕುಮಾ‌ರ್ ಹತ್ತಿರವೇ ಇದೆ.

ಆದುದರಿಂದ, ಆನಾವಶ್ಯಕವಾಗಿ ಅಪ್ರಾಪ್ತ ವಿದ್ಯಾರ್ಥಿ ಆರ್.ತೇಜಸ್ ಇವನನ್ನು ಬೆತ್ತಲೆ ಮಾಡಿ, ಮಾರಣಾಂತಿಕವಾಗಿ ಥಳಿಸಿ, ಪರಿಶಿಷ್ಟ ಜಾತಿಯ ಆತನ ತಾಯಿಯನ್ನು ಒಂದು ಮಹಿಳೆ ಎಂದೂ ಪರಿಗಣಿಸದೇ, ಅತ್ಯಂತ ಅಶ್ಲೀಲವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿ, ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿ, ಕಣ್ಣಿಗೆ ಕಾಣಿಸಿದರೆ, ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕುವುದಾಗಿ ಪ್ರಾಣ ಬೆದರಿಕೆ ಹಾಕಿರುವ ಸಂತೋಷ್ ಕುಮಾರ್ ಮತ್ತು ಲಕ್ಷ್ಮಿನಾರಾಯಣ ಅಲಿಯಾಸ್ ಮೋನಿ ಇವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ- 1989 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ತಿದ್ದುಪಡೆ ಕಾಯ್ದೆ-2015ರ ಆಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನಿನ ಕ್ರಮ ಕೈಗೊಂಡು, ಆರೋಪಿಗಳನ್ನು ತ್ವರಿತವಾಗಿ ಬಂಧಿಸಿ, ನೊಂದ ಕುಟುಂಬಕ್ಕೆ ರಕ್ಷಣೆ ಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ.

ಹೆಚ್ಚಿನ ಸುದ್ದಿ