Thursday, March 26, 2026
Homeಜಿಲ್ಲಾ ಸುದ್ದಿಗಳುಬೇಡ್ತಿ–ವರದಾ ನದಿ ಜೋಡಣೆ: ಗುರಿ ಮುಟ್ಟುವ ತನಕ ಹೋರಾಟ – ಮಂಜುನಾಥ್ ಕುನ್ನೂರ

ಬೇಡ್ತಿ–ವರದಾ ನದಿ ಜೋಡಣೆ: ಗುರಿ ಮುಟ್ಟುವ ತನಕ ಹೋರಾಟ – ಮಂಜುನಾಥ್ ಕುನ್ನೂರ

ಹಾವೇರಿ: ಬೇಡ್ತಿ–ವರದಾ ನದಿ ಜೋಡಣೆ ನನ್ನ ಬಹು ದಿನಗಳ ಹೋರಾಟವಾಗಿದ್ದು, 1995ರಿಂದಲೇ ಈ ಯೋಜನೆ ನನ್ನ ನಿರೀಕ್ಷೆಯಾಗಿದೆ ಎಂದು ಮಾಜಿ ಸಂಸದ ಮಂಜುನಾಥ್ ಕುನ್ನೂರ ಹೇಳಿದರು.

ಹಾವೇರಿ ಜಿಲ್ಲೆಯ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರಗೊಳ್ಳಲು ಈ ಯೋಜನೆ ಅಗತ್ಯವಾಗಿದ್ದು, ಮುಂದಿನ ಪೀಳಿಗೆಗೆ ಉಪಯೋಗ ವಾಗುವ ನಿಟ್ಟಿನಿಂದ ಎಲ್ಲರೂ ಸೇರಿ ಸಂಘಟಿತರಾಗಿ ಗುರಿ ಮುಟ್ಟುವ ತನಕ ಹೋರಾಟ ನಡೆಸಬೇಕಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ತೀವ್ರ ಒತ್ತಡ ಹೇರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಡಿಪಿಆರ್‌ನಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕವಾಗಿ ನೀರು ಮೀಸಲಿಡುವ ವ್ಯವಸ್ಥೆ ಕಡ್ಡಾಯವಾಗಬೇಕು. ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.
ಒಂದೇ ನಿಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡನ್ನೂ ಭೇಟಿ ಮಾಡಲಿದೆ ಎಂದು ತಿಳಿಸಿದರು.ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಜನಜಾಗೃತಿ ಸಭೆಗಳನ್ನು ಆಯೋಜಿಸಲಾಗುವುದು.
ವರದಾ ಬೇಡ್ತಿ ನದಿಯ ಮೇಲೆ ಅವಲಂಬಿತ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

ತಜ್ಞರ ಸಭೆ ಹಾಗೂ ಕಾನೂನಾತ್ಮಕ ವಿಚಾರಗಳ ಪರಿಶೀಲನೆಗಾಗಿ ಪ್ರತ್ಯೇಕ ತಂಡ ರಚಿಸಲಾಗಿದ್ದು, ಹುಕ್ಕೇರಿ ಸದಾಶಿವ ಶ್ರೀಗಳ ನೇತೃತ್ವದಲ್ಲಿ ನಿಯೋಗಗಳು ಸರ್ಕಾರವನ್ನು ಭೇಟಿ ಮಾಡಲಿವೆ. ಜೊತೆಗೆ ಗದಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗುವುದು.

ಮುಂದಿನ ದಿನಗಳಲ್ಲಿ ಭಾರೀ ಜನಾಂದೋಲನ ರೂಪಿಸಲಾಗಿದ್ದು, ಶಿರಸಿಯಲ್ಲಿ ನಡೆದ ಸಮಾವೇಶಕ್ಕಿಂತಲೂ ದೊಡ್ಡ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಸಂಸದ ಮಂಜುನಾಥ್ ಕುನ್ನೂರ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಸಂಸದ ಮತ್ತು ಮಾಜಿ ಶಾಸಕ ಬಸವರಾಜ ಬೊಮ್ಮಾಯಿ,
ಶಾಸಕರಾದ ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಯಶಿರಖಾನ್ ಪಠಾಣ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸಂಜೀವ ನೀರಲಗಿ, ರೈತ ಮುಖಂಡರಾದ ರಾಮಣ್ಣ ಕಂಚೆಳ್ಳರ ಮತ್ತು ಮಲ್ಲಿಕಾರ್ಜುನ ಬಳ್ಳಾರಿ,ಹಾಗೂ ಆನಂದ ಗೆಡ್ಡೆದೇವರಮಠ, ಜಿಲ್ಲೆಯ ಎಲ್ಲಾ ಮಠದ ಶ್ರೀಗಳು
ರೈತರು ಹಾವೇರಿ ಜಿಲ್ಲೆಯ ಎಲ್ಲಾ ಸಂಘಟನೆ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ವರದಿಗಾರರು: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ