ಬೆಂಗಳೂರು, ಫೆ 16 (ಕರ್ನಾಟಕ ವಾರ್ತೆ):
ಬೆಂಗಳೂರಿನ ವಿವಿಧ ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಭಾಗವಹಿಸುವ ಸಲುವಾಗಿ ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಇಂದು ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್. ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಮಾನ್ಯ ಕೇಂದ್ರ ರಕ್ಷಣಾ ಸಚಿವರನ್ನು ಹೆಚ್.ಎ.ಎಲ್. ಸಿ.ಎಂಡಿ ಡಾ ಸುನೀಲ್, ಬಿ.ಇ.ಎಲ್. ಸಿಎಂಡಿ ಮನೋಜ್ ಜೈನ್, ಬಿ.ಇ.ಎಂ.ಎಲ್ ಸಿ.ಎಂ.ಡಿ ಶಾಂತನುರಾಯ್, ಬಿ.ಡಿಎಲ್ ಸಿಎಂಡಿ ಮದೇವ್ ರಾವ್, ಲೆಫ್ಟಿನೆಂಟ್ ಜನರಲ್ ಜೆ.ಕೆ. ಗೇರಾ, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಸ್ವಾಗತಿಸಿದರು.
ಮಾನ್ಯ ರಕ್ಷಣಾ ಸಚಿವರು
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
