Monday, February 9, 2026
Homeಜಿಲ್ಲಾ ಸುದ್ದಿಗಳುಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಪ್ರಕರಣ - ಕೇಶ್ವಾಪುರ ಇನ್ಸ್‌ಪೆಕ್ಟ‌ರ್ ಕೆ.ಎಸ್‌ ಹಟ್ಟಿ ಎತ್ತಂಗಡಿ

ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಪ್ರಕರಣ – ಕೇಶ್ವಾಪುರ ಇನ್ಸ್‌ಪೆಕ್ಟ‌ರ್ ಕೆ.ಎಸ್‌ ಹಟ್ಟಿ ಎತ್ತಂಗಡಿ

ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಸ್ತ್ರ ಮಾಡಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಶ್ವಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಎಸ್ ಹಟ್ಟಿ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಪೊಲೀಸ್ ಕಮಿಷನ‌ರ್ ಕಚೇರಿಯಲ್ಲಿ ವರದಿ ಮಾಡಲು ಕಮಿಷನರ್ ಎನ್ ಶಶಿಕುಮಾ‌ರ್ ಅವರು ಆದೇಶಿಸಿದ್ದಾರೆ.

ಠಾಣೆಗೆ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳಲು ಗಂಟಿಕೇರಿ ಇನ್ಸ್‌ಪೆಕ್ಟ‌ರ್ ಜಾಧವ್‌ ಅವರನ್ನು ಸೂಚಿಸಲಾಗಿದೆ ಎಂದು ಕಮಿಷನ‌ರ್ ಎನ್ ಶಶಿಕುಮಾರ್ ಅವರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ