Friday, March 6, 2026
HomeUncategorizedಬಣ್ಣದ ಹಬ್ಬದ ಸಂಭ್ರಮದಲ್ಲಿ  ಮಿಂದೆದ್ದ  ಕಿತ್ತೂರು ಜನತೆ

ಬಣ್ಣದ ಹಬ್ಬದ ಸಂಭ್ರಮದಲ್ಲಿ  ಮಿಂದೆದ್ದ  ಕಿತ್ತೂರು ಜನತೆ

ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರುರಿನಲ್ಲಿ ಕಾಮನನ ಹಬ್ಬ ನಿಮಿತ್ತ ಕಿತ್ತೂರಿನ ಸಾರ್ವಜನಿಕರು ಬೇದ-ಭಾವ ಮಾಡಿದೆ ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಸಂಭ್ರಮಿಸಿದರು..
ಕಿತ್ತೂರು ಕೋಟೆಯ ಮುಂಭಾಗದಲ್ಲಿ ಮತ್ತು ಚನ್ನಮ್ಮ ನಗರದಲ್ಲಿ ಹಾಗೂ ಹಲವಾರು ಕಡೆ ತುಂತುರು ಹನಿಗಳ ಮಂಟಪದ ನಿರ್ಮಿಸಲಾಗಿತ್ತು ಅದರ ಕೆಳಗೆ ಕಿತ್ತೂರು ಹಾಗೂ ಸುತ್ತಮುತ್ತಲಿನ ಜನರು ಕುಣಿದು ಕುಪ್ಪಳಿಸಿದರು, ಸಾರ್ವಜನಿಕರು ತುಂತುರು ಹನಿ ಮಂಟಪ ಮಾಡಿಸಿದವರಿಗೆ ವಂದನೆಗಳು ಸಲ್ಲಿಸಿದರು.
ಕಿತ್ತೂರು ತುಂಬೆಲ್ಲ ಎಲ್ಲಿ ನೋಡಿದರೂ ಬಣ್ಣ ಕಾಣುತಿತ್ತು ಬಣ್ಣದಿಂದ ಮಿಂದೆದ್ದ ಜನರು ಎಲ್ಲ ಕಡೆ ಗೋಚರಿಸುತ್ತಿದ್ದರು.

ಸುಣಗಾರ ಓಣಿಯ ಮಲ್ಲೇಶ ಮಹಾದೇವಪ್ಪ ಸುಣಗಾರ (ಬೂದಿಹಾಳ) ಅವರ ಮನೆತನದಿಂದ ಅವರ ಮನೆ ಮುಂದೆ ಸಾರ್ವಜನಿಕರಿಗಾಗಿ ತಂಪಾದ ಅಂಬಲಿ ನೀಡಿ ಬಾಯಾರಿಕೆಯಿಂದ ದನಿದವರಿಗೆ ಅಂಬಲಿ ನೀಡಿದರು ಸಾರ್ವಜನಿಕರರಿಂದ  ಮೆಚ್ಚುಗೆ ಪಡೆಸಿಕೊಂಡರು..ಬೈಯಾರ ಓಣಿಯ ಪ್ರಮುಖರು ಇವರ ಅಂಬಲಿ ಸೇವೆ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು…..

ಅಂಬಲಿ ಸ್ವೀಕರಿಸಿ ಕುಡಿಯುತ್ತಿರುವ ಚಿತ್ರ

ಸಂಪಾದಕರು ಹಾಗೂ ವರದಿಗಾರರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

ಹೆಚ್ಚಿನ ಸುದ್ದಿ