Friday, November 21, 2025
Homeಬೆಂಗಳೂರುಬಡವರ ಅಕ್ಕಿಯಲ್ಲೂ ರಾಜಕೀಯ ಮಾಡಿದ ಕೇಂದ್ರ.! 5kg ಅಕ್ಕಿ ಹಣ ನೀಡುತ್ತಿದೆವೆ. ಸಚಿವ ಮುನಿಯಪ್ಪ

ಬಡವರ ಅಕ್ಕಿಯಲ್ಲೂ ರಾಜಕೀಯ ಮಾಡಿದ ಕೇಂದ್ರ.! 5kg ಅಕ್ಕಿ ಹಣ ನೀಡುತ್ತಿದೆವೆ. ಸಚಿವ ಮುನಿಯಪ್ಪ

ವಿಧಾನ ಪರಿಷತ್ನ ನಲ್ಲಿ  ಎಂಎಲ್ ಸಿ ಎನ್ ರವಿಕುಮಾರ್  ಅಕ್ಕಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು

ಉತ್ತಮ ಗುಣಮಟ್ಟದ ಅಕ್ಕಿಯನ್ನು ರಾಜ್ಯದ ಪಡಿತರದಾರರಿಗೆ ವಿತರಿಸುತ್ತದ್ದೇವೆ 

ಯಾವುದೇ ಟೆಂಡರ್ ಇಲ್ಲದೇ ನೇರವಾಗಿ ಕೇಂದ್ರ ಸಂಸ್ಥೆಗಳಾದ NCCF ,KB ಮೂಲಕ ನಾವು ಎಪ್ ಸಿ ಐ ನಿಗದಿಪಡಿಸಿದ ಧರದಲ್ಲಿಯೇ ಖರೀದಿಸಿದ್ದೇವೆ

ಕೇಂದ್ರದವರು ಮಾರುಕಟ್ಟೆಯಲ್ಲಿ ಅಕ್ಕಿಯನ್ನು 40 ರೂಗೆ ಖರೀದಿಸಿ ಜನರಿಗೆ ಭಾರತ್ ಬ್ರಾಂಡ್ ಯೋಜನೆಯಡಿ 29 ರೂಗಳಿಗೆ ನೀಡಿದರು ಇದರಿಂದ ಸುಮಾರು ಹಣ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ

ನಮ್ಮ ಸರ್ಕಾರ ಅಕ್ಕಿಯನ್ನು ಕೇಂದ್ರ ಸ್ವಾಮ್ಯದ ಸಂಸ್ಥೆಗಳಾದ ಕೇಂದ್ರೀಯಾ ಬಂಡಾರ,NCCF ಮೂಲಕ ಎಫ್ ಸಿ ಐ ನಿಗದಿ ಪಡಿಸಿರುವ ಧರ 34.60ಪೈಸೆ ಧರದಲ್ಲಿ ಖರೀದಿಸಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ವಿತರಿಸಲಾಗುತ್ತಿದೆ .

ಅಕ್ಕಿ ಖರೀದಿಯಲ್ಲಿ ನಾವು ಯಾವುದೇ ಟೆಂಡರ್ ಮಾಡದೇ ರಾಜ್ಯ ಪಡಿತರ ದಾರರಿಗೆ ಬೇಕಾದ ಅಕ್ಕಿಯನ್ನು ಖರೀದಿಸಿದ್ದೇವೆ‌.
ರಾಜ್ಯದಲ್ಲಿ 1.ಕೋಟಿ 27 ಲಕ್ಷ ಅದ್ಯತಾ ಪಡಿತರಕಾರ್ಡ್ಗಳಿದ್ದು ಅದರಲ್ಲಿ ಸುಮಾರು 4.ಕೋಟಿ 37 ಲಕ್ಷ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ ಧರದಂತೆ ಡಿಬಿಟಿ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ.

ನಮ್ಮ ರಾಜ್ಯದಲ್ಲಿ ಮಳೆಯ ಕೊರತೆಯಿಂದ ಅಕ್ಕಿಯನ್ನು ನಮಗೆ ಬೇಕಾದಷ್ಟು ಬೆಳೆಯಳು ಸಾದ್ಯವಾಗದ ಕಾರಣ ನಾವು ಅನ್ಯ ರಾಜ್ಯಗಳಾದ ತೆಲಂಗಾಣ,ಆಂದ್ರಪ್ರದೇಶ ,ಛತ್ತೀಸ್ಗಢ, ರಾಜ್ಯಗಳ ಮೂಲಕ ಅಕ್ಕಿಯನ್ನು ಖರೀದಿಸಲು ಮುಂದಾದಾಗ FCI ನಿಗದಿ ಪಡಿಸಿರುವ ಧರ 34 ರೂಗಳಿಗಿಂತಾ ಹೆಚ್ಚಾದ ಹಿನ್ನಲೆಯಲ್ಲಿ ನಾವು ಪಡಿತರ ದಾರರಿಗೆ ನೇರವಾಗಿ ಹಣಸಂದಾಯಮಾಡಿದ್ದೇವೆ.

ಕೇಂದ್ರ ಸರ್ಕಾರವು ನಮಗೆ ಅಕ್ಕಿಯನ್ನು ನೀಡಲು ರಾಜಕೀಯ ಮಾಡಿದ ಹಿನ್ನಲೆಯಲ್ಲಿ ನಾವು ಪಡಿತರದಾರರಿಗೆ ನೇರವಾಗಿ 5 ಕೆಜಿ ಅಕ್ಕಿಯ ಜೊತೆಗೆ ಉಳಿದ 5ಕೆಜಿ ಅಕ್ಕಿಗೆ ಹಣವನ್ನು ನೀಡಿದ್ದೇವೆ.

ರಜ್ಯ ಸರ್ಕಾರ ಹೆಚ್ಚುವರಿಯಾಗಿ ವಿತರಿಸಿದ13 ಲಕ್ಷ. ಪಡಿತರ ಕಾರ್ಡಗಳಲ್ಲಿ 35 ಲಕ್ಷ ಫಲಾನುಭವಿಗಳಿಗೆ ಅಕ್ಕಿ ಖರೀದಿಸಿ ವಿತರಿಸಲಾಗುತ್ತಿದೆ.

ಇದರಲ್ಲಿ ಯಾವುದೇ ಟಂಡರ್ ಇಲ್ಲದೇ ನಾವು ನೇರವಾಗಿ ಕೇಂದ್ರ ಸ್ವಾಮ್ಯಕ್ಕೆ ಒಳಪಡುವ ಸಂಸ್ಥಗಳ ಮೂಲಕ ನಾವು ಗುಣಮಟ್ಟದ ಗ್ರೇಡ್ 1 ಅಕ್ಕಿಯನ್ನು ರಾಜ್ಯದ ಪಡಿತರದಾರರಿಗೆ ವಿತರಿಸುತ್ತಿದ್ದೇವೆ ಎಂದು ಸದನದಲ್ಲಿ ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಉತ್ತರಿಸಿದರು

ಹೆಚ್ಚಿನ ಸುದ್ದಿ