ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಗುರುಗುಂಟಾ ವ್ಯಾಪ್ತಿಯ ಗೋಲಪಲ್ಲಿ ಬಳಿ ಮಂಗಳವಾರ ಕೆ.ಎಸ್.ಆರ್.ಟಿ. ಸಿ. ಬಸ್ ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣ ಧಾಖಲಿಸಲಾಗಿತ್ತು .
ಕಲ್ಲು ತುರಾಟದ ಪ್ರಕರಣ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಗುರುವಾರ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಗೋಲಪಲ್ಲಿ ಗ್ರಾಮದ ತಿಮ್ಮಣ್ಣ ಪಾಟೀಲ್ ಎಂದು ಗುರುತಿಸಲಾಗಿದೆ. ಆವಾಗ ತನ್ನ ಅಕ್ಕ, ಮಾವನಿಗೆ ಬೆಂಗಳೂರ ಹೋಗುವ ಸಮಯದಲ್ಲಿ ಸೀಟ್ ಸಿಗದಿದ್ದಕ್ಕೆ ಆಕ್ರೋಶಗೊಂಡ ತಾನು ತನ್ನ ಸ್ನೇಹಿತರು ಸೇರಿ ಪಾರ್ಟಿ ಮಾಡಿ. ಕುಡಿದ ಅಮಲಿನಲ್ಲಿ ಸರ್ಕಾರಿ ಬಸ್ಸುಗಳಿಗೆ ಮದ್ಯರಾತ್ರಿ ಏಕಾಯಿಕಿ ಕಲ್ಲು ತೂರಾಟ ಮಾಡಿರೊದು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಗೋಲಪಲ್ಲಿ ಬಳಿ ಕಲ್ಲು ತೂರಾಟದಲ್ಲಿ ಸಾರಿಗೆ ಸಂಸ್ಧೆಯ 3 ಬಸ್ಸಿನ ಕಿಟಕಿ ಹಾಗೂ ಗಾಜುಗಳು ಹೊಡೆದು ಹೋಗಿದ್ದವು, ಚಿತ್ತಾಪುರ ಡಿಪೋದ ಬಸ್ಸಿನ ಚಾಲಕ ಭದ್ರಪ್ಪ ಬಸ್ಸಿನ ಗಾಜು ಕಿಟಕಿಗಳು 79 ಸಾವಿರ ರೂಪಾಯಿ ಮೌಲ್ಯದ ಕಿಟಕಿ ಬಸ್ಸಿನ ಮುಂಭಾದ ಗಾಜುಗಳು ಹೊಡೆದು ಹಾನಿಯಾದ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳು ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ದಮತಿದೊಡ್ಡಿಯ ವ್ಯಕ್ತಿಯನ್ನು ಬಂಧಿಸಿದ್ದಾರೆ…..
ಇನ್ನುಳಿದ 4 ಜನ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಎಂದು ಹಟ್ಟಿ ಠಾಣೆಯ ಪಿಐ ಹೋಸಕೆರಪ್ಪ ಮಾಹಿತಿ ನೀಡಿದ್ದಾರೆ…
ವರದಿಗಾರರು : ಶಿವು ರಾಠೋಡ ರಾಯಚೂರು