Sunday, April 12, 2026
Homeಜಿಲ್ಲಾ ಸುದ್ದಿಗಳುಬೀದರ*ಪತ್ರಕರ್ತರ ರಾಜ್ಯ ಸಮ್ಮೇಳನದ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಿದ ಸಿ‌ಎಂ

*ಪತ್ರಕರ್ತರ ರಾಜ್ಯ ಸಮ್ಮೇಳನದ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಿದ ಸಿ‌ಎಂ

ಧ್ವನಿ ಇಲ್ಲದವರಿಗೆ ನ್ಯಾಯ ಒದಗಿಸುವ ಪತ್ರಕರ್ತರಿಗೆ ಗೌರವಿಸೋಣ: ಶ್ರೀ ನಿಜಗುಣಾನಂದ ಸ್ವಾಮೀಜಿ

ಬೀದರ ಏಪ್ರಿಲ್ 11 (ಕ.ವಾ.): ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದ 40ನೇ ರಾಜ್ಯ ಸಮ್ಮೇಳನದ ಮೆರವಣಿಗೆಗೆ ಏಪ್ರಿಲ್ 11 ರಂದು ಅದ್ದೂರಿ ಚಾಲನೆ ಸಿಕ್ಕಿತು.
ನಗರದ ಶ್ರೀ ಬಸವೇಶ್ವರ ಸಭಾಂಗಣದಲ್ಲಿ ನಡೆದ ವೇದಿಕೆಯಲ್ಲಿ ನೆರೆದಿದ್ದ ಸ್ವಾಮೀಜಿಗಳು, ಶಾಸಕರು, ಹಿರಿಯ ಪತ್ರಕರ್ತರು ಮತ್ತು ಇನ್ನೀತರ ಗಣ್ಯರು ಶಾಂತಿ ಸಂದೇಶದ 40 ಪರಿವಾಳಗಳನ್ನು ಹಾರಿ ಬಿಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ವೇದಿಕೆ ಮೇಲಿದ್ದ ಪತ್ರಕರ್ತರು ಮತ್ತು ಗಣ್ಯರು ತಲೆಗೆ ಪೇಟಾಸುತ್ತಿ 40‌ನೇ ರಾಜ್ಯ ಸಮ್ಮೇಳನದ ಸಾಂಕೇತಿಕವಾಗಿ 40 ಕೊಡಿಗಳನ್ನು ಹಿಡಿದು ಗಮನ ಸೆಳೆದರು.
ಪತ್ರಕರ್ತರನ್ನು ಗೌರವಿಸೋಣ: ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಬೈಲೂರನ ನಿಷ್ಕಲ‌ ಮಂಟಪದ ಶ್ರೀ
ನಿಜಗುಣಾನಂದ ಸ್ವಾಮೀಜಿ ಅವರು ಮಾತನಾಡಿ, ದೇವರು ಕಣ್ಣು ಮುಚ್ಚಿದಾಗ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ ಎನ್ನುವ ಭಾವನೆ ಸಮಾಜದಲ್ಲಿ ಬೇರೂರಿದೆ. ಒಳ್ಳೆಯ ಪತ್ರಕರ್ತರನ್ನು
ಗೌರವಿಸುವ ದೊಡ್ಡ ಕೆಲಸವನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ವೇಗವಾಗಿ ಬೆಳೆಯುತ್ತಿರುವ ಕಾಲಕ್ಕೆ ತಕ್ಕಂತೆ ಪತ್ರಿಕಾ ರಂಗವೂ ಬೆಳೆಯುತ್ತಿದೆ. ನ್ಯಾಯ ಇಲ್ಲದವರಿಗೆ ನ್ಯಾಯ ಒದಗಿಸುವ ಪತ್ರಕರ್ತರನ್ನು ನಾವೆಲ್ಲರೂ ಗೌರವಿಸೋಣ ಎಂದರು.
ಸಮಾರಂಭದಲ್ಲಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಎಲ್ಲ ರಂಗದಲ್ಲೂ ನ್ಯಾಯ ಪೀಠವನ್ನು ಪವಿತ್ರ ಎಂದೇ ಭಾವಿಸಿದ್ದೇವೆ. ಅದಕ್ಕೂ ಮಿಗಿಲಾದ ಕಾರ್ಯವನ್ನು ಪತ್ರಿಕಾರಂಗವು ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಪೌರಾಡಳಿತ ಸಚಿವರಾದ ರಹೀಂ ಖಾನ್, ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರದ ಬಿ ಕೆ ಪ್ರತಿಮಾ ಬಹೇನಜಿ, ಬಸವ ಪೀಠದ ಅಧ್ಯಕ್ಷರಾದ ಗಂಗಾಂಬಿಕೆ ಅಕ್ಕ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ‌ ತಗಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್, ಸಂಘದ ಜಿಲ್ಲಾಧ್ಯಕ್ಷರಾದ ಆನಂದ‌ ದೇವಪ್ಪ, ಅಡ್ಹಾಕ್ ಕಮಿಟಿಯ ಸದಸ್ಯರಾದ ಅಪ್ಪರಾವ್ ಸೌದಿ, ಶಿವಕುಮಾರ ಸ್ವಾಮಿ,
ಮೆರವಣಿಗೆ ಸಮಿತಿ ಪ್ರಧಾನ ಸಂಚಾಲಕರಾದ
ರಜನೀಶ ವಾಲಿ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ
ವಾಲಿ, ಗಂಧರ್ವ ಸೇನಾ,
ಮಾಳಪ್ಪ ಅಡಸಾರೆ, ಅಲಿ ಬಾಬಾ, ಅಶೋಕುಕುಮಾರ ಕರಂಜಿ, ಮಾರುತಿ ಭಾವಿದೊಡ್ಡಿ, ಸಿದ್ದು ಸ್ವಾಮಿ, ದೀಪಕ್ ವಾಲಿ, ಅಮರೇಶ ಎಸ್ ಚಿದ್ರಿ, ಹಾಜಿ ಪಾಶಾ, ಕರಣಕುಮಾರ ಚಂದನ, ಶ್ರೀಕಾಂತ ಬಿರಾದಾರ, ಶಶಿಕಾಂತ ಎಸ್ ಶೆಂಬೆಳ್ಳಿ,
ವೀರಶೆಟ್ಟಿ ಕುಂಬಾರ ಸೇರಿದಂತೆ ಇತರರು ಇದ್ದರು.
ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆಯು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ನಗರದ ಜನವಾಡ ರಸ್ತೆಯ ಝೀರಾ ಕನ್ವೆನ್ಶನ್ ಹಾಲಗೆ ಬಂದು ಸೇರಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿಸಿದ್ದ ಕಲಾ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಹೆಚ್ಚಿನ ಸುದ್ದಿ