
ಕಲಬುರಗಿ: ಕಾರ್ಮಿಕರ ಭರವಸೆಗಳನ್ನು, ಆಶ್ವಾಸನೆಗಳನ್ನು ಈಡೇರಿಸುವಲ್ಲಿ ನೆರವು ಸಂಘ ಪ್ರಧಾನಪಾತ್ರವಹಿಸುತ್ತದೆ. ಸಂಘದಲ್ಲಿ ಕೆಲಸ ಮಾಡುವಂತಹ ಎಲ್ಲಾ ಸದಸ್ಯರೂ ಅದರ ಧೈಯೋದ್ದೇಶಗಳಿಗೆ ಬೆಂಬಲ ನೀಡಬೇಕು. ಜತೆಗೆ ಎಲ್ಲಾ ಕಾರ್ಮಿಕರಿಗೆ ಆಶ್ವಾಸನೆಗಳ ಪೂರೈಕೆಗೂ ಪ್ರಯತ್ನಿಸಬೇಕು. ಶಾಹಾಬಾದ ತಾಲೂಕು ಸಂಘವು ಹಲವು ಆಶ್ವಾಸನೆಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯಮಟ್ಟದಲ್ಲಿ ಮಿಂಚುವಂತಾಗಲಿ ಎಂದು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ (ರೀ) ಕಲಬುರಗಿ ಜಿಲ್ಲಾ ಅಧ್ಯಕ್ಷರು ರಾಜು ದೊರೆ ಹೇಳಿದರು.
ಇಲ್ಲಿನ ಕಲಬುರಗಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಡೆಯಿತು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ (ರೀ) ಶಹಾಬಾದ ತಾಲೂಕು ಇದರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ (ನೋಂ) ಕಲಬುರಗಿ ಜಿಲ್ಲಾ ರಾಜು ಅಧ್ಯಕ್ಷರು ಅಧ್ಯಕ್ಷತೆವಹಿಸಿದ್ದರು.
ನೆರವು ಸಂಘ ರಾಜ್ಯಾಧ್ಯಕ್ಷರಾದ ಅಶ್ವಥ್ ಟಿ. ಮರಿಗೌಡ್ರು ಅವರ ಆದೇಶದ ಮೇರೆಗೆ, ಕಲಬುರಗಿ ಜಿಲ್ಲಾಧ್ಯಕ್ಷರಾದ ರಾಜು ದೊರೆ ಅವರ ನೇತೃತ್ವದಲ್ಲಿ ಶಹಾಬಾದ್ ತಾಲೂಕು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಶಹಾಬಾದ ತಾಲೂಕು ನೂತನ ಪದಾಧಿಕಾರಿಗಳ ವಿವರ ; ಅಧ್ಯಕ್ಷರು: ಈರಣ್ಣ (ಮಲ್ಲು)
ಉಪಾಧ್ಯಕ್ಷರು: ಜಾಕೀರ್
ಪ್ರಧಾನ ಕಾರ್ಯದರ್ಶಿ: ಎಂಡಿ ಫಿರೋಜ್
ಸಹ ಕಾರ್ಯದರ್ಶಿ: ಮೊಹಮ್ಮದ್ ಶರೀಫ್
ಸಹ ಕಾರ್ಯದರ್ಶಿ: ಮೊಹಮ್ಮದ್ ಸೌಕತ್
ಜಂಟಿ ಕಾರ್ಯದರ್ಶಿ: ಮೊಹಮ್ಮದ್ ಜಾವಿದ್
ಸಂಘಟನಾ ಕಾರ್ಯದರ್ಶಿ: ರಝಕ್ ಶೇಖ್
ಕಾರ್ಯಾಧ್ಯಕ್ಷರು: ಮೊಹಮ್ಮದ್ ಜಾಕಿರ್ ಇಂಗಳಗಿ
ಸಂಚಾಲಕರು: ಅಫ್ಜಲ್ ಹುಸೇನ್
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು: ಜೇವರ್ಗಿ ಪ್ರಧಾನ ಕಾರ್ಯದರ್ಶಿ ಬಂದೇನವಾಜ, ಬಾಹುದಿನ, ಅಬ್ದುಲ ಭಾಷಾ, ಶಿವಕುಮಾರ್, ಸಿದ್ದು ಮದನ್ಕರ್, ತಿಮ್ಮಯ್ಯಚೌದ್ರಿ, ನಾಗರಾಜ್ ದೊರೆ, ಜಾವೀದ್ ಗೊಲ್ಲ, ಕೆ. ಸಾಯಬಣ್ಣ ಹಾಗೂ ಇತರ ಉಪಸ್ಥಿತರು ಇದ್ದರು.
ಜಿಲ್ಲಾ ವರದಿಗಾರರು : ಶಿವು ರಾಠೋಡ
