ಮುಂಡಗೋಡ : ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವ =ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ದೊಡ್ಡ ಕೆರೆಯ ಸಮಗ್ರಹ ಅಭಿವೃದ್ಧಿ ಮಾಡುವಂತೆ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೇ ನಂಬರ್ 207 ರಲ್ಲಿ ಬರುವ ದೊಡ್ಡ ಕೆರೆ ಸುಮಾರು 17 ಎಕರೆಗಿಂತ ದೊಡ್ಡ ವಿಸ್ತೀರ್ಣ ಹೊಂದಿದ್ದು, ಬಾಚಣಿಕಿ ಜಲಾಶಯ ಹಾಗೂ ಸುತ್ತಮುತ್ತಲಿನ ಅರಣ್ಯ ಭಾಗದಿಂದ ಕಾಲುವೆಗಳ ಮೂಲಕ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ, ಈ ಕಾಲುವೆಗಳ ಕ್ಯಾಂಪ್ ನಂಬರ್ 6,8, ಮತ್ತು 9ರ ಮೂಲಕ ಸಾಗಿ ಕೆರೆ ತಲುಪುತ್ತದೆ. ಆದರೆ ಕೆಲವು ವೈಯಕ್ತಿಕ ಹಿತಾಸ ಕ್ತಿ ಗಾಗಿ ಕಾಲುವೆಗಳನ್ನು ಒತ್ತುವರೆ ಮಾಡಿಕೊಂಡಿದ್ದು, ಅಧಿಕಾರಿಗಳು ಕೆರೆ ಒತ್ತುವರೇ ತೆರವು ಗೊಳಿಸಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಳೆಗಾಲದಲ್ಲಿ ಕೆರೆ ತುಂಬಿದರೆ ಹೆಚ್ಚುವರೆ ನೀರು ಹೊರ ಹೋಗಲು ಸಮಸ್ಯೆ ಆಗುತ್ತಿದ್ದು , ಕೆರೆಯ ಗೇಟು ಹಾಳಾಗಿರುವುದೇ ಪ್ರಮುಖ ಕಾರಣವಾಗಿದೆ. ಗೀಟ್ ತಿರುಗಿಸುವ ಹ್ಯಾಂಡಲ್ ಗಳು ಮುರಿದರು ಅಧಿಕಾರಿಗಳು ಕರೆಯತ್ತಾ ತಿರುಗಿ ನೋಡಿದಿರುವುದು ಮಾತ್ರ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಆರು ತಿಂಗಳಿಗೊಮ್ಮೆ ಬದಲಾಗುತ್ತಾರೆ, ಆದರೆ ಕೆರೆ ಮಾತ್ರ ಅಭಿವೃದ್ಧಿ ಆಗಿಲ್ಲ ಎಂದು ಸ್ಥಳೀಯ ರೈತರು ದೂರುತ್ತಿದ್ದಾರೆ .
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ರೈತರ ಕೆರೆ ಕೆಲಸ ಮಾಡಿಕೊಂಡಿದ್ದು ಅಧಿಕಾರಿಗಳು ಏನು ಕೆಲಸ ಮಾಡಿಲ್ಲ ಎನ್ನಲಾಗಿದೆ .
ಕೆರೆ ನೀರು ಹೊರ ಹರಿವಿಗೆ ತೊಂದರೆ: ಮಳೆಗಾಲದಲ್ಲಿ ಕೆರೆ ತುಂಬಿದಾಗ ಹೆಚ್ಚುವರಿ ನೀರು ಹರಿದು ಹೋಗಲು ನಾಲೆಯ ವ್ಯವಸ್ಥೆ ಇಲ್ಲದ ಕೆರೆ ನೀರು ರೈತರ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಾ ದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೆರೆಯ ನೀರನ್ನು ಹೊರಹರಿವಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆರೆಯ ಅಕ್ಕಪಕ್ಕದ ರೈತರು ಆಗ್ರಹಿಸಿದ್ದಾರೆ .
ಹುನಗುಂದ ಗ್ರಾಮದ ರೈತರಿಗೆ ಹಾಗೂ ಜಾನುವಾರುಗಳಿಗೆ ಪ್ರಮುಖ ನೀರಿನ ಮೂಲವಾಗಿರುವ ದೊಡ್ಡ ಕೆರೆಗೆ ಹೋಗಲು ರಸ್ತೆ ಸಂಪರ್ಕವು ಸರಿಯಾಗಿ ಇಲ್ಲ, ಮಣ್ಣಿನ ರಸ್ತೆ ಯಾಗಿರುವುದರಿಂದ ಮಳೆಗಾಲದಲ್ಲಿ ದೊಡ್ಡ ದೊಡ್ಡ ಹೊಂಡ ಬಿದ್ದು, ಸಮಸ್ಯೆ ಆಗುತ್ತಾ ಇದ್ದು ರಸ್ತೆ ಸಂಪೂರ್ಣ ಕೆಸರು ಮಾಯವಾಗಿದೆ. ಹೊಲಗಳಿಗೆ ಟ್ರ್ಯಾಕ್ಟರ್. ಚಕ್ಕಡಿ. ಗಾಡಿ . ತೆಗೆದುಕೊಂಡು ಹೋಗಲು ಆಗುವುದಿಲ್ಲ ಗೊಬ್ಬರಗಳನ್ನು ಮೈ ಮೇಲೆ ಹೊತ್ತಿಕೊಂಡು ಹೋಗಬೇಕಾಗುತ್ತದೆ ಎಂದು ರೈತ ಸಂಗಪ್ಪ ಹೇಳಿದರು.
ಕೆರೆಯ ಒಡ್ಡು ಕೇವಲ ಮಣ್ಣಿನ ಮೇಲೆ ನಿಂತಿದ್ದು, ಯಾವುದೇ ರೀತಿಯಾಗಿ ಪಿಂಚಿಂಗ್ ಕೆಲಸ ನಡೆದಿಲ್ಲ, ಈಗಾಗಲೇ ಕೆರೆಯ ಒಡ್ಡಿನ ಮೇಲೆ ಎರಡು ಕಿಂಡಿ ಬಿದ್ದು ಕೊರತೆ ಆಗುತ್ತಾ ಇದ್ದು. ಕೆರೆಯ ತುಂಬಿದರೆ ಯಾವುದೇ ಕ್ಷಣದಲ್ಲಿ ಕೆರೆ ಒಡ್ಡು ಒಡಿದು ಹೋಗುವ ಅಪಾಯವಿದೆ. 2021 ರಿಂದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನ ವಾಗಿಲ್ಲ ಎಂಬುದು ರೈತರ ಅಳಿಲು ತೋಡಿಕೊಂಡಿದ್ದಾರೆ.
ಕೆರೆಯ ಅಭಿವೃದ್ಧಿಗಾಗಿ ಕೆರೆ ಸುತ್ತಮುತ್ತಲಿನ ಹೊಲಗಳ ರೈತರ ಸೇರಿ ನೇತಾಜಿ ಕೆರೆ ಬಳಕೆದಾರರ ಸಂಘ ಕಟ್ಟಿಕೊಂಡಿದ್ದು, ಸುಮಾರು ವರ್ಷಗಳಿಂದ ಕೆರೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು , ರೈತರಿಗೆ ಅನುಕೂಲ ಆಗುವ ಕೆಲಸ ಯಾರಿಂದಲೂ ಆಗಿಲ್ಲ ಎನ್ನುವುದು ತಿಳಿದು ಬಂದಿದೆ.
ಕೆರೆ ಅಭಿವೃದ್ಧಿ ವಿಚಾರವಾಗಿ ಲಕ್ಷಾಂತರ ರೂಪಾಯಿ ಬಿಡುಗಡೆಯಾಗಿ ಕಾಮಗಾರಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದರು ಇನ್ನುವರೆಗೂ ನಯಾ ಪೈಸ ಕೆಲಸ ಎಂಬುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ .
ಕೆರೆ ಸಮಸ್ಯೆ ಬಗೆಹರಿಯದಿದ್ದರೆ ದೊಡ್ಡಮಟ್ಟದಲ್ಲಿ ಸಣ್ಣ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ನೇತಾಜಿ ಕೆರೆ ಬಳಕೆದಾರರ ಸಂಘದ ಹನುಮಂತ್ ಗೌಡ ಶಿವನಗೌಡ ಪಾಟೀಲ್ . ಪಕೀರಪ್ಪ ಮಾದೇವಪ್ಪ ಬಿಸನಹಳ್ಳಿ . ಸಂಗಪ್ಪ ಶಿವಪ್ಪ ಆಲದಕಟ್ಟಿ. ಗ್ರಾಮಸ್ಥರು ಉಪಸ್ಥಿತ ಇದ್ದರು .-* ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೇವಲ ಫೋಟೋಸ್ ಶೂಟ್ ಗಾಗಿ ಬರುತ್ತಾರೆ ವಿನಹ : ಕೆರೆ ನಯಾ ಪೈಸ ಕೆಲಸ ಆಗಿಲ್ಲ, ಟಿಮಿಟಿಯನ್ನರು ಕೆರೆ ಕಾಲುವೆ ಒತ್ತೂವರೆ ಮಾಡಿದ್ದರು ತೆರವು ಮಾಡುವ ಧೈರ್ಯ ಅಧಿಕಾರಿಗಳು ತೋರುತ್ತಿಲ್ಲ .- ಮೌಲಾಲಿ ಹಜಾರೆ ಸಾಬ್ ಬಡಾನ್ನವರ್, ಅಧ್ಯಕ್ಷರು ನೇತಾಜಿ ಕೆರೆ ಬಳಕೆದಾರರ ಸಂಘ. ಹುನುಗುಂದ = ಹೊರಹರವಿಗೆ ತೊಂದರೆ: ಮಳೆಗಾಲದಲ್ಲಿ ಕೆರೆ ತುಂಬಿದಾಗ ಹೆಚ್ಚುವರೆ ನೀರು ಹರಿದು ಹೋಗಲು ನಾಲೆಯ ವ್ಯವಸ್ಥೆ ಇಲ್ಲದೆ ಕೆರೆ ನೀರು ರೈತರ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದ್ದು ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕೆರೆ ನೀರಿನ ಹೊರಹೊರವಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆರೆ ಅಕ್ಕಪಕ್ಕದ ರೈತರು ಆಗ್ರಹಿಸುತ್ತಿದ್ದಾರೆ .
ವರದಿ :ಬಿ ಎಸ್ ತೋಟಯ್ಯನವರ ಮುಂಡಗೋಡ್
