ಬೀದರ್: ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ನಿರಂತರವಾಗಿ ದೇಶಸೇವೆ ಸಲ್ಲಿಸಿ, ವಯೋಸಹಜ ನಿವೃತ್ತಿ ಹೊಂದಿರುವ ಜಿಲ್ಲೆಯ ಹೆಮ್ಮೆಯ ಸೇನಾನಿ ಶ್ರೀ ಜಗನಾಥ ರಾವ್ ಹುಗ್ಗೆಳ್ಳಿ ಅವರನ್ನು ಬೀದರ್ ಜಿಲ್ಲಾ ಟೋಕರೆ ಕೋಳಿ ಸಮಾಜ ಮುಖಂಡರು ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ದೇಶದ ಗಡಿ ಕಾಯುವ ಕಾಯಕದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದ ಹುಗ್ಗೆಳ್ಳಿ ಅವರ ಸೇವೆಯನ್ನು ಸಮಾಜದ ಮುಖಂಡರು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ದೇಶಕ್ಕಾಗಿ ತಮ್ಮ ಜೀವನದ ಬಹುಮುಖ್ಯ ಸಮಯವನ್ನು ಮುಡಿಪಾಗಿಟ್ಟ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ತಿಳಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಜಗನಾಥ ಜಮಾದಾರ್, ಸಮಾಜದ ನೌಕರರ ಸಂಘದ ಅಧ್ಯಕ್ಷರಾದ ರಾಜಕುಮಾರ್ ಕಾರ್ಣೀ, ಉಪಾಧ್ಯಕ್ಷರಾದ ತುಕಾರಾಮ ಸರ್, ಸಮಾಜ ಸಂಘದ ಉಪಾಧ್ಯಕ್ಷರಾದ ಸುನೀಲ ಖಾಸೆಂಪೂರ ಹಾಗೂ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್ ಉಪಸ್ಥಿತರಿದ್ದರು.
ಅಲ್ಲದೆ, ಬೀದರ್ ದಕ್ಷಿಣ ಅಧ್ಯಕ್ಷರಾದ ಸನ್ಮುಕಪ್ಪ ವಾಲಿಕಾರ, ಸಮಾಜದ ಹಿರಿಯರಾದ ನಾರಾಯಣರಾವ್ ಭಂಗಿ, ಶರಣಪ್ಪ ಖಾಸೇಂಪುರ್, ಅಶೋಕ್ ಜಮಾದಾರ್, ನಿವೃತ್ತ ನೌಕರರಾದ ಹಣಮಂತಪ್ಪಾ ಸರ್ ಸೇರಿದಂತೆ ಸಮಾಜದ ಅನೇಕ ಮುಖಂಡರು ಮತ್ತು ಪ್ರಮುಖರು ಪಾಲ್ಗೊಂಡು ನಿವೃತ್ತ ಸೇನಾನಿಗಳಿಗೆ ಶುಭ ಹಾರೈಸಿದರು.
