ಯಲ್ಲಾಪುರ:ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಯುವತಿಯೊಬ್ಬಳು ಮೃ. ,ತಪ.ಟ್ಟ ದಾರುಣ ಘಟನೆ ತಾಲೂಕಿನ ಕಿರವತ್ತಿ ಗ್ರಾಮದ (NH-52) ಬಳಿ ಸಂಭವಿಸಿದೆ.
ಬೆಳಗಾವಿಯ ನ್ಯೂ ವೀರಭದ್ರ ನಗರದ ನಿವಾಸಿ ನಗ್ಮಾ (32) ಅಪಘಾತದಲ್ಲಿ ಮೃ. ತಪ. ಟ್ಟ ದುರ್ದೈವಿ. ಈ ಕುರಿತು ಯುವತಿಯ ತಂದೆ ನಜೀರಾ ಮುಕ್ತುಂಸಾಬ ಗುದಗಿ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃ. ತ ನಗ್ಮಾ ಅವರು ಹುಬ್ಬಳ್ಳಿಯ ಆರಿಫ್ ಆಸಿಫ್ ಅಲಿ ರಿಕಾರ್ತಿ ಎಂಬುವವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ (ಏಪ್ರಿಲ್ 27) ಕಚೇರಿ ಕೆಲಸದ ನಿಮಿತ್ತ ಆರಿಫ್ ಅವರೊಂದಿಗೆ ಕಾರಿನಲ್ಲಿ ಯಲ್ಲಾಪುರಕ್ಕೆ ಬಂದಿದ್ದರು. ಕೆಲಸ ಮುಗಿಸಿ ಮರಳಿ ಹುಬ್ಬಳ್ಳಿಯತ್ತ ತೆರಳುವಾಗ, ಕಿರವತ್ತಿ ಗ್ರಾಮದ ಪ್ರಭು ಚಿಂಚಕಂಡಿ ಅವರ ಜಮೀನಿನ ಬಳಿ ಮಧ್ಯಾಹ್ನ 4:00 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಚಾಲಕ ಆರಿಫ್ ಕಾರನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ನಗ್ಮಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃ., ತಪ. ಟ್ಟಿದ್ದಾರೆ.
ಅಪಘಾತದ ವಿಷಯ ತಿಳಿದು ಬೆಳಗಾವಿಯಿಂದ ಆಗಮಿಸಿದ ಮೃತಳ ತಂದೆ, ಚಾಲಕ ಆರಿಫ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
