Monday, June 1, 2026
Homeಜಿಲ್ಲಾ ಸುದ್ದಿಗಳುನಿಂಗರಾಜ್ ಗೌಡ್ರು ಜನ್ಮದಿನದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳಿಗೆ ಬ್ರೆಡ್-ಹಾಲು ವಿತರಣೆ...

ನಿಂಗರಾಜ್ ಗೌಡ್ರು ಜನ್ಮದಿನದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳಿಗೆ ಬ್ರೆಡ್-ಹಾಲು ವಿತರಣೆ…


ಲಿಂಗಸೂಗೂರು, ಮೇ 31: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ್ರು ಅವರ ಜನ್ಮದಿನದ ಅಂಗವಾಗಿ ತಾಲ್ಲೂಕು ಅಧ್ಯಕ್ಷ ಜಿಲಾನಿ ಪಾಷಾ ಅವರ ನೇತೃತ್ವದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಬ್ರೆಡ್ ಹಾಗೂ ಹಾಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲಾನಿ ಪಾಷಾ, ಸಮಾಜ ಸೇವೆಯ ಮೂಲಕ ಜನ್ಮದಿನ ಆಚರಿಸುವುದು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವಾಗಿದೆ. ರಾಜ್ಯಾಧ್ಯಕ್ಷ ನಿಂಗರಾಜ್ ಗೌಡ್ರು ಅವರ ಮಾರ್ಗದರ್ಶನದಲ್ಲಿ ಸಂಘಟನೆ ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಬಡವರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ಅವರ ಕುಟುಂಬಸ್ಥರಿಗೆ ಬ್ರೆಡ್ ಮತ್ತು ಹಾಲು ವಿತರಿಸುವ ಮೂಲಕ ಸಂಘಟನೆಯ ಪದಾಧಿಕಾರಿಗಳು ಮಾನವೀಯತೆ ಮೆರೆದರು. ಈ ಕಾರ್ಯಕ್ರಮವನ್ನು ಆಸ್ಪತ್ರೆಯ ರೋಗಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶೇಕ್ ಅಜಮೀರ್, ರವಿಕುಮಾರ್ ಬರಗುಡಿ, ಅಜೀಜ್ ಪಾಷಾ, ಮೋಸಿನ್ ಖಾನ್, ಅಲ್ಲಾವುದ್ದೀನ್ ಬಾಬಾ, ಬಸವರಾಜ್ ಗೌಡ, ಜಮೀರ್ ಖಾನ್, ಮಲ್ಲನಗೌಡ, ಸಲ್ಮಾನ್ ಖಾನ್, ಅಮರಪ್ಪ ಗೊರೆಬಾಳ, ಜಿ. ಭಗೀರಥ, ಅಮರೇಶ್ ಎಸ್.ಆರ್.ಎಸ್., ವೀರೇಶ್ ಐದನಾಳ, ಮಹಮದ್ ಖಾಸಿಂ ಮರಘಟ್ನಾಳ, ಶಬ್ಬೀರ್ ಪುಲವಾಲೆ, ಮಲ್ಲಿಕಾರ್ಜುನ್ ಪೋಳ್, ಶೇಕ್ ಮಹೇಬೂಬ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ