ಭಾರತೀಯ ಸಾಂಪ್ರದಾಯಕ ಹಬ್ಬಗಳಲ್ಲಿ ವಿಶಿಷ್ಟತೆಗಳನ್ನು ಒಳಗೊಂಡಂತೆ ಕಾರ್ತಿಕ ಮಾಸದಲ್ಲಿ ಮನದ ಕತ್ತಲನ್ನು ಕಳೆದು ದೀಪ ಬೆಳಗುವಂತೆ ತಮ್ಮ ಇಷ್ಟಾರ್ಥ ದೇವರಿಗೆ ದೀಪಗಳನ್ನು ಹಚ್ಚಿ ಬದುಕಿನಲ್ಲಿ ಕತ್ತಲೆಯನ್ನು ಕಳೆದು ಬೆಳಕು ಮೂಡುವಂತೆ ಕಾರ್ತಿಕ ಮಾಸವನ್ನು ಆಚರಣೆ ಮಾಡಲಾಗುವುದು.
ಅದರಂತೆ ಇಂದು ಯು.ಕೆ.ಪಿ ಕ್ಯಾಂಪ್ ನಾರಾಯಣಪುರ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವರಾಗಿರುವ ಶ್ರೀ ಪತ್ರಿಕಟ್ಟಿ ಈಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವವನ್ನು ಗ್ರಾಮದ ಎಲ್ಲ ಜನರು ದೇವಸ್ಥಾನದಲ್ಲಿ ದೀಪಗಳನ್ನು ತೆಗೆದುಕೊಂಡು ಹೋಗಿ ಶ್ರದ್ಧಾಭಕ್ತಿಯಿಂದ ದೇವಸ್ಥಾನದ ಎಲ್ಲಾ ಕಡೆಗೂ ದೀಪಗಳನ್ನು ಹಚ್ಚಿ ಕತ್ತಲೆ ಕಳೆದು ಬೆಳಕು ಮೂಡುವಂತೆ ಹಬ್ಬದ ಆಚರಣೆಯು ಸಡಗರ ಸಂಭ್ರಮದಿಂದ ಜರುಗಿತು.
ಕಾರ್ತಿಕೋತ್ಸವದ ಪ್ರಯುಕ್ತ ಶ್ರೀ ಪತ್ರಿಕಟ್ಟಿ ಈಶ್ವರ ದೇವಾಲಯವನ್ನು ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಗಳಿಂದ ಶ್ರೀ ಪತಿಕಟ್ಟಿ ಈಶ್ವರ ದೇವರ ಮೂರ್ತಿಯನ್ನು ಕಂಗೊಳಿಸುವಂತೆ ಮಾಡಿ ಗ್ರಾಮದ ಎಲ್ಲ ಜನರು ಗ್ರಾಮದಲ್ಲಿ ಹಬ್ಬದ ವಾತಾವರಣದಲ್ಲಿ ಕಾರ್ತಿಕೋತ್ಸವವನ್ನು ಆಚರಣೆ ಮಾಡಿದರು.
ಕಾರ್ತಿಕೋತ್ಸವದ ವಿಶೇಷತೆಯನ್ನುವಂತೆ ಹಬ್ಬದ ಲ್ಲಿ ಮಕ್ಕಳು ದೀಪವನ್ನು ಬೆಳಗುವುದರ ಮೂಲಕ ಕಾರ್ತಿಕೋತ್ಸವದ ಆಚರಣೆಗೆ ಅರ್ಥಪೂರ್ಣವಾಗಿ ಜರುಗುವಂತೆ ಗ್ರಾಮದಲ್ಲಿ ಹಿರಿಯರ ಮಾರ್ಗದರ್ಶನದಂತೆ ಮಕ್ಕಳು ಕಾರ್ತಿಕದಲ್ಲಿ ದೀಪವನ್ನು ಹಚ್ಚಿರುವುದು ಹಬ್ಬದ ಸಂಸ್ಕೃತಿಯನ್ನು ತಿಳಿಸುವಂತೆ ಗ್ರಾಮದಲ್ಲಿ ಮಹಿಳೆಯರು ಹಾಗೂ ಹಿರಿಯರು ಮಾಡಿದರು.
ಗ್ರಾಮದಲ್ಲಿ ಕಾರ್ತಿಕೋತ್ಸವದ ಪ್ರಯುಕ್ತ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಒಳಗೊಂಡಂತೆ ಅರ್ಥಪೂರ್ಣವಾದ ಕಾರ್ತಿಕ ಉತ್ಸವವನ್ನು ಆಚರಣೆಯನ್ನು ಮಾಡಿದರು. ಕಾರ್ತಿಕೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.
ಇದೆ ಸಾಧರ್ಭದಲ್ಲಿ ಕೆಬಿಜಿಎನ್ಎಲ್ ಮುಖ್ಯ ಇಂಜಿನಿಯರ್ ಸಿ. ಮಂಜುನಾಥ, ವಿದ್ಯಾಧರ್, ನಾಗೇಶ್, ಸುರೇಂದ್ರ ರೆಡ್ಡಿ, ಎಂ ಎಂ ಗಣಾಚಾರಿ, ಮ್ಯಾನೇಜರ್ ಅಮರೇಶ್ ರಾಠೋಡ , ಬಸವರಾಜ ಯಾದವಾಡ, ಬಸು ಡೊಳ್ಳಿ, ರಮೇಶ ಕೋಳೂರು , ನಾರಾಯಣಪುರ ಗ್ರಾಮದ ಎಲ್ಲಾ ಗ್ರಾಮಸ್ಥರು ಹಾಗೂ ಗುರು ಹಿರಿಯರು ಉಪಸ್ಥಿತರು ಇದ್ದರು.
ಜಿಲ್ಲಾ ವರದಿಗಾರರು : ಶಿವು ರಾಠೋಡ ಯಾದಗಿರಿ