Sunday, June 28, 2026
HomeUncategorizedನಾಡು-ನುಡಿಗೆ ದ್ರೋಹ: ಬೆಳಗಾವಿ ಡಿಸಿಯನ್ನು ಕರ್ನಾಟಕದಿಂದಲೇ ವರ್ಗಾಯಿಸಿರಿ..

ನಾಡು-ನುಡಿಗೆ ದ್ರೋಹ: ಬೆಳಗಾವಿ ಡಿಸಿಯನ್ನು ಕರ್ನಾಟಕದಿಂದಲೇ ವರ್ಗಾಯಿಸಿರಿ..

ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಗಡಿಭಾಗದಲ್ಲಿ ಕನ್ನಡಿಗರ ಹಿತ ಕಾಪಾಡುವ ಬದಲು ಎಂಇಎಸ್ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು, ಅವರನ್ನು ಕರ್ನಾಟಕ ರಾಜ್ಯದಿಂದಲೇ ಹೊರಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಭಾಜಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಚನ್ನಮ್ಮ ವೃತ್ತದ ಮೂಲಕ ಪ್ರಾದೇಶಿಕ ಆಯುಕ್ತರ ಕಚೇರಿಗೆ ತಲುಪಿತು. ಬಳಿಕ ಪ್ರಾದೇಶಿಕ ಆಯುಕ್ತ ಜಾನಕಿ ಅವರ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕರವೇ ಮುಖಂಡರು ಮಾತನಾಡಿ, ಕಳೆದ ಸೋಮವಾರ ಎಂಇಎಸ್ ಪ್ರತಿಭಟನೆಗೆ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದರೂ, ಜಿಲ್ಲಾಧಿಕಾರಿಗಳೇ ಮಧ್ಯಪ್ರವೇಶಿಸಿ ನೂರಾರು ಎಂಇಎಸ್ ಕಾರ್ಯಕರ್ತರಿಗೆ ಡಿಸಿ ಕಚೇರಿಗೆ ಪ್ರವೇಶ ಕಲ್ಪಿಸಿದ್ದಾರೆ ಎಂದು ಆರೋಪಿಸಿದರು.

ವರದಿಗಾರರು: ಕಾಸಿಂ ಸಾಬ್ ಕುಸುಗಲ್

ಹೆಚ್ಚಿನ ಸುದ್ದಿ