ನವದೆಹಲಿ ಜೂ 11 : ಸಮಾಜವಾದಿ ತತ್ವದ ಮೇಲೆ ರಾಷ್ಟ್ರಾದ್ಯಂತ ನಿರಂತರ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಸಮಾಜವಾದಿ ರಾಷ್ಟ್ರೀಯ ನಾಯಕರು ಇಂದು ನೀತಿ ಆಯೋಗ ಉಪಾಧ್ಯಕ್ಷರಾದ ಆಳಂದ ಎಂಎಲ್ಎ ಬಿಆರ್ ಪಾಟೀಲ ರವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಸಭೆ ನೆಡೆಸಿ ರಾಷ್ಟ್ರೀಯ ಸಮಾಜವಾದಿ ಸಮಾಗಮದ ಸಂಘಟನಾ ಸಮಿತಿಯ ರಾಷ್ಟಾಧ್ಯಕ್ಷರನಾಗಿ ಶ್ರೀ ಅರುಣ ಕುಮಾರ ಶ್ರೀವಾಸ್ತವ ಆಯ್ಕೆ ಮಾಡಿದರು.
ದೇಶದ ಎಲ್ಲ ರಾಜ್ಯಗಳಲ್ಲಿ ಸಮಾಜವಾದಿ ತತ್ವದ ಮೇಲೆ ಕೆಲಸ ಮಾಡುವತ್ತಿರುವ ಸಮಾಜವಾದಿಗಳು ರಾಷ್ಟ್ರೀಯ ಸಮಾಜವಾದಿ ಸಮಾಗಮ ಸಂಘಟನೆ ಸಮಿತಿಯಲ್ಲಿ ಇರಲಿದ್ದಾರೆ.ದೇಶದವು ಸಮಾಜವಾದಿ ತತ್ವದ ಮೇಲೆ ರೂಪಗೊಂಡಿದ್ದು ಆದರೆ ಕಳೆದ ಹತ್ತು ವರ್ಷಗಳಿಂದ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಇದೆ ರೀತಿಯಲ್ಲಿ ಮುಂದುವರೆದರೆ ಇದು ದೇಶದ ಸಾಮಾನ್ಯ ಜನರ ಬದುಕಿನಲ್ಲಿ ಬಾರಿ ಸಂಕಷ್ಟಕ್ಕೆ ತರಲಿದೆ. ದೇಶದ ಸಾಮಾನ್ಯ ಜನರು ಉತ್ತಮ ಸ್ಥಿತಿಯಲ್ಲಿ ಬದುಕು ನೋಡೆಸುವಂತೆ ಆಗಬೇಕು ಅನುವುದು ನಮ್ಮ ಸಮಿತಿ ನಿರ್ಧಾರ ಇನ್ನೂ ಉದ್ಯಮಪತಿಗಳ ಪರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಖಡಾಖಂಡಿತವಾಗಿ ವಿರೋಧಿಸಲು ದೇಶದ ಸಮಾಜವಾದಿ ತತ್ವದ ನಾಯಕರೆಲ್ಲ ಈ ರಾಷ್ಟ್ರೀಯ ಸಮಾಜವಾದಿ ಸಮಾಗಮ ಸಂಘಟನೆ ಸಮಿತಿ ಇರುತ್ತಾರೆ ಎಂದು ರಾಷ್ಟ್ರೀಯ ಕೋಶಾಧ್ಯಕ್ಷರಾಗಿ ಆಯ್ಕೆಯಾದ ನೀತಿ ಆಯೋಗದ ಉಪಾಧ್ಯಕ್ಷರಾದ ಎಂಎಲ್ಎ ಬಿಆರ್ ಪಾಟೀಲ್ ರು ತಿಳಿಸಿದರು.
ರಾಷ್ಟ್ರೀಯ ಸಮಾಜವಾದಿ ಸಮಾಗಮ ಸಂಘಟನಾ ಸಮಿತಿ ಆಯ್ಕೆಯಾದವರ ವಿವರ.
ರಾಷ್ಟ್ರಾಧ್ಯಕ್ಷರಾಗಿ ಶ್ರಿ ಅರುಣ ಕುಮಾರ ಶ್ರೀವಾಸ್ತವ
ರಾಷ್ಟ್ರೀಯ ಕೋಶಾಧ್ಯಕ್ಷರಾಗಿ ಎಂಎಲ್ಎ ಬಿಆರ್ ಪಾಟೀಲ್
ರಾಷ್ಟ್ರೀಯ ಉಪಾಧ್ಯಕ್ಷರಾಗಿ ಶಶಿ ಶೇಖರ
ರಾಷ್ಟ್ರೀಯ ಜನರ ಸೆಕ್ರೆಟರಿಗಳನಾಗಿ
ಅನಿಲ್ ಠಾಕೂರ್ ಹಾಗೂ ಮಾಜಿ ಎಂಎಲ್ ಎ ಡಾಕ್ಟರ್. ಸುನಿಲ್ಂ ಸಮಿತಿಯ ರಾಷ್ಟ್ರೀಯ ಸದಸ್ಯರಾಗಿ ಮಾಜಿ ಶಾಸಕರಾದ
ಪ್ರೋ,ರಾಜಕುಮಾರ ಜೈನ ಹಾಗೂ ಮಾಜಿ ಸಚಿವರು
ರಮಾಶಂಕರ ಸಿಂಗ ರವರನ್ನು ಆಯ್ಕೆ ಮಾಡಲಾಗಿದೆ.
