ದೇವಲಾಪುರ; ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ 906ನೇ ಜಯಂತಿಯನ್ನು ದಿನಾಂಕ ಫೆಬ್ರವರಿ 12 ರಂದು ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಕಾರ್ಯಾಧ್ಯಕ್ಷ ಪ್ರಮೋದ ಮಧ್ವರಾಜರವರು, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಮತ್ತು ಬೈಲಹೊಂಗಲ ಶಿವಾನಂದ ಮಠದ ಶ್ರೀ ಮಹದೇವ ಸರಸ್ವತೀ ಮಹಾಸ್ವಾಮಿಗಳ ಭಾಗವಹಿಸಿದ್ದರು. ಇವರ ಸಮ್ಮುಖದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವ ಚಿತ್ರದೊಂದಿಗೆ ಕುಂಭಮೇಳ ಹಾಗೂ ಸುಮಂಗಲೆಯರ ಜೊತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯವಾದ ಸಕಲ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಶ್ರೀ ಗಂಗಾದೇವಿ ದೇವಸ್ಥಾನದಲ್ಲಿ ಸಕಲ ವಾದ್ಯ ಗೋಷ್ಠಿಯೊಂದಿಗೆ ಪೂಜೆ ಪುನಸ್ಕಾರಗಳು ಅಧ್ಯಕ್ಷರು ಹಾಗೂ ಪೂಜ್ಯರಿಂದ ನೆರವೇರಿತು ಗ್ರಾಮದ ಪ್ರಮುಖ ಹಿರಿಯರು ಮತ್ತು ಸಮಾಜದ ಸರ್ವರೂ ಭಾಗಿಯಾಗಿದ್ದರು..
ಗುರುಪೀಠದ ಕಾರ್ಯಾಧ್ಯಕ್ಷ ಪ್ರಮೋದ ಮಧ್ವರಾಜರವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಮೇಲೆ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಮತ್ತು ಬೈಲಹೊಂಗಲ ಶಿವಾನಂದ ಮಠದ ಶ್ರೀ ಮಹದೇವ ಸರಸ್ವತೀ ಮಹಾಸ್ವಾಮಿಗಳು ಆಸೀನರಾಗಿದ್ದರು.
ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯನವರ ಬಗ್ಗೆ ಮತ್ತು ಸಮಾಜದ ಬಗ್ಗೆ ತಿಳಿಸಲಾಯಿತು, ಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳು ಸಮಾಜ ಬಾಂಧವರಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಎಲ್ಲ ಅಂಬಿಗ ಸಮಾಜದ ಮುಖ್ಯಸ್ಥ ಮತ್ತು. ಗ್ರಾಮದ ಗುರು ಹಿರಿಯರು ಯುವಕಮಿತ್ರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.







ಸಂಪಾದಕರು: ರಾಮಚಂದ್ರಪ್ಪ ಪೂಜೇರ
