Thursday, July 2, 2026
Homeಜಿಲ್ಲಾ ಸುದ್ದಿಗಳುದಿ. ಶ್ರೀ ಡಿ ಬಿ ಇನಾಮದಾರ 78 ನೇ ಜನ್ಮದಿನದ ನಿಮಿತ್ಯ ಭಾರತ ಸರ್ಕಾರದ ಸಾಮಾಜಿಕ...

ದಿ. ಶ್ರೀ ಡಿ ಬಿ ಇನಾಮದಾರ 78 ನೇ ಜನ್ಮದಿನದ ನಿಮಿತ್ಯ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಆಶ್ರಯದಲ್ಲಿ ಹಾಗೂ ಶ್ರೀ ಡಿ ಬಿ ಇನಾಮದಾರ ಫೌಂಡೇಶನ್ ‘ ಹಾಗೂ ‘ALIMCO’ ಸಹಯೋಗದೊಂದಿಗೆ, ಬೈಲೂರ ಗ್ರಾಮದ ವಿಶೇಷ ಚೇತನರಿಗೆ ಮತ್ತು ವಯೋವೃದ್ಧರಿಗೆ ಅತ್ಯಗತ್ಯ ನೆರವಿನ ಸಲಕರಣಿಗಳನ್ನು ವಿತರಿಸಲಾಗುವುದು..

ಚನ್ನಮ್ಮನ ಕಿತ್ತೂರು: ಐತಿಹಾಸಿಕ ವೀರ ರಾಣಿ ಚನ್ನಮ್ಮನ ಕಿತ್ತೂರು ಕ್ಷೇತ್ರದಲ್ಲಿ ಐದು ಅವಧಿಗೆ ಶಾಸಕರಾಗಿ ಮತ್ತು ಒಟ್ಟಾಗಿ ನಾಲ್ಕು ದಶಕಗಳಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸಿದ ಕೈಲಾಸ ವಾಸಿ ಶ್ರೀಯುತ ಡಿ.ಬಿ.ಇನಾಮದಾರ ಅವರ 78 ನೇ ಜನ್ಮ ತಿಥಿಯಂದು ಅವರ ಪುಣ್ಯ ಸ್ಮರಣೆಗಾಗಿ ಕ್ಷೇತ್ರದ ವಿಶೇಷ ಚೇತನರು ಮತ್ತು ವಯೋವೃದ್ಧರಿಗಾಗಿ ಅತ್ಯಗತ್ಯ ಸೇವಾ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ನಾಳೆ ಗುರುವಾರ,  ದಿನಾಂಕ 02.07.2026 ರಂದು ಮುಂಜಾನೆ 10 ಘಂಟೆಗೆ ಬೈಲೂರ  ಮತ್ತು ಮಧ್ಯಾಹ್ನ 3 ಘಂಟೆಗೆ ನಾಗನೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಘನ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ‘ALIMCO’ ಸಂಸ್ಥೆ ಮತ್ತು ‘ ಶ್ರೀ ಡಿ ಬಿ ಇನಾಮದಾರ ಫೌಂಡೇಶನ್ ’ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಸ್ವಗ್ರಾಮ ನೇಗಿನಹಾಳದಿಂದಆರಂಭಿಸಿರುವ ಈ ಸೇವಾ ಕಾರ್ಯವನ್ನು ಹಂತ ಹಂತವಾಗಿ ಕ್ಷೇತ್ರದಾದ್ಯಂತಹಮ್ಮಿಕೊಳ್ಳುವ ಮಹದಾಸಕ್ತಿ ಇದೆ ಅವರ ಕುಟುಂಬದವರು ತಿಳಿಸಿದ್ದಾರೆ.

ಈ ಯೋಜನೆಯ ಯಶಸ್ಸಿಗೆ ಕ್ಷೇತ್ರದ ಸಮಸ್ತ ಮಹಾಜನತೆಯ ಆಶೀರ್ವಾದ ಮತ್ತು ಸಹಕಾರವನ್ನು ವಿನಯ ಪೂರ್ವಕವಾಗಿ ಕೋರುತ್ತೇವೆ ಎಂದು ಕುಟುಂಬ ವರ್ಗದವರು ತಿಳಿಸಿದರು. ದೊಡ್ಡ ಧಣಿ ಇಲ್ಲೇ ಇರಲಿ , ಅವರ ಮೊಗದಲ್ಲಿ ನಗುವೊಂದನ್ನು ಅರಳಿಸುವುದು ನಮ್ಮ ಆಶಯ ನಮ್ಮದು ಎಂದು ಕುಟುಂಬ ವರ್ಗದವರು ತಿಳಿಸಿದರು.

ವರದಿಗಾರರು: ಕಾಸಿಂ ಸಾಬ್ ಕುಸುಗಲ್

ಹೆಚ್ಚಿನ ಸುದ್ದಿ