Monday, December 23, 2024
HomeUncategorizedದಿವಂಗತ ಶಾಸಕರು ರಾಜ ವೆಂಕಟಪ್ಪ ನಾಯಕನವರ 67ನೇಯ ಜನ್ಮದಿನ ಆಚರಣೆ.

ದಿವಂಗತ ಶಾಸಕರು ರಾಜ ವೆಂಕಟಪ್ಪ ನಾಯಕನವರ 67ನೇಯ ಜನ್ಮದಿನ ಆಚರಣೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠಾಮ್ಮಾಪುರ ಗ್ರಾಮದಲ್ಲಿ ದಿವಂಗತ ಶಾಸಕರು ರಾಜ ವೆಂಕಟಪ್ಪ ನಾಯಕನವರ 67ನೇಯ ಜನ್ಮದಿನದ ಪ್ರಯುಕ್ತ ಪೇಠಾಮಪುರ ಗ್ರಾಮದಲ್ಲಿ ಇಂದು ದಿವಂಗತ ಶಾಸಕರು ವೆಂಕಟಪ್ಪ ನಾಯಕನವರ ನಾಮಫಲಕ ಉದ್ಘಾಟನೆ ಹಾಗೂ ಬೃಹತ್ ಗಾತ್ರದ ಕಟೌಟ್ ನಿರ್ಮಾಣ ಮಾಡಿ ಹಾಲಿನ ಅಭಿಷೇಕ ಪುಷ್ಪಾಭಿಷೇಕ ಮಾಡಿ ಕೇಕ್ ಕತ್ತರಿಸಿ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು..

ಪೇಠಾಮಪುರ ಗ್ರಾಮವುದಿವಂಗತ ಶಾಸಕರು ರಾಜ ವೆಂಕಟಪ್ಪರವರಿಗೆ ತವರು ಮನೆ ಇದ್ದಹಾಗಿತ್ತು ಹಾಗಾಗಿ ಇಂದು ಬಹಳ ವಿಜೃಂಭಣೆಯಿಂದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ದಿವಂಗತ ಶಾಸಕರು ರಾಜ ವೆಂಕಟಪ್ಪ ನಾಯಕನವರ ಆತ್ಮೀಯರಾದ ಸಹೋದರ ಸ್ವರೂಪರಾದ ವಿಠಲ್ ಯಾದವ್ ಅವರ ಮಗನಾದ ಮಹೇಶ್ ವಿ ಯಾದವ್ ಅವರ ಅಭಿಮಾನಿ ಬಳಗದವತಿಯಿಂದ ಸತತ ಮೂರು ದಿನಗಳ ಈ ಕಾರ್ಯಕ್ರಮಕ್ಕೆ ತಯಾರಿ ಮಾಡಲಾಗಿದೆ.

ಇಂದು ತಾಲೂಕಿನಅದ್ಯಂತ ದಿವಂಗತ ಶಾಸಕರು ರಾಜ ವೆಂಕಟಪ್ಪ ನಾಯಕರವರ ಅಭಿಮಾನಿ ಬಳಗ ಹರಿದು ಬಂದಿತ್ತು 37 ವರ್ಷಗಳಿಂದ ದಿವಂಗತ ಶಾಸಕರು ರಾಜ ವೆಂಕಟಪ್ಪ ಅವರಿಗೆ ಸ್ನೇಹಿತರಾಗಿ ವಿಠಲ್ ಯಾದವ್ ಬೆನ್ನೆಲುಬಾಗಿ ಯಾವ ಸ್ಥಿತಿಯಲ್ಲೂ ಧೃತಿಗೆಡದೆ ಅವರೊಂದಿಗೆ ಸದಾ ಜೊತೆಗೆ ಇರುತಿದ್ದರು.

ವಿಠಲ್ ಯಾದವ್ ಇಂದು ಅಗಲಿದ್ದ ನಮ್ಮ ನಾಯಕನನ್ನ ನೆನೆದು ಭಾವುಕರಾಗಿ ರಾಜ ವೆಂಕಟಪ್ಪ ನಾಯಕನ ಅವರ ಒಡನಾಟದ ಬಗ್ಗೆ ಕುರಿತು ಇಂದು ಸವಿಸ್ತಾರವಾಗಿ ವಿವರಣೆ ನೀಡಿದರು ಅವರ ಅಗಲಿಕೆ ನಮ್ಮನ್ನು ಕೊರಗುತ್ತಿದೆ ಆದರೂ ನಮ್ಮ ಜನ ಅವರ ಕುಟುಂಬವನ್ನು ಎತ್ತಿ ಹಿಡಿದಿದೆ..

ಅವರ ಮಗನಾದ ಸುರಪುರು ಶಾಸಕರು ರಾಜ ವೇಣುಗೋಪಾಲ್ ನಾಯಕ್ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಇದೇ ರೀತಿ ಸದಾ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ತಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಬಾವುಕರಾಗಿ ನುಡಿದರು

ಈ ಕಾರ್ಯಕ್ರಮದಲ್ಲಿ ವಿಠಲ್ ಯಾದವ್ . ಮಹೇಶ್ ವಿ ಯಾದವ್. ಕೃಷ್ಣನ ಜಾದವ್ ಹುಣಸಗಿ ಗ್ಯಾರಂಟಿ ಅಧ್ಯಕ್ಷರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ದಿವಂಗತ ಶಾಸಕರು ರಾಜ ವೆಂಕಟಪ್ಪ ನಾಯಕ ಅಭಿಮಾನಿ ಬಳಗ ಮುಖಂಡರುಗಳು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿಗಾರರು : ಶಿವು ರಾಠೋಡ್ ಯಾದಗಿರಿ

ಹೆಚ್ಚಿನ ಸುದ್ದಿ