



ಮುಂಡಗೋಡ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷ’ ಬಡವರ ಹಾಗೂ ದಿನದಲಿತರ ಕಣ್ಮಣಿಯಾದ ಶಿವರಾಂ ಹೆಬ್ಬಾರ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬದ ಸಂಭ್ರಮಾಚರಣೆ ಆಚರಿಸಿದ್ದರು.
11:00 ಗಂಟೆಗೆ ಪಟ್ಟಣದಲ್ಲಿ ಇರುವ ಅಂದ ಮಕ್ಕಳ ಶಾಲೆಯಲ್ಲಿ ಅಂದ ವಿದ್ಯಾರ್ಥಿಗಳ ಹಾಡುತ್ತಾ ಶಾಸಕರಿಗೆ ಶುಭಾಶಯಗಳು ಕೋರಿದರು. ತದನಂತರ ಎಲ್ಲರೂ ಸಮ್ಮುಖದಲ್ಲಿ ಕೇಕ್ ಕತ್ತರಿಸಲಾಯಿತು.
ಜನ್ಮ ದಿನಾಚರಣೆಯ ಪ್ರಯುಕ್ತ ಅಂದ ವಿದ್ಯಾರ್ಥಿಗಳಿಗೆ ಬಟ್ಟೆ ದಾನವನ್ನು ಮಾಡಿದರು ಹಾಗೂ ಊಟದ ವ್ಯವಸ್ಥೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರಿಂದ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ. ರವಿ ಗೌಡ ಪಾಟೀಲ್ . ಸಲ್ಮಾ ಕಿರಣ್ ಶೇರ್ ಖಾನ್. ಸಿದ್ದಪ್ಪ ಹಡಪದ್ ಕೆ ಸಿ ಗಲಬಿ ಬಸವರಾಜ್ ಆಸ್ಕಟ್ಟಿ . ತಾಲೂಕ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ. ಬಿ ಎಸ್ ತೋಟಯ್ಯನವರ, ಮುಂಡಗೋಡ.
