Monday, December 23, 2024
HomeUncategorizedತಾಂಡಾ ನಿವಾಸಿಗಳಿಗೆ ಕುಡಿಯಲು & ಬಳಕೆ ಮಾಡಲು ನೀರಿನ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಧನರಾಜ್ ರಾಠೋಡ್...

ತಾಂಡಾ ನಿವಾಸಿಗಳಿಗೆ ಕುಡಿಯಲು & ಬಳಕೆ ಮಾಡಲು ನೀರಿನ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಧನರಾಜ್ ರಾಠೋಡ್ ಆಗ್ರಹ

ತಾಂಡಾ ನಿವಾಸಿಗಳಿಗೆ ಕುಡಿಯಲು & ಬಳಕೆ ಮಾಡಲು ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಜಯ ಕರ್ನಾಟಕ ರಕ್ಷಣಾ ಸೇನೆ ರೈತ ಘಟಕ ತಾಲೂಕು ಅಧ್ಯಕ್ಷ ಧನರಾಜ್ ರಾಠೋಡ್ ಆಗ್ರಹ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ಸುಮಾರು ೪೦ ಕುಟುಂಬಗಳು
ವಾಸ ಮಾಡುತ್ತಿದ್ದರು ಕೂಡಾ ಇಲ್ಲಿಯವರೆಗೆ.

ಕುಡಿಯಲು & ಬಳಕೆ ಮಾಡಲು ನೀರಿನ ವ್ಯವಸ್ಥೆ ಇರಲಾರದೆ ಪರದಾಡುತ್ತಿರುವ ತಾಂಡಾ ನಿವಾಸಿಗಳು.

ವಯೋ ವೃದ್ದರು, ಶಾಲಾ ವಿದ್ಯಾರ್ಥಿಗಳು, ಅಂಗವಿಕಲರು, ಕೂಲಿ ಕಾರ್ಮಿಕರು ಶುದ್ದ ಕುಡಿಯುವ ನೀರು ಹಾಗೂ ಬಳಕೆ ಮಾಡಲು ನೀರು ಇಲ್ಲದೆ ಕೈ ಪಂಪ್ ಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ..

ತಾಂಡಾದಲ್ಲಿ ಸುಮಾರು ಆರು ಬೋರವೆಲ್ ಗಳು ಇದ್ದರು ಕೂಡಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಾತಾಗಿದೆ ಎಂಬುದು ತಾಂಡಾ ನಿವಾಸಿಗಳ ಅಳಲು..

ಜಿಲ್ಲಾ ಉಸ್ತುವಾರಿ ಸಚಿವರ ತವರು ಜಿಲ್ಲೆಯಲ್ಲೆ ಕುಡಿಯುವ ನೀರಿಗಾಗಿ ಹಾಹಾಕಾರ..

ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕಿರದಳ್ಳಿ ತಾಂಡಾಕ್ಕೆ ಭೇಟಿ ಕೊಟ್ಟು ಕುಡಿಯಲು ಶುದ್ದ ನೀರಿನ ಘಟಕ ಹಾಗೂ ಬಳಕೆ ಮಾಡಲು ಬೋರವೇಲ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಧನರಾಜ್ ರಾಠೋಡ್ ಮನವಿ..

ತಾತ್ಕಾಲಿಕವಾಗಿ ನೀರಿನ ಟ್ಯಾಂಕರ್ ಮೂಲಕ ತಾಂಡಾ ನಿವಾಸಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿಕೊಡ ಬೇಕು ಎಂದು ಹೆಗ್ಗನದೊಡ್ಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯ ಕರ್ನಾಟಕ ರಕ್ಷಣಾ ಸೇನೆ ಗ್ರಾಮ ಘಟಕ ಆಗ್ರಹ.

ಈ ಸಂದರ್ಭದಲ್ಲಿ ಗ್ರಾಮ ಘಟಕ ಅಧ್ಯಕ್ಷ ರೇಖು ರಾಠೋಡ್, ಸೇನೆಯ ಪದಾಧಿಕಾರಿಗಳಾದ ಜಯರಾಮ್ ರಾಠೋಡ್, ಶೀತಾಬಾಯಿ, ಮಾನು ಭೀಮ ನಾಯಕ,ಈರಣ್ಣ ರಾಠೋಡ್, ಶಾಣಿಭಾಯಿ ರಾಠೋಡ್,ತಿಪ್ಪಮ್ಮ ಚವ್ಹಾಣ್, ಶಾಂತಾಬಾಯಿ ರಾಠೋಡ್, ಲಕ್ಷ್ಮೀ ಬಾಯಿ ರಾಠೋಡ್ ಇತರರು ಉಪಸ್ಥಿತರಿದ್ದರು.

ವರದಿ : ಮೌನೇಶ ಆರ್ ಭೋಯಿ
..

ಹೆಚ್ಚಿನ ಸುದ್ದಿ