Monday, February 9, 2026
HomeUncategorizedತಪ್ಪನ್ನು ಒಪ್ಪಿಕೊಂಡವನೇ ದೊಡ್ಡವ: ಅನ್ನದಾತನ ಕ್ಷಮೆ ಕೇಳಿದ ಕಾಟನ್ ಮಿಲ್ ಮಾಲೀಕ ಆನಂದ್ ರಾಠಿ.

ತಪ್ಪನ್ನು ಒಪ್ಪಿಕೊಂಡವನೇ ದೊಡ್ಡವ: ಅನ್ನದಾತನ ಕ್ಷಮೆ ಕೇಳಿದ ಕಾಟನ್ ಮಿಲ್ ಮಾಲೀಕ ಆನಂದ್ ರಾಠಿ.

ಯಾದಗಿರಿ: ಮನುಷ್ಯ ಅಂದಮೇಲೆ ತಪ್ಪು ಮಾಡುವುದು ಸಹಜ, ಆದರೆ ಆ ತಪ್ಪನ್ನು ತಿದ್ದಿಕೊಂಡು ಕ್ಷಮೆ ಕೇಳುವವನು ನಿಜವಾದ ದೊಡ್ಡ ಮನುಷ್ಯ. ಇಂತಹದ್ದೇ ಒಂದು ಘಟನೆ ಮನಗನಾಳ ಗ್ರಾಮದಲ್ಲಿ ನಡೆದಿದೆ. ರೈತರ ಆಕ್ರೋಶಕ್ಕೆ ತುತ್ತಾಗಿದ್ದ ಜಯಲಕ್ಷ್ಮಿ ಕಾಟನ್ ಮಿಲ್ ಮಾಲೀಕರು ಇಂದು ರೈತರ ಸಮ್ಮುಖದಲ್ಲಿಯೇ ಕ್ಷಮೆ ಯಾಚಿಸಿದ್ದಾರೆ.
“ಜೋರು ದನಿಯಲ್ಲಿ ಮಾತನಾಡಿದ್ದು ತಪ್ಪಾಗಿದೆ, ಈ ಘಟನೆಗೆ ನನ್ನ ವಿಷಾದವಿದೆ” ಎನ್ನುವ ಮೂಲಕ ಆನಂದ್ ರಾಠಿ ಅವರು ರೈತರ ನೋವಿಗೆ ಸ್ಪಂದಿಸಿದರು. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಮಿಲ್ ಮಾಲೀಕರು ಮತ್ತು ರೈತರ ನಡುವೆ ಇದ್ದ ಮನಸ್ತಾಪ ದೂರವಾಗಿದ್ದು, ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿದೆ.

ಹೆಚ್ಚಿನ ಸುದ್ದಿ