Tuesday, May 12, 2026
Homeಜಿಲ್ಲಾ ಸುದ್ದಿಗಳುಡೋಣಿ ನದಿ ಹೂಳು ಎತ್ತಿ ಶಾಶ್ವತ ಪರಿಹಾರಕ್ಕೆ ಆಗ್ರಹ : ಸಂಗಮೇಶ ಸಗರ್

ಡೋಣಿ ನದಿ ಹೂಳು ಎತ್ತಿ ಶಾಶ್ವತ ಪರಿಹಾರಕ್ಕೆ ಆಗ್ರಹ : ಸಂಗಮೇಶ ಸಗರ್

ವಿಜಯಪುರ, : ವಿಜಯಪುರ ಪಂಚ ನದಿಗಳ ಜಿಲ್ಲೆ ಎಂದು ಖ್ಯಾತಿಯಾಗಿದೆ. ಆದರೆ ಪ್ರತಿ ಎರಡು ಇಲ್ಲವೆ ಮೂರು ವರ್ಷಕ್ಕೊಮ್ಮೆ ಒಣ ಬರ ಹಸಿಬರ ತಪ್ಪಿದ್ದಲ್ಲ. ಇದರಿಂದ ಈ ಭಾಗದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.
ಅದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದಿಂದ ಇತ್ತ ಕರ್ನಾಟಕದ ಮಾರ್ಗವಾಗಿ ಆಂಧ್ರಕ್ಕೆ ಸೇರುವಂತಹ ದೋಣಿಯು ಸುಮಾರು ೨೧೫ ಕಿ. ಮೀ. ಉದ್ದ ಇದ್ದು ಇದರಲ್ಲಿ ಸಾಕಷ್ಟು ಹೂಳು ತುಂಬಿ, ಮಳೆಗಾಲದಲ್ಲಿ ದೋಣಿ ತುಂಬಿ ಹರಿಯುವಾಗ ಆ ಹೊಳಿನಿಂದ ನೀರು ದೋಣಿ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ತನ್ನ ರುದ್ರಾವತಾರದೊಂದಿಗೆ ಸಾಕಷ್ಟು ನಷ್ಟ ಉಂಟು ಮಾಡುತ್ತದೆ. ಇದಕ್ಕಾಗಿ ಹಲವಾರು ವರ್ಷಗಳಿಂದ ಈ ದೋಣಿ ಅಕ್ಕಪಕ್ಕದ ರೈತರು,ರೈತ ಮುಖಂಡರು, ರೈತ ಸಂಘದವರು ಹಾಗೂ ರೈತಪರ ಚಿಂತಕರು ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದರೂ ಇದಕ್ಕೆ ಒಂದು ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದರು.
ಈ ಕೂಡಲೇ ಕರ್ನಾಟಕದಲ್ಲಿ ಹಾದು ಹೋಗುವಂತ ದೋಣಿಯ ಸಂಪೂರ್ಣ ಅಳತೆಯನ್ನು ಮಾಡಿ ಅಲ್ಲಿರುವಂಥ ಹೂಳನ್ನು ತೆಗೆದು ಅಕ್ಕಪಕ್ಕದಲ್ಲಿ ಕಲ್ಲಿನ ತಡೆಗೋಡೆ ಮಾಡಿ ದೊಡ್ಡ ದೊಡ್ಡ ಮರಗಳನ್ನು ಹಚ್ಚುವುದರ ಮೂಲಕ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕಾಗಿ ವಿಜಯಪುರದ ಜಿಲ್ಲಾಧಿಕಾರಿ ಡಾ.
ಆನಂದ ಕೆ. ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ್ ಅವರು ರಾಜ್ಯ ಸರ್ಕಾರಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಿ ಅದಕ್ಕೆ ಬೇಕಾಗುವಂತ ಅನುದಾನವನ್ನು ಮಂಜೂರು ಮಾಡಿಸಬೇಕು. ಅಂದಾಗ ಮಾತ್ರ ದೋಣಿಯ ಅಕ್ಕ ಪಕ್ಕದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಅದು ಬಿಟ್ಟು ರೈತರು ನಷ್ಟಗೊಂಡಾಗ ಕೇವಲ ನೆಪ ಮಾತ್ರಕ್ಕೆ ಒಂದು ಕೋಟಿ ಎರಡು ಕೋಟಿ ಐದು ಕೋಟಿ ಅಂತ ಹೇಳಿ ಪ್ರತಿ ವರ್ಷ ನೀವು ಅನುದಾನ ಇಟ್ಟರೂ ಕೂಡ ಇದಕ್ಕೆ ಯಾವುದು ಶಾಶ್ವತ ಪರಿಹಾರ ಆಗುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರಕ್ಕಾಗಿ ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕು ಅಂತ ಹೇಳಿ ಈ ಸಂದರ್ಭದಲ್ಲಿ ಆಗ್ರಹಿಸುತ್ತೇವೆ ಎಂದರು.
ಈ ಸಂಧರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಭಟಗಿ, ಅಭಿಷೇಕ ಹೂಗಾರ ಇದ್ದರು.

ಹೆಚ್ಚಿನ ಸುದ್ದಿ