Saturday, June 13, 2026
Homeರಾಜಕೀಯಡಿ.ಕೆ. ಶಿವಕುಮಾರ್ ಅವರು ಮುಖ್ಯ ಮಂತ್ರಿಯಾಗಲೆಂದು ನಾಳೆ ಅಭಿಮಾನಿಯಿಂದ ಉರುಳು ಸೇವೆ...

ಡಿ.ಕೆ. ಶಿವಕುಮಾರ್ ಅವರು ಮುಖ್ಯ ಮಂತ್ರಿಯಾಗಲೆಂದು ನಾಳೆ ಅಭಿಮಾನಿಯಿಂದ ಉರುಳು ಸೇವೆ…

ಬೆಂಗಳೂರು: ರಾಜ್ಯದ ಪ್ರಮುಖ ನಾಯಕರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂಬ ಸಂಕಲ್ಪವನ್ನು ಹೊತ್ತು, ಅವರ ಅಭಿಮಾನಿಯೊಬ್ಬರು ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸಲು ಮುಂದಾಗಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಅಭಿಮಾನಿಯಾದ ವಿಜಯರೆಡ್ಡಿ ಪಾಟೀಲ್ ಅವರು ಈ ಉರುಳು ಸೇವೆಯನ್ನು ಹಮ್ಮಿಕೊಂಡಿದ್ದಾರೆ. 2023ರಲ್ಲೇ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕೆಂಬ ಸಂಕಲ್ಪವನ್ನು ಮಾಡಿದ್ದ ವಿಜಯರೆಡ್ಡಿ ಪಾಟೀಲ್, ನಾಳೆ ಭಾನುವಾರ, 07-06-2026 ರಂದು ಈ ಹರಕೆಯನ್ನು ನೆರವೇರಿಸಲಿದ್ದಾರೆ.

ಈ ಉರುಳು ಸೇವೆಯು ಬೆಂಗಳೂರಿನ ಆನಂದ್ ರಾವ್ ಸರ್ಕಲ್‌ನ ಗಣೇಶ ದೇವಸ್ಥಾನದಿಂದ ಆರಂಭವಾಗಿ ಅಣ್ಣಮ್ಮ ದೇವಸ್ಥಾನದವರೆಗೆ ನಡೆಯಲಿದೆ.

ಹೆಚ್ಚಿನ ಸುದ್ದಿ