ಬೆಂಗಳೂರು,ಏ.14: ದೇವದಾಸಿ ವಿಮುಕ್ತಿ ಕ್ಷೇತ್ರದಲ್ಲಿ ಸಲ್ಲಿಸಿದ ಅಪೂರ್ವ ಸೇವೆಯನ್ನು ಪರಿಗಣಿಸಿ ಶೋಭಾ ಗಸ್ತಿ ಹಾಗೂ ಸಾಹಿತ್ಯ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ ಹನುಮಂತರಾವ್ ಬಿ. ದೊಡ್ಡಮನಿ ಅವರಿಗೆ 2026 ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ದೊರೆತಿದ್ದು, ಇವರನ್ನು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘದಿಂದ ಗೌವಿಸಲಾಯಿತು.


ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಎಸ್ ಸಂಗಮೇಶ್ ಮಾತನಾಡಿ, ಅರ್ಹರನ್ನು ಗುರುತಿಸಿ ಡಾ. ಅಂಬೇಡ್ಕರ್ ಪ್ರಶಸ್ತಿ ನೀಡಲಾಗಿದೆ. ಸೇವೆ, ಸಂಘಟನೆ, ರಚನಾತ್ಮಕ ಕೆಲಸಗಳ ಮೂಲಕ ಇವರು ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಇವರು ನಮಗೆಲ್ಲರಿಗೂ ಮಾದರಿ ಎಂದರು.
ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಇವರು ಅನುಕರಣೀಯ. ಯುವ ಸಮೂಹಕ್ಕೆ ಇವರು ಪ್ರೇರಣೆ. ಸಮಾಜದ ಉನ್ನತಿ, ಸಮಾನತೆ ಮತ್ತು ಸಂಘಟಿತ ಹೋರಾಟಕ್ಕೆ ಇಂತಹ ವ್ಯಕ್ತಿಗಳ ಕೊಡುಗೆ ಪ್ರೇರಣಾದಾಯಕ ಎಂದು ಶ್ರೀ ಎಸ್ ಸಂಗಮೇಶ್ ಸಮಾಜದ ಉನ್ನತಿ, ಸಮಾನತೆ ಮತ್ತು ಸಂಘಟಿತ ಹೋರಾಟಕ್ಕೆ ಇಂತಹ ವ್ಯಕ್ತಿಗಳ ಕೊಡುಗೆ ಪ್ರೇರಣಾದಾಯಕವಾಗಿದೆ, ಹನುಮೇಶ್ ಗುಂಡೂರು ವಕೀಲರು ಅಣ್ಣಾರಾವ್ ಪಾಟೀಲ್ (ಗುಲ್ಬರ್ಗ), ನಿಂಗರಾಜ ಗುಳೆ, ಬಿನಯ್ ಕುಮಾರ್, ಮಲ್ಲಿಕಾರ್ಜುನ್ ಬಾಂಬೇಕರ ಹೇಳಿದ್ದಾರೆ.
