Monday, February 9, 2026
HomeUncategorizedಜಾಮಿಯಾ ಮೊಹಮ್ಮದೀಯ ಮನ್ಸೂರ ಶಿಕ್ಷಣ ಸಂಸ್ಥೆ ಶಾಲೆಯ ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರದ ವಿರುದ್ಧ ಪೋಷಕರಿಂದ...

ಜಾಮಿಯಾ ಮೊಹಮ್ಮದೀಯ ಮನ್ಸೂರ ಶಿಕ್ಷಣ ಸಂಸ್ಥೆ ಶಾಲೆಯ ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರದ ವಿರುದ್ಧ ಪೋಷಕರಿಂದ ಸಿಎಂಗೆ ದೂರು

ಜಾಮಿಯಾ ಮೊಹಮ್ಮದೀಯ ಮನ್ಸೂರ ಶಿಕ್ಷಣ ಸಂಸ್ಥೆಯಿಂದ ಧಾರ್ಮಿಕ ಬೋಧನೆ ಸಮಾವೇಶ ಹೆಸರಿನಲ್ಲಿ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳಿಂದ ದೇಶದ ಏಕತೆ, ಭದ್ರತೆಗೆ ಧಕ್ಕೆ

ಬೆಂಗಳೂರು: ಥಣಿಸಂದ್ರದಲ್ಲಿರುವ ಜಾಮಿಯಾ ಮೊಹಮ್ಮದೀಯ ಮನ್ಸೂರ ಎಂಬ ಸಂಸ್ಥೆ ನಡೆಸುತ್ತಿರುವ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಸಮಾಜ, ದೇಶದ ಏಕತೆ, ಭದ್ರತೆಗೆ ಧಕ್ಕೆ ತರುವಂತಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ತಂದೆಯೊಬ್ಬರು ಸರ್ಕಾರಕ್ಕೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ.

ವಿದ್ಯಾರ್ಥಿಯ ತಂದೆ, ಎಚ್.ಬಿ.ಆರ್. ಬಡಾವಣೆಯ ಅಬ್ದುಲ್ ರಹೀಮ್ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪೊಲೀಸ್ ಆಯುಕ್ತರು, ಕೊತ್ತನೂರು ಪೊಲೀಸ್ ಠಾಣೆ, ಶಾಲಾ ಶಿಕ್ಷಣ ಆಯುಕ್ತರು ಮತ್ತಿತರರ ಬಳಿ ದೂರು ದಾಖಲಿಸಿದ್ದಾರೆ.

ನನ್ನ ಮಗ ಮೂರು ವರ್ಷಗಳಿಂದ ಇಲ್ಲಿ ಶಿಕ್ಷಣ ಪಡೆಯುತ್ತಿದ್ದು, ನನ್ನ ಮಗನಿಗೆ ನೀಡಿದ ಮೂರು ಅಂಕಪಟ್ಟಿಗಳು, ಶಾಲಾ ಶುಲ್ಕ ರಸೀದಿಗಳು ಕೂಡ ನಕಲಿ. ಇಲ್ಲಿ ದೇಶ ದ್ರೋಹ ಚಟುವಟಿಕೆ ಜೊತೆಗೆ ಮತಾಂತರವೂ ನಿರಂತರವಾಗಿ ನಡೆಯುತ್ತಿದೆ. ಈ ಶಿಕ್ಷಣ ಸಂಸ್ಥೆ ಅನಧಿಕೃತವಾಗಿದ್ದು, ಜೊತೆಗೆ ನೋಂದಣಿಯಾಗದ ಮದರಸ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಊಹಿಸಲೂ ಸಾಧ್ಯವಾಗದ ಹಾಗೂ ವಿವರಿಸುವುದಕ್ಕೂ ಆಗದ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದಿದ್ದಾರೆ.

2019 ರ ನವೆಂಬರ್ 24 ರಂದು ಇಲ್ಲಿನ ಮದರಸಾದಲ್ಲಿ ನಡೆದ ಸಮಾವೇಶದಲ್ಲಿ ಇಲ್ಲಿನ ಧರ್ಮಗುರುಗಳು, ಮುಸ್ಲಿಮರು ಒಂದು ಸಾವಿರ ವರ್ಷ ಭಾರತವನ್ನು ಆಳಿದ್ದು, ನಾವೀಗ ಮತ್ತೆ ಈ ದೇಶವನ್ನು ಆಳ್ವಿಕೆ ಮಾಡಬೇಕು ಎಂಬುದು ಸೇರಿದಂತೆ ದೇಶದ ಏಕತೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಈ ಕುರಿತಾದ ಪ್ರಚೋದಿಸುವ ಹೇಳಿಕೆ ಯೂಟ್ಯೂಬ್ ನಲ್ಲಿ ಈಗಲೂ ಲಭ್ಯವಿದೆ.

ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ನಲ್ಲಿರುವ ಜಾಮಿಯಾ ಮಹಮ್ಮದೀಯ ಮನ್ಸೂರ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ನಾಜಿಯ ಅನ್ಸಾರಿ ಎಂಬುವರು 2023 ರ ಫೆಬ್ರವರಿ 7 ರಂದು ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಗೆ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಬೇರೆ ಧರ್ಮದವರನ್ನು ವರಿಸಿದ್ದರು. ಆಗ ಈ ಸಮಾವೇಶದಲ್ಲಿ ಈಕೆಯ ಪತಿಯನ್ನು ಬಲವಂತಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರು. ಈ ಬಗ್ಗೆ ಮಹಾರಾಷ್ಟ್ರ ಶಿಕ್ಷಣ ಸಂಸ್ಥೆಗೆ ದೂರು ಸಲ್ಲಿಸಿದ ಕಾರಣದಿಂದ ಈಕೆಯನ್ನು ಕೆಲಸದಿಂದ ತೆಗೆಯಲಾಗಿತ್ತು ಎಂದು ಅಬ್ದುಲ್ ರಹೀಮ್ ಆಪಾದಿಸಿದ್ದಾರೆ.

ಧಾರ್ಮಿಕ ಬೋಧನೆ ಹೆಸರಿನಲ್ಲಿ ಮತಾಂತರ ಮಾಡುತ್ತಿದೆ. ಮಹಾರಾಷ್ಟ್ರದ ಅರ್ಷದ್ ಮೊಖ್ತಾರ್, ಅವರ ಪುತ್ರ ರಾಶಿದ್ ಅರ್ಷದ್ ಮೊಖ್ತಾರ್, ಬೆಂಗಳೂರಿನಲ್ಲಿ ಉಸ್ತುವಾರಿ ಖಾಲಿದ್ ಮುಷರ್ರಫ್ ಇದಕ್ಕೆಲ್ಲಾ ಕಾರಣವಾಗಿದ್ದು, ಇವರ ಮೇಲೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತನಿಖೆ ನಡೆದರೆ ಈ ಬಗ್ಗೆ ತನಿಖೆ ನಡೆದರೆ ಸೂಕ್ತ ಪುರಾವೆಗಳನ್ನು ಒದಗಿಸುವುದಾಗಿ ಅವರು ತಿಳಿಸಿದ್ದಾರೆ.

ಕಾಶ್ಮೀರದಿಂದ ಬಂದಿದ್ದ ವಿದ್ಯಾರ್ಥಿಯೊಬ್ಬ 2024 ರ ಏಪ್ರಿಲ್ 25 ರಂದು ಕೊತ್ತನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಇಲ್ಲಿ ವಿವಿಧ ರೀತಿಯ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಗಂಭೀರವಾಗಿ ಆಪಾದಿಸಿದ್ದ. ಇದು ಸಂಪೂರ್ಣವಾಗಿ ಅನಧಿಕೃತ ಸಂಸ್ಥೆಯಾಗಿದ್ದು, ಇದು ದೇಶಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ ತಕ್ಷಣವೇ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ