Monday, May 11, 2026
HomeUncategorizedಜಮಖಂಡಿ ಜೈಲರ್ PSI ವೀರಭದ್ರ ಕುಂಬಾರ ಕಾರ್ಯವೈಖರಿಗೆ ಕಾರಾಗೃಹ DGP ಅಲೋಕ್ ಕುಮಾರ್ ಮೆಚ್ಚುಗೆ

ಜಮಖಂಡಿ ಜೈಲರ್ PSI ವೀರಭದ್ರ ಕುಂಬಾರ ಕಾರ್ಯವೈಖರಿಗೆ ಕಾರಾಗೃಹ DGP ಅಲೋಕ್ ಕುಮಾರ್ ಮೆಚ್ಚುಗೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕಾರಾಗೃಹಕ್ಕೆ ಇಂದು ಬೆಳಿಗ್ಗೆ ಧಿಡೀರ್ ಭೇಟಿ ನೀಡಿದ DGP ಅಲೋಕ್ ಕುಮಾರ ಕಾರಾಗೃಹ ವೀಕ್ಷಣೆ ಮಾಡಿ ಕೈದಿಗಳೊಂದಿಗೆ ಮಾತನಾಡಿ ಜೈಲಿನಲ್ಲಿ ನೀಡುತ್ತಿರುವ ಸೌಕರ್ಯ ಕುರಿತು ಚರ್ಚಿಸಿದ್ದಾರೆ. ಅದರಂತೆ ಕೈದಿಗಳು ನಮಗೇ ಯಾವುದೇ ತೊಂದರೆ ಇಲ್ಲ ನಮಗೇ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿದ್ದಾರೆ. ಪ್ರತಿವಾರ ಶುದ್ಧವಾದ ಮಾಂಸಹಾರ ಆಹಾರ ಕೂಡ ನೀಡಲಾಗುತ್ತಿದೆ. ಪ್ರತಿ ನಿತ್ಯ ಸರಿಯಾದ ಸಮಯಕ್ಕೆ ಊಟ ನೀಡಲಾಗುತ್ತಿದೆ ಕೈದಿಗಳು ಹೇಳಿದ್ದಾರೆ. ಜೊತೆಗೆ ಇಲ್ಲಿನ ಜೈಲಾಧಿಕಾರಿ PSI ವೀರಭದ್ರ ಕುಂಬಾರ ಕೂಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಏನು ಸಮಸ್ಯೆ ಇಲ್ಲ ಹಾಗೇ ಯಾವುದೇ ತಪ್ಪಾದ ಚಟುವಟಿಕೆಗಳು ಕಂಡುಬಂದಿಲ್ಲ. ಜೈಲಿನಲ್ಲಿ ಇದುವರೆಗೂ ಯಾವುದೇ ಕೈದಿಗಳಿಗೆ ದುಶ್ಚಟ ಮಾಡಲು ಅವಕಾಶ ನೀಡಿಲ್ಲ ಇನ್ಮುಂದೆ ಕೂಡ ನಡೆಯುವುದಿಲ್ಲ ಎಂದು ಹರ್ಷ ವ್ಯಕ್ತಪಡಿಸಿ ಜೊತೆಗೆ ನಮ್ಮ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದ್ದಾರೆ. ಇದೇ ಸಂಧರ್ಭದಲ್ಲಿ ಜಮಖಂಡಿ DYSP ಸಯ್ಯದ್ ರೋಷನ್ ಜಮೀರ್ ಶಹರ ಪೋಲಿಸ್ ಠಾಣೆ PSI ಅನೀಲ ಕುಂಬಾರ ಸಬ್ ಜೈಲರ್ ಪಾಟೀಲ್ ಸೇರಿದಂತೆ ಕಾರಾಗೃಹ ಸಿಬ್ಬಂದಿಗಳು ಇದ್ದರು..

ವರದಿ :: ಶ್ರೀ ಸುಮೀತ ಬಂಗಿ..

ಹೆಚ್ಚಿನ ಸುದ್ದಿ