Thursday, June 4, 2026
Homeಜಿಲ್ಲಾ ಸುದ್ದಿಗಳುಜನಸಾಮಾನ್ಯರ ಕೆಲಸ ಮಾಡುದಿದ್ದರೆ ಕ್ರಮ:ಶಾಸಕ ಶಿವರಾಮ್ ಹೆಬ್ಬಾರ್

ಜನಸಾಮಾನ್ಯರ ಕೆಲಸ ಮಾಡುದಿದ್ದರೆ ಕ್ರಮ:ಶಾಸಕ ಶಿವರಾಮ್ ಹೆಬ್ಬಾರ್

ಮುಂಡಗೋಡ :ಅಧಿಕಾರಿಗಳು  ಎನಿಸಿಕೊಂಡವರು  ಜನರ ಕೆಲಸ ಮಾಡಿಕೊಡಬೇಕು. ಅದನ್ನು ಬಿಟ್ಟು  ಜನಸಾಮಾನ್ಯರನ್ನು  ಕಚೇರಿಗೆ ಪದೇ ಪದೇ ಅಲೆದಾಡಿಸಬಾರದು.
ನಗರದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ  ಅಧಿಕಾರಿಗಳೊಂದಿಗೆ ನಡೆದ ಸಭೆ ಉದ್ದೇಶಿಸಿ ಮಾತನಾಡಿದರು.  ಜನರ ಆಕ್ರೋಶ ಹೆಚ್ಚಾದ ಕಾರಣ  ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದೆ. ಆದರೆ ಈಗ ಮತ್ತೆ ಹೇಳಿ ಚಾಳಿ ಮುಂದುವರೆದಿದೆ.
ಜನರ ಕೆಲಸ ಮಾಡದಿದ್ದರೆ 24 ಗಂಟೆ ಒಳಗೆ  ಇಲ್ಲಿಂದ ವರ್ಗಾವಣೆ ಮಾಡಿಸುತ್ತೇನೆ. ಎಂದು ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಂಜುನಾಥ್ ಮುಚ್ಛಂಡಿಗೆ ಎಚ್ಚರಿಕೆ ನೀಡಿದರು.     ಫಾರ್ಮ್ ನಂಬರ್ 3 ವಿತರಣೆ ಕುರಿತಂತೆ ಆಗುತ್ತಿರುವ  ನಿಧಾನ ಗತಿಯ ಕಾರ್ಯದ ಕುರಿತಾಗಿ ಸಾರ್ವಜನಿಕರ ದೂರು ಆಲಿಸಿದ ಶಾಸಕ ಶಿವರಾಮ್ ಹೆಬ್ಬಾರ್ ಹತ್ತು ದಿನದೊಳಗೆ ಬಾಕಿ ಇರುವ ಕಾರ್ಯವನ್ನು  ಮುಕ್ತಾಯಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.     
ನಗರದ ಪ್ರವಾಸಿ ಮಂದಿರದಲ್ಲಿ  ಸಾರ್ವಜನಿಕರು ಕುಂದು ಕುರಿತೆಯ ಆಲಿಸಿ  ಸಮಸ್ಯೆಗಳಿಗೆ ಸ್ಥಳದಲ್ಲೇ  ಪರಿಹಾರ ದೊರಕಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಕೃಷ್ಣ ಹಿರೇಹಳ್ಳಿ  ಅಖಿಲ ಕರ್ನಾಟಕ    ಹಡಪದ ಸಮಾಜದ ರಾಜ್ಯಾಧ್ಯಕ್ಷರಾದ ಮಾಜಿ  ಸಿದ್ದು ಹಡಪದ್ . ರವಿ ಗೌಡ ಪಾಟೀಲ್. ಗುಡಪ್ಪ ಕಾತೂರು ಅನೇಕರು  ಭಾಗವಹಿಸಿದ್ದರು. 

ವರದಿ : ಬಿ ಎಸ್ ತೋಟಯ್ಯನವರ

ಹೆಚ್ಚಿನ ಸುದ್ದಿ