ಚಿಟಗುಪ್ಪಾ: ತಾಲೂಕಿನ ವಿಠ್ಠಲ್ ಪುರ ಗ್ರಾಮದ ಪವಿತ್ರ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ (ಲಿಂಗೋಳ) ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ, ಚಿಟಗುಪ್ಪಾ ತಾಲೂಕು ಟೋಕರೆ ಕೋಳಿ ಸಮಾಜ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಹಾಗೂ ಚುನಾವಣೆ ಮುಖಾಂತರ ಆಯ್ಕೆ ಮಾಡಲಾಯಿತು.
ಬೀದರ್ ಜಿಲ್ಲಾ ಟೋಕರೆ ಕೋಳಿ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಜಗನ್ನಾಥ್ ಜಮಾದಾರ್ ಅವರ ಅಧ್ಯಕ್ಷತೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಾಜದ ಸಂಘಟನೆ ಮತ್ತು ಪ್ರಗತಿಯ ದೃಷ್ಟಿಯಿಂದ ಈ ಕೆಳಗಿನವರನ್ನು ನೂತನ ಜವಾಬ್ದಾರಿಗೆ ನೇಮಿಸಲಾಗಿದೆ:
ಗೌರವಾಧ್ಯಕ್ಷರು: ಶ್ರೀ ಪುಂಡಲಿಕಪ್ಪ ನಿಂಗನಬಾಡ
ಅಧ್ಯಕ್ಷರು: ಶ್ರೀ ನರಸಪ್ಪ ನರನಾಳ ಫಾತ್ಮಾಪುರ್
ಉಪಾಧ್ಯಕ್ಷರು: ಶ್ರೀ ಬಾಬುರಾವ್ ರಾಸುರೆ ವಳಖಿಂಡಿ
ಪ್ರಧಾನ ಕಾರ್ಯದರ್ಶಿ: ಶ್ರೀ ಈರಪ್ಪ ಮಾನಕರ ಮುದ್ನಾಳ್
ಸಹ ಕಾರ್ಯದರ್ಶಿ: ಶ್ರೀ ಭೀಮರಾವ್
ಸಂಘಟನಾ ಕಾರ್ಯದರ್ಶಿ: ಶ್ರೀ ಅಶೋಕ್ ಕಾಗೆ
ಖಜಾಂಚಿ: ಶ್ರೀ ನಾಗೇಶ್
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಜಗನ್ನಾಥ್ ಜಮಾದಾರ್ ಅವರು, “ನೂತನ ಪದಾಧಿಕಾರಿಗಳು ಮಹರ್ಷಿ ವಾಲ್ಮೀಕಿ, ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಾತಾ ಮಾಣಿಕೇಶ್ವರಿ ಅವರ ತತ್ವದರ್ಶನದಲ್ಲಿ ಸಮಾಜದ ಏಳಿಗೆಗಾಗಿ ಶ್ರಮಿಸಲಿ” ಎಂದು ಹಾರೈಸಿದರು.
ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಮಾಜದ ಮುಖಂಡರು ಹಾಗೂ ಹಿತೈಷಿಗಳು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
