ಬಟ್ಟೆ ವಿಚಾರಕ್ಕೆ ಬುದ್ಧಿವಾದ ಹೇಳಿದ ಮಹಿಳಾ ಹೋಮ್ಗಾರ್ಡ್ಗೆ ಜುಟ್ಟು ಹಿಡಿದು ಥಳಿಸಿದ್ದ ಯುವತಿ ಅರೆಸ್ಟ್ ಆಗಿದ್ದಾಳೆ. ಬೆಂಗಳೂರಿನ ಕೆ.ಆರ್ ಪುರದಲ್ಲಿ ಚಡ್ಡಿ ಹಾಕಿಕೊಂಡು ತಿರ್ಗಾಡ್ತಿದ್ದ ಮೋಹಿನಿ ಅನ್ನೋ ಯುವತಿಗೆ ಹೋಮ್ಗಾರ್ಡ್ ಲಕ್ಷ್ಮೀ ನರಸಮ್ಮ ಬುದ್ದಿ ಹೇಳಿದ್ರು.. ಇತರ ಬಟ್ಟೆ ಹಾಕ್ಕೊಂಡು ಸುತ್ತಾಡಬೇಡ.. ಮೈತುಂಬಾ ಬಟ್ಟೆ ಹಾಕ್ಕೊಂಡು ಬಾ ಅಂತ ಹೇಳಿದ್ರು.. ನನ್ ಚಡ್ಡಿ ನನ್ ಇಷ್ಟ.. ನೀನ್ಯಾರು ನನಗೆ ಹೇಳೋಕೆ ಅಂತ ಹೋಮ್ಗಾರ್ಡ್ ಮೇಲೆಯೇ ಯುವತಿ ರಾಕ್ಷಸಿ ಅವತಾರ ತಾಳಿದ್ಲು.. ಜಡೆ ಹಿಡಿದು ರಕ್ತ ಬರುವಂತೆ ಹಲ್ಲೆ ಮಾಡಿದ್ಲು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ಮೋಹಿನಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
