Monday, September 28, 2026
Homeಬೆಂಗಳೂರುಚಾಮರಾಜಪೇಟೆ ರಿಟರ್ನಿಂಗ್ ಅಧಿಕಾರಿಗೆ ದೂರು- ಭಾಸ್ಕರ ರಾವ್

ಚಾಮರಾಜಪೇಟೆ ರಿಟರ್ನಿಂಗ್ ಅಧಿಕಾರಿಗೆ ದೂರು- ಭಾಸ್ಕರ ರಾವ್

ಬೆಂಗಳೂರು: ಚಾಮರಾಜಪೇಟೆ ರಿಟರ್ನಿಂಗ್ ಅಧಿಕಾರಿ ಕಚೇರಿಗೆ ಇಂದು ಬಂದು ದೂರು ನೀಡಿದ್ದೇವೆ ಎಂದು ಬಿಜೆಪಿ ಮುಖಂಡ ಭಾಸ್ಕರ ರಾವ್ ಅವರು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಚಾಮರಾಜಪೇಟೆ ಮಂಡಲದ ವತಿಯಿಂದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಶ್ರೀಮತಿ ಗುಲ್ತಾಜ್ ಫಾತಿಮಾ ರವರಿಗೆ, ಬಿಜೆಪಿ ನಿಯೋಗವು ದೂರು ಸಲ್ಲಿಸಿತು. ಬಳಿಕ ಮಾತನಾಡಿದ ಅವರು, ನಿನ್ನೆಯಿಂದ ಎಸ್‍ಐಆರ್ ಪ್ರಕ್ರಿಯೆ ಆರಂಭವಾಗಿದೆ. ಚಾಮರಾಜಪೇಟೆ ಮತಕ್ಷೇತ್ರದಲ್ಲಿ ಬಹಳಷ್ಟು ಬಿಎಲ್‍ಒಗಳು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಗಮನ ಸೆಳೆದರು.
ಬಿಎಲ್‍ಒಗಳಿಗೆ ಅವರ ಕರ್ತವ್ಯದ ಸಮರ್ಪಕ ಮಾಹಿತಿ ಇಲ್ಲ ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷದ ಬಿಎಲ್‍ಎ 2 ಅವರು ಪಕ್ಷದ ಚಿಹ್ನೆ ಹಾಗೂ ಅಭ್ಯರ್ಥಿಗಳ ಭಾವಚಿತ್ರ ಪಡೆದು ಬಿಎಲ್‍ಒಗಳ ಜೊತೆ ಹೋಗಿ ಎನ್ಯುಮರೇಷನ್ ಫಾರ್ಮ್ ಕೊಡುತ್ತಿದ್ದಾರೆ. ಇದು ಸರಿಯಲ್ಲ ಎಂದು ತಿಳಿಸಿದರು.
ಕೆಲವೆಡೆ ಅಲ್ಪಸಂಖ್ಯಾತರು ಹೆಚ್ಚಾಗಿ ಇರುವುದರಿಂದ ಅಲ್ಪಸಂಖ್ಯಾತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಕಿದ್ದಾರೆ. ಇದು ಪೂರ್ವಯೋಜಿತ ಕ್ರಮ ಎಂದು ಟೀಕಿಸಿದರು. ಸರಿಯಾಗಿ ಮಾಹಿತಿ ಕೊಟ್ಟು ನೇಮಕ ಮಾಡುವಂತೆ ಕೋರಿದ್ದೇವೆ ಎಂದು ವಿವರಿಸಿದರು. ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಕವಿತಾ, ಬಿಎಲ್‍ಎ 1 ಉದಯ್ ಅವರು ಇದ್ದರು.

ಹೆಚ್ಚಿನ ಸುದ್ದಿ