ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಬಸವ ದಳ ಎತ್ತಿನಕೇರಿ ಹಾಗೂ ಕಿತ್ತೂರು ತಾಲೂಕಾ ಘಟಕದ ವತಿಯಿಂದ ಜಗಜ್ಯೋತಿ ಬಸವಣ್ಣನವರ 893ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಹಾಗೂ ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು
ಇದೇ ಏಪ್ರಿಲ್ 20, ಸೋಮವಾರದಂದು ಕಿತ್ತೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅರ್ಥಪೂರ್ಣವಾಗಿ ಬಸವ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಅಂದು ಸಾಯಂಕಾಲ 04:00 ಗಂಟೆಗೆ ಪಟ್ಟಣದ ಅರಳಿಕಟ್ಟಿ ವೃತ್ತದಿಂದ ಮೆರವಣಿಗೆಯು ಚಾಲನೆ ಪಡೆಯಲಿದೆ. ಈ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಸಾಗಿ ರಾಣಿ ಚನ್ನಮ್ಮ ವೃತ್ತವನ್ನು ತಲುಪಲಿದೆ.
ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶರಣ ರಾಯಪ್ಪ ಚ. ಹಣಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಿತ್ತೂರು ಭಾಗದ ರಾಷ್ಟ್ರೀಯ ಬಸವದಳದ ಎಲ್ಲ ಶರಣರು ಹಾಗೂ ವಿವಿಧ ಬಸವ ಪರ ಸಂಘಟನೆಗಳು ಈ ಮಹೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆ.
“ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ” ಎಂಬ ಸಂಕಲ್ಪದೊಂದಿಗೆ ನಡೆಯುತ್ತಿರುವ ಈ ಸಮಾರಂಭಕ್ಕೆ ಕಿತ್ತೂರು ತಾಲೂಕಿನ ಸಮಸ್ತ ಬಸವಾಭಿಮಾನಿಗಳು, ಶರಣ-ಶರಣೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಪಸರಿಸಲು ಸಹಕರಿಸಬೇಕೆಂದು ಬಸವ ಜಯಂತಿ ಉತ್ಸವ ಸಮಿತಿಯು ಪ್ರಕಟಣೆಯ ಮೂಲಕ ವಿನಂತಿಸಿದೆ.
ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

