ಬೆಂಗಳೂರು;
“ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ರಾಷ್ಟ್ರೀಯ/ಪ್ರಾದೇಶಿಕ ಪಕ್ಷಗಳು (ಬಿಜೆಪಿ, ಕಾಂಗ್ರೆಸ್, ಜೆಡಿಎಸ್,ಆಮ್ ಆದ್ಮಿ ಪಾರ್ಟಿ, ಇನ್ನಿತರ ಎಲ್ಲಾ ಪಕ್ಷಗಳು) ವೀರಶೈವ ಲಿಂಗಾಯಿತರಿಗೆ ಕನಿಷ್ಠ 100 ಟಿಕೆಟ್ ಕಡ್ಡಾಯವಾಗಿ ನೀಡಬೇಕು ಎಂದು
ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ (ರಿ) ರಾಜ್ಯದ್ಯಕ್ಷರಾದ ಮೋಹನ್ ಕುಮಾರ್.ಬಿ ಒತ್ತಾಯ ಮಾಡಿದ್ದಾರೆ
ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಉಳ್ಳಂತಹ ಹಾಗೂ ರಾಜ್ಯವನ್ನ ಸಮಗ್ರವಾಗಿ ಎಲ್ಲಾ ಪಕ್ಷದಲ್ಲೂ ವೀರಶೈವ ಲಿಂಗಾಯಿತರ ಶಾಸಕರ ಹಾಗೂ ಜನಪ್ರತಿನಿಧಿಗಳ ಸಂಖ್ಯೆ ಗಮನದಲ್ಲಿಟ್ಟುಕೊಂಡರೆ 2015 ಪಾಲಿಕೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರಿಗೆ ಸಿಕ್ಕ ಟಿಕೆಟ್ ಕೇವಲ ಬೆರಳೆಣಿಕೆ ಇಡಿ ಬೆಂಗಳೂರು ಸೇರಿದಂತೆ, ಅಂದಾಜಿನ ಪ್ರಕಾರ ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷ ಇದ್ದಾರೆ
ಹಳೇ ಮೈಸೂರು ವೀರಶೈವ ಲಿಂಗಾಯತರ ಜೊತೆ ಉತ್ತರ ಕರ್ನಾಟಕದಿಂದ ಬಂದವರನ್ನು ಸೇರಿಸಿದರೆ ನಗರದಲ್ಲಿ ಸುಮಾರು 28 ಲಕ್ಷ ವೀರಶೈವ ಲಿಂಗಾಯತರಿದ್ದಾರೆ ಎನ್ನುವುದು ಒಬ್ಬ ಸಮುದಾಯದ ಮುಖಂಡರ ಅಂದಾಜು ಮಾಡಲಾಗಿದೆ
ಅಂದರೆ ವೀರಶೈವ ಲಿಂಗಾಯತರು ಬೆಂಗಳೂರಿನಲ್ಲಿ ಶೇಕಡಾ 10 % ಕ್ಕಿಂತಲೂ ಹೆಚ್ಚಿದ್ದಾರೆ. ಬೆಂಗಳೂರು ಸಣ್ಣ ಸಣ್ಣ ಸಮುದಾಯಗಳಿರುವ ವಲಸಿಗರ ನಗರ. ಅವರಿಗೆ ಹೋಲಿಸಿದರೆ ವೀರಶೈವ ಲಿಂಗಾಯತರದು ದೊಡ್ಡ ಸಮುದಾಯ.
ಬೆಂಗಳೂರಿನಲ್ಲಿ 28 ಶಾಸಕರಿದ್ದಾರೆ. ಅದರಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಶೂನ್ಯ. ಕಳೆದ ಏಳು ದಶಕಗಳ ರಾಜಕೀಯದಲ್ಲಿ ಕೇವಲ ಇಬ್ಬರು ವೀರಶೈವ ಲಿಂಗಾಯತರು ಮಾತ್ರ ಶಾಸಕರಾಗಿದ್ದಾರೆ – ಸೋಮಣ್ಣ ಮತ್ತು ಪ್ರಮೀಳಾ ನೇಸರ್ಗಿ.
ಬೆಂಗಳೂರು ನಗರ ಮಹಾಪಾಲಿಕೆಗೆ ಈ ಮೊದಲು ಚುನಾವಣೆಯಾಗಿದ್ದು 2015ರಲ್ಲಿ. ಆಗ 198 ವಾರ್ಡುಗಳಿದ್ದವು. ಅವುಗಳಲ್ಲಿ ನಗರದ ಶೇಕಡಾ ಐದರಷ್ಟು ಇರುವ ವೀರಶೈವ ಲಿಂಗಾಯತರಿಗೆ ಸಿಕ್ಕಿದ್ದು ಎರಡೇ ಟಿಕೇಟು. ಒಂದು ಕಾಂಗ್ರೆಸ್ ಕೊಟ್ಟಿತ್ತು, ಮತ್ತೊಂದು ಬಿಜೆಪಿ ಕೊಟ್ಟಿತ್ತು.
ಬೆಂಗಳೂರಿನಲ್ಲಿ ಸಣ್ಣ ಸಣ್ಣ ತೆಲುಗು ಮಾತನಾಡುವ ನಾಯ್ಡು, ರಾಜು, ಬಲಿಜ, ರೆಡ್ಡಿ ಮುಂತಾದ ಸಮುದಾಯಗಳಿವೆ. 2015ರ ಬೆಂಗಳೂರು ಚುನಾವಣೆಯಲ್ಲಿ ಇವರಿಗೆ ಸಿಕ್ಕ ಟಿಕೆಟ್ ಸಂಖ್ಯೆ 50ಕ್ಕೂ ಹೆಚ್ಚು.
“ಇಲ್ಲಿ ಬೇರೆ ಸಮುದಾಯಕ್ಕೆ ಎಷ್ಟು ಟಿಕೆಟ್ ಸಿಕ್ಕಿದೆ ಅನ್ನುವುದು ಮುಖ್ಯವಲ್ಲ. ಪ್ರಜಾಪ್ರಭುತ್ವದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇರಬೇಕಾಗುತ್ತದೆ ಎನ್ನುವುದು ಮುಖ್ಯ,” ಎಂದು ಸುವರ್ಣ ಕರ್ನಾಟಕ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷರಾದ ಮೋಹನ್ ಕುಮಾರ್ ಬಸವರಾಜ್ ಹೇಳುತ್ತಾರೆ.
ಈ ಶೋಚನೀಯ ಅಂಕಿ ಅಂಶ ಹಂಚಿಕೊಳ್ಳಲು ಮುಜುಗರವಾಗುತ್ತದೆ. ವೀರಶೈವ ಲಿಂಗಾಯತರಿಂದ ಯಾರೂ ಟಿಕೆಟ್ ಕೇಳುವವರೇ ಇಲ್ಲ ಎಂದು ಪಕ್ಷಗಳ ಮುಖಂಡರು ಸಾಮಾನ್ಯವಾಗಿ ಹೇಳುವ ಮಾತು. ಈ ನಿರಾಸಕ್ತಿಗೆ ಕಾರಣ ಗೊತ್ತಿಲ್ಲ. ಆದರೆ ಪರಿಣಾಮ ಮಾತ್ರ ಸ್ಪಷ್ಟ.
ಬೆಂಗಳೂರಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರಿನಲ್ಲಿ ಮೆಟ್ರೋ ಅಥವಾ ವಿಮಾನ ನಿಲ್ದಾಣದಂತಹ ದೊಡ್ಡ ಸ್ಮಾರಕ ಇರಬೇಕು ಅಂತ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಸೇರಿದಂತೆ ಹಲವಾರು ಸಂಘಟನೆಗಳ ಬೇಡಿಕೆಯಾಗಿದ್ದು ಆದರೆ ನಮ್ಮ ರಾಜಕೀಯ ಸಾಮರ್ಥ್ಯದ ಕೊರತೆಯಿಂದ ಯಾವ ರಾಜಕಾರಣಿಗೂ ಅದರ ಬಗ್ಗೆ ಆಸಕ್ತಿಯಿಲ್ಲ. ಬೆಂಗಳೂರಿನಲ್ಲಿ ಈಗಿರುವ ಜನಸಂಖ್ಯೆ ಅನುಸಾರ 5 ವೀರಶೈವ ಲಿಂಗಾಯತ ಶಾಸಕರು ಪ್ರತಿನಿಧಿಸಿ ಅಥವಾ 50 ವೀರಶೈವ ಲಿಂಗಾಯತ ಕಾರ್ಪೊರೇಟರುಗಳಿದ್ದರೆ ಸಮುದಾಯಕ್ಕೆ ಪ್ರತಿನಿತ್ಯ ಸಿಗುವುದು ಕಷ್ಟದ ಕೆಲಸವೇ?
ರಾಜಾಜಿನಗರದಲ್ಲಿ ಪೂರ್ಣಗೊಂಡ ಬಸವಣ್ಣನವರ ಪ್ರತಿಮೆ ಮೂರು ವರ್ಷ ಮುಸುಕು ಹಾಕಿಕೊಂಡು ನಿಂತಿತ್ತು. ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ, ಪೂಜ್ಯ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದದಿಂದ ಕೊನೆಗೂ ಹೋದ ವರ್ಷ ಅನಾವರಣಗೊಳ್ಳಲು ಹೋರಾಟಗಳನ್ನೇ ಮಾಡಬೇಕಾಗಿತ್ತು ಇಂದು ನೆನಪಿಸುತ್ತೇವೆ,
ವೀರಶೈವ ಲಿಂಗಾಯತರಲ್ಲಿ ಐದಾರು ಶಾಸಕರಿದ್ದರೆ ಅಥವಾ 25 ಕಾರ್ಪೊರೇಟರುಗಳಿದ್ದರೆ ಬೆಂಗಳೂರಿನಲ್ಲಿ ಬಸವ ಜಯಂತಿ, ಮತ್ತು ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾಕ್ಟರ್ ಶಿವಕುಮಾರ ಶಿವಯೋಗಿಗಳವರ ದಾಸೋಹ ದಿನ ಯಾವ ಪ್ರಮಾಣದಲ್ಲಿ ನಡೆಯುತ್ತಿತ್ತು?
ಗ್ರೇಟರ್ ಬೆಂಗಳೂರು ಮರುವಿಂಗಡಣೆಯಾಗಿ ಈಗ 369 ವಾರ್ಡುಗಳಾಗಿವೆ. ಒಂದೊಂದು ವಾರ್ಡಿನಲ್ಲಿ (ಅಂದಾಜು)ಸರಾಸರಿ 20,000 ದಿಂದ 60,000 ದಷ್ಟು ಜನಸಂಖ್ಯೆಯಿದೆ.
ಈ ದೃಷ್ಟಿಕೋನದಲ್ಲಿ ಸಮುದಾಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ತುಂಬಾ ಅವಶ್ಯಕತೆ ಇದ್ದು ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಸರಾಸರಿ 100 ಸೀಟ್ ಗಳಿಗಿಂತ ಅತಿ ಹೆಚ್ಚು ಸೀಟುಗಳನ್ನು ವೀರಶೈವ ಲಿಂಗಾಯತರಿಗೆ ನೀಡಬೇಕೆಂದು ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹಿಸುತ್ತದೆ,
,
