ತುಮಕೂರು: ಜನತಾ ದರ್ಶನ ನಡೆಸುತ್ತಿದ್ದ ಗೃಹ ಸಚಿವ ಜಿ.ಪರಮೇಶ್ವರ್ಗೆ ಮನವಿ ಕೊಡಲು ಬಂದಿದ್ದ ಕೆಆರ್ಎಸ್ ಪಕ್ಷದ ಮುಖಂಡನನ್ನು ಪೊಲೀಸರು ಧರಧರನೇ ಎಳೆದೊಯ್ದಿದ್ದಾರೆ. ಜನತಾ ದರ್ಶನದಲ್ಲಿ ಜನರಿಗೆ ದರ್ಪದ ದರ್ಶನ ತೋರಿಸಿದ್ದಾರೆ ಗೃಹ ಸಚಿವರು
ಈಗಾಗಲೇ ನೋಂದಣಿ ಮಾಡಿಕೊಂಡರೂ ಅರ್ಜಿಯನ್ನು ನೀಡಲು ಅವಕಾಶ ಕೊಟ್ಟಿರಲಿಲ್ಲ. ಅಲ್ಲದೇ ಗೃಹ ಸಚಿವರು ಸಭೆ ಮುಗಿಸಿ ಹೊರಟು ನಿಂತರು. ಈ ವೇಳೆ ಮನವಿಯನ್ನು ಹೊತ್ತುತಂದಿದ್ದ ಕೆಆರ್ಎಸ್ ಪಕ್ಷದ ಮಲ್ಲಿಕಾರ್ಜುನ್ ಗೃಹ ಸಚಿವರಿಗೆ ಮನವಿ ಕೊಟ್ಟರು. ಆಗ ಕೆಆರ್ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್ ಫೇಸ್ಬುಕ್ ಲೈವ್ ಕೊಡುತಿದ್ದರು. ಲೈವ್ ನಿಲ್ಲಿಸುವಂತೆ ಗೃಹ ಸಚಿವರು ಸೂಚಿಸಿದರು. ಆದಾಗ್ಯೂ ಲೈವ್ ನಿಲ್ಲಿಸಲಿಲ್ಲ. ಇದರಿಂದ ಗರಂ ಗೃಹ ಸಚಿವರು ಇದಬೆ ಕಾಯುತ್ತಿದ ಪೊಲೀಸರು ಸೋಮಸುಂದರ್ರನ್ನು ಧರಧರನೆ ಎಳೆದುಕೊಂಡು ಹೋಗಿ ವಶಕ್ಕೆ ಪಡೆದಿದ್ದಾರೆ. ರಾಜ್ಯ ಗೃಹ ಸಚಿವರೆ ಕೇವಲ ಮನವಿ ಪತ್ರದ ವಿಷಯದಲ್ಲಿ ಈ ರೀತಿಯಲ್ಲಿ ನೇಡದಕೊಂಡಿದು ಜನತಾ ದರ್ಪ ದರ್ಶನ ಭಾಗ್ಯವೇ ಎಂದು ಜನರು ಮಾತಾಡಿಕೋಳುವಂತೆ ಆಗಿದೆ
ಡಿಸಿ ಶುಭಾ ಕಲ್ಯಾಣ್ ಹಾಗೂ ಎಸ್ಪಿ ಅಶೋಕ ಎರಡೂವರೆ ವರ್ಷ ಆದರೂ ವರ್ಗಾವಣೆ ಆಗದೇ ಜಿಲ್ಲೆಯಲ್ಲೇ ಇರುವದರಿಂದ ಜಿಲ್ಲೆಯ ಜನರಿಗೆ ತೊಂದರೆ ಆಗುತ್ತಿದೆ ನಿಯಮದ ಅನುಸಾರ ಅವರನ್ನು ವರ್ಗಾವಣೆ ಮಾಡಿ ಬಹಳ ದಿನದಿಂದ ಠೀಕಾಣಿ ಹೂಡಿರೋದನ್ನು ಆಕ್ಷೇಪಿಸಿ ಇವರು ಮನವಿ ತಂದಿದ್ದರು.
ಅಧಿಕಾರಿಗಳ ವಿರುದ್ಧ ಮನವಿ ಕೋಡುವುದೆ ಅಪರಾಧ ಎಂಬಂತೆ ಬಿಂಬಿಸಿದ ರಾಜ್ಯ ಗೃಹ ಸಚಿವರ ನೆಡಯನ್ನು ರಾಜ್ಯ ಕೆ ಆರ ಎಸ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.ಪ್ರಜಾಪ್ರಭುತ್ವ ಬಗ್ಗೆ ಮಾತಾಡುವ ಕಾಂಗ್ರೆಸ್ ಪಕ್ಷ ಎಂತ ಪ್ರಜಾಪ್ರಭುತ್ವ ವ್ಯವಸ್ಥೆ ನೀಡುತ್ತಿದೆ ಅನುವುದು ಗೃಹ ಸಚಿವರಿಂದಲ್ಲೆ ತಿಳಿಯುತ್ತಿದೆ ಎಂದು ರಾಜ್ಯ ಕಾನೂನು ವ್ಯವಸ್ಥೆ ಬಗ್ಗೆ ಕಾರವಾಗಿ ಪ್ರತಿಕ್ರಿಯಿಸಿದ್ದಾರೆ ಕೆಆರೆಸ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ.
