ಕಾಗವಾಡ: ತಾಲೂಕಿನ ರೈತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನೆಗಾಗಿ ನಾಳೆ ಬೆಳಗಾವಿ ಚಲೋ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.
ಈ ವರ್ಷ ಮಳೆ ಅಭಾವ ಹಿನ್ನೆಲೆ ಪ್ರತಿ ಎಕರೆಗೆ ಮೂವತ್ತು ಸಾವಿರ ಬೆಳೆ ಪರಿಹಾರ,ಸಮರ್ಪಕ ವಿದ್ಯುತ್ ಪೂರೈಕೆ, ೪೫೦೦ ಹೆಚ್ಚುವರಿಕಬ್ಬಿನ ಬಿಲ್ ,ಕಬ್ಬಿನ ತೂಕದಲ್ಲಿ ಮೋಸ ಸರ್ಕಾರಿ ವೇಟ್ ಬ್ರಿಜ್ ನಿರ್ಮಾಣಕ್ಕೆ ಆಗ್ರಹ, ಬಸವೇಶ್ವರ ಏತ್ ನೀರಾವರಿ ಮರು ಕಾಮಗಾರಿ ಪ್ರಾರಂಭ,ಕೃಷಿ ಕಾಯ್ದೆ ವಾಪಾಸ್, ಕೃಷಿ ಸಾಲ ಮನ್ನ , ಕೃಷ್ಣ ಮೇಲ್ದಂಡೆ ಜನರಿಗೆ ಶಾಶ್ವತ ಪರಿಹಾರ, ಕಾರ್ಖಾನೆಗಳ ಕಲುಸಿತ ನೀರು ತಡೆ, ಪಶು ವೈದ್ಯಕೀಯ ಆಸ್ಪತೆ ಪ್ರಾರಂಭ, ಪ್ರತಿ ಉಪ ಗ್ರಾಮಗಳಲ್ಲಿ ಹೆಚ್ಚುವರಿ ಪಶು ಆಸ್ಪತ್ರೆ ದ್ರಾಕ್ಷಿ ಬೆಳೆಗಳಾಗಾರರಿಗೆ ಸೂಕ್ತ ಪರಿಹಾರ ಸ್ವಾಮೀನತನ್ ವರದಿ ಜಾರಿ ಮಾಡುವಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ನಾಳೆ ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ಮಾಡಲು ಕಾಗವಾಡ ಹಾಗೂ ಅಥಣಿ ತಾಲೂಕಿನ ರೈತರ ಸಂಘಟನೆ ಹಾಗೂ ಹಸಿರು ಸೇನೆ ಮುಖಂಡರು ಮುಂದಾಗಿದ್ದಾರೆ.
ವರದಿ :- ಲಕ್ಷ್ಮಣ ಕೋಳಿ ಚಿಕ್ಕೋಡಿ