ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದ ಜಾರ್ಜ್ ರೋಹಿ ಪಾರಲ್ ರವರ ಮನೆಯ ಕಾಂಪೌಂಡ್ ಒಳಗಡೆ ರಾತ್ರಿ 10 ಗಂಟೆ ಸುಮಾರಿಗೆ ದೊಡ್ಡ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಕೋಳಿಗಳ ಆಸೆಗಾಗಿ ಮನೆಯ ಕಾಂಪೌಂಡ್ ಒಳಗಡೆ ಬಂದಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಕೋಳಿಗಳನ್ನು ಹಿಡಿದು ನುಂಗುವ ಸ್ಥಿತಿಯಲ್ಲಿ ಇತ್ತು. ಮನೆಯವರೆಲ್ಲ ಭಯಭೀತರಾಗಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಶ್ರೀ ಮುತ್ತುರಾಜ ಹಳ್ಳಿ ಗಸ್ತು ಅರಣ್ಯ ಪಾಲಕರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಸೂಕ್ತ ಆವಾಸಸ್ಥಾನಕ್ಕೆ ಬಿಟ್ಟಿದ್ದಾರೆ.



ಕಾರ್ಯಾಚರಣೆಯಲ್ಲಿ ನಿಶಿಮೇಶ್ವರ ವಾಲ್ಮೀಕಿ, ಊರ ನಾಗರಿಕರಾದ ಮಹೇಶ ರಾಮಣ್ಣ ಸುಣಗಾರ ಹಾಗೂ ಇತರರು ಇದ್ದರು. ಮುತ್ತುರಾಜ ಅವರ ಈ ಹಾವುಗಳ ರಕ್ಷಣೆಯಿಂದ ಮುಂಡಗೋಡ ತಾಲೂಕಿನ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವರದಿಗಾರರು: ಬಸಯ್ಯ ತೋಟಯ್ಯನವರ
