ಕಮಲಾಪುರ್ ಪಟ್ಟಣದ ಬಸನಿಲ್ದಾಣದಿಂದ ತಹಸೀಲ್ದಾರರ ಕಚೇರಿ ವರೆಗೆ ಪಾದಯಾತ್ರೆ ನಡಿಸಿ ಕೋಲಿ ಸಮಾಜದ ಯುವಕ ದೇವಾನಂದ ಕೋರಬಾನ ಸಾವು 3ತಿಂಗಳು ಗತಿಸಿದರು, ಆರೋಪಿಗಳನ್ನು ಬಂದಿಸಿಲ್ಲ, ಆದಷ್ಟು ಬೇಗನೆ ಆರೋಪಿಗಳನ್ನು ಬಂದಿಸಬೇಕೆಂದು ಕಮಲಾಪುರ್ ತಹಸೀಲ್ದಾರರಾದ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಕೋಲಿ ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ ಅವರು
ನಮ್ಮ ವಾಹಿನಿಯೊಂದಿಗೆ ಮಾತನಾಡಿ,ಈ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ವಜಾ ಗೊಳಿಸಬೇಕು,ರಾಜಾರೋಷವಾಗಿ ಓಡಾಡುತ್ತಿರುವ ಆರೋಪಿಗಳನ್ನು ಬಂದಿಸಬೇಕು ಹಾಗೂ
ಮೃತ ಕುಟುಂಬಕ್ಕೆ ಸರಕಾರದಿಂದ 25ಲಕ್ಷ ರೂಪಾಯಿಗಳು ಪರಿಹಾರ ಕೊಟ್ಟು ನ್ಯಾಯ ಒದಗಿಸಿಕೊಡಬೇಕು ಎಂದರು.ನಂತರ ಕಮಲಾಪುರ್ ತಾಲ್ಲೂಕಿನ ಕೋಲಿ ಸಮಾಜದ ಮುಖಂಡರಾದ ಗುರು ನಾಟಿಕಾರ್ ಅವರು ನಮ್ಮ ವಾಹಿನಿಯೊಂದಿಗೆ ಮಾತನಾಡಿ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಮುಚ್ಚಿ ಹಾಕಲು 3ಲಕ್ಷ ರೂಪಾಯಿಗಳು ದೇವಾನಂದ ಕುಟುಂಬಸ್ತರಿಗೆ ಕೊಟ್ಟು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ, ಆದಷ್ಟು ಬೇಗನೆ ದೇವಾನಂದ ಸಾವಿಗೆ ಕಾರಣರಾದವರನ್ನು ಆರೆಸ್ಟ್ ಮಾಡಬೇಕೆಂದರು, ಒಂದು ವೇಳೆ ಆರೆಸ್ಟ್ ಮಾಡಲಾರದ ಪಕ್ಷದಲ್ಲಿ ಕರ್ನಾಟಕದ್ಯಾoತ ಉಗ್ರ ಹೋರಾಟ ಮಾಡಲಾಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಕೋಲಿ ಕಬ್ಬಲಿಗ ಸಮಾಜದ ಮುಖಂಡ, ರೇವಣಸಿದ್ಧಪ್ಪ ಜಮಾದಾರ್, ಲಕ್ಷ್ಮಣ್ ಬಂಡಾರಿ ,ನಾಗೇಶ ದಮ್ಮೂರ್,ರವಿ ದೊಂಗರಗಾಂವ ಶರಣಪ್ಪ ತಳವಾರ,ಗುಂಡು ಐನಪುರ್, ಪ್ರೇಮ ಕೋಲಿ ಮಲ್ಲು ಮರಗುತ್ತಿ, ಸೂರ್ಯಕಾಂತ್ ಔರಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :: ರಮೇಶ ತೇಲಿ