Monday, December 23, 2024
Homeರಾಜ್ಯಕೋಲಿ ಸಮಾಜದ ಯುವಕನ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳವಂತೆ ಹೋರಾಟ ಮಾಡಿದರು ಕ್ರಮಕ್ಕೆ ಮುಂದಾಗ...

ಕೋಲಿ ಸಮಾಜದ ಯುವಕನ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳವಂತೆ ಹೋರಾಟ ಮಾಡಿದರು ಕ್ರಮಕ್ಕೆ ಮುಂದಾಗ ಸರ್ಕಾರ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಕಲಬುರಗಿಯಲ್ಲಿ 15-10-2023 ಸಭೆ : ಅವಣ್ಣ ಮ್ಯಾಕೇರಿ ಕರೆ

ಕೋಲಿ ಸಮಾಜ ಕಲಗೂರ್ತಿ ಯುವಕ ದೇವಾನಂದ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳದ ಪ್ರಕರಣ ಮತ್ತು ಸಮಾಜ ಅಪ್ರಾಪ್ತ ಬಾಲಕಿ ಅರ್ಚನಾ ಅಪಹರಣ ಪ್ರಕರಣದ ನ್ಯಾಯಕ್ಕಾಗಿ ಈಗಾಗಲೇ ಜಿಲ್ಲಾ ಕೋಲಿ ಸಮಾಜ ಶಾಂತಿಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಪ್ರಾರಂಭ ಮಾಡಿ ಧರಣಿ ಸತ್ಯಾಗ್ರಹ, ಹೆದ್ದಾರಿ ಮೇಲೆ ರಸ್ತೆ ತಡೆ ಪ್ರತಿಭಟನೆ ಇನ್ನಿತರ ಹೋರಾಟ ಮಾಡಿದರು ಸರಕಾರ & ಪೊಲೀಸ್ ಇಲಾಖೆ ನಿರ್ಲಕ್ಷ ತೋರುತ್ತಿರುವ ಹಿನ್ನಲೆಯಲ್ಲಿ ಮುಂದಿನ ಸಂಘಟನಾತ್ಮಕ ಹೋರಾಟದ ರೂಪರೇಷಗಳನ್ನು ಕೈಗೊಳ್ಳಲು ಸೂಕ್ತ ಸಲಹೆಗಳು ನೀಡಲು ದಿನಾಂಕ 15.10.2023 ರಂದು ರವಿವಾರ ಬೆಳಗ್ಗೆ 10.30 ಗಂಟೆಗೆ ಕಲಬುರಗಿ ನಗರದ ಅಂಬಿಗರ ಚೌಡಯ್ಯ ಭವನ್ GDA ಲೇಔಟ್ ರಾಮಮಂದಿರ ಹತ್ತಿರ ಸಭೆಯನ್ನು ಕೋಲಿ ಸಮಾಜ ಸಮನ್ವ ಸಮಿತಿಯರು ಕರೆದಿದ್ದಾರೆ.


ಕೋಲಿ ಸಮಾಜದ ವಿವಿಧ ಸಂಘಟನೆ ಪಧಾಧಿಕಾರಿಗಳು, ಮುಖಂಡರು, ತಾಲೂಕು ಪಧಾಧಿಕಾರಿಗಳು, ಬುದ್ದಿಜೀವಿಗಳು, ಬಂಧುಗಳು & ಹಿತೈಷಿಗಳು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮುಂದಿನ ಹೋರಾಟಕ್ಕೆ ಸಲಹೆ ಸೂಚನೆಗಳನ್ನು ನೀಡಿ ದೇವಾನಂದ ಕುಟುಂಬಕ್ಕ ನ್ಯಾಯ ದೊರೆಕಿಸಿಕೋಡಬೆಕೇಂದು ಸಮನ್ವಯ ಸಮಿತಿ ಸದಸ್ಯ ರಮೇಶ ನಾಟಿಕಾರ,ಬಸವರಾಜ ಹರವಾಳ ಅವಣ್ಣ ಮ್ಯಾಕೇರಿ ಶರಣಪ್ಪ ತಳವಾರ ಹಾಗೂ ಸದಸ್ಯರು ತಿಳಿಸಿದ್ದಾರೆ

ಹೆಚ್ಚಿನ ಸುದ್ದಿ