Monday, February 9, 2026
Homeರಾಜ್ಯ*ಕೂಡ್ಲಿಗಿ : ಡಾ॥ ವಿಷ್ಣು ದಾದ ರವರ ಹುಟ್ಟು ಹಬ್ಬವನ್ನು ಬಹು ಅದ್ಧೂರಿಯಾಗಿ ಆಚರಿಸಿದ ಅಭಿಮಾನಿಗಳು...

*ಕೂಡ್ಲಿಗಿ : ಡಾ॥ ವಿಷ್ಣು ದಾದ ರವರ ಹುಟ್ಟು ಹಬ್ಬವನ್ನು ಬಹು ಅದ್ಧೂರಿಯಾಗಿ ಆಚರಿಸಿದ ಅಭಿಮಾನಿಗಳು -ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಭಾಗಿಯಾಗಿದ್ದಾರೆ*

– ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಶ್ರೀಕೊತ್ತಲಾಂಜನೇಯ ಪಾದಗಟ್ಟೆ ಬಳಿ , ಪೊಲೀಸ್ ವಸತಿ ಗೃಹಗಳ ಹತ್ತಿರವಿರುವ. ಅಮಲಾಪುರ ಗೌಡರವರ ಮಾಲೀಕತ್ವದ ವಿಷ್ಣು ಮೊಬೈಲ್ ಕ್ಯಾಂಟೇನಲ್ಲಿ , ಡಾ॥ ವಿಷ್ಣು ದಾದರವರ ಹುಟ್ಟು ಹಬ್ಬವನ್ನು ಬಹು ಅದ್ದೂರಿಯಾಗಿ ಆಚರಿಸಲಾಯಿತು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಡಾ ॥ ವಿಷ್ಣು ದಾದರವರ ಭಾವಚಿತ್ರಕ್ಕೆ ಪುಷ್ಪ ಗುಚ್ಚ ಅರ್ಪಿಸುವ ಮೂಲಕ ನಮನ ಸಲ್ಲಿಸಿದರು. ನಂತರ ಅವರು ನೆರೆದ ಅಭಿಮಾನಿಗಳ ಒತ್ತಾಸೆಯ ಮೇರೆಗೆ , ಅವರು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಹುಟ್ಟು ಹಬ್ಬ ಆಚರಣೆಗೆ ಚಾಲನೆ ನೀಡಿದರು. ಅಮಲಾಪುರ ಗೌಡ (ಕರಿಬಸವನವನಗೌಡ)ರವರು , ಮಾತ್ರವಲ್ಲ ಅವರ ಕುಟುಂಬ ಸದಸ್ಯರೆಲ್ಲರೂ ವಿಷ್ಣು ಅಭಿಮಾನಿಗಳಿದ್ದು. ಕಳರದ ಹತ್ತಾರು ವರ್ಷಗಳಿಂದ ನಿರಂತರವಾಗಿ , ಪ್ರತಿ ವರ್ಷವೂ ತಮ್ಮ ಹೋಟೆಲ್ ನಲ್ಲಿ ಡಾ ॥ ವಿಷ್ಣು ಸೇನಾ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ. ತಮ್ಮ ಕುಟುಂಬ ಸದಸ್ಯರ ಸಹಭಾಗಿತ್ವದೊಂದಿಗೆ , ಡಾ॥ ವಿಷ್ಣು ವರ್ಧನರವರ ಹುಟ್ಟು ಹಬ್ಬವನ್ನು ಬಹು ಅದ್ದೂರಿಯಾಗಿ ಆಚರಿಸುತಲಿದ್ದಾರೆ. ಈ ಬಾರಿಯೂ ಕೂಡ ತಮ್ಮ ಕುಟುಂಬ ಸರ್ವ ಸದಸ್ಯರೊಡಗೂಡಿ , ಪಟ್ಟಣದ ಸಾರ್ವಜನಿಕರೊಂದಿಗೆ ಬೀದಿ ಬದಿ ವ್ಯಾಪಾರಸ್ಥರ ಸಹ ಭಾಗಿತ್ವದೊಂದಿಗೆ. ಡಾ॥ ವಿಷ್ಣುವರ್ಧನರವರ ಹುಟ್ಟು ಹಬ್ಬವನ್ನು , ಬಹು ಅದ್ಧೂರಿಯಾಗಿ ಆಚರಿಸಲ‍ಾಯಿತು. ಕ್ಷೇತ್ರದ ಶಾಸಕರಾದ ಡಾ॥ ಎನ್ ಟಿ ಶ್ರೀನಿವಾಸ್ ರವರು , ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕರವರು ಭಾಗಿಯಾಗಿ ಸಂಭ್ರಮ ಹಂಚಿಕೊಂಡರು. ಪಟ್ಟಣ ಪಂಚಾಯ್ತಿಯ ವಿವಿದ ವಾರ್ಡ್ ಗಳ ಸದಸ್ಯರು. ವಿವಿದ ಜನಪ್ರತಿನಿಧಿಗಳು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಮೆಡಿಕಲ್ ಸ್ಟೋರ್ ಚಲಪತಿ , ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು. ವಿಷ್ಣು ಅಭಿಮಾನಿಗಳ ಬಳಗದವರು , ಪಟ್ಟಣದ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು , ಅಮಲಾಪುರ ಎಂ. ಕರಿಬಸವನಗೌಡ , ಶ್ರೀಮತಿ ಬಿ.ಮಮತಾ , ಎಂ.ಭೋಜನಗೌಡ , ಶ್ರೀಮತಿ ಎಂ.ಬಸಮ್ಮ , ಬೋರ್ ವೆಲ್ ಏಜೆಂಟ್ ಶರಣಪ್ಪ, ಬಸವರಾಜ , ಸುಧಾಕರ(ಸುಧಾ) , ಆಟೋ ಸುರೇಶ , ಜಿಂಕಲ್ ನಾಗೇಶ , ಗಿರೀಶ , ಅಮಲಾಪುರ ಕರಿಯಪ್ಪ, ಸಿ.ಬಿ.ಸಿದ್ದಪ್ಪ, ಗಂಟಿ ಗುರುರಾಜಶೆಟ್ರು, ವಕೀಲ ಡಿ.ಹೆಚ್. ದುರುಗೇಶ , ಐಸ್ ಆನಂದ ಬಾಬು ಶೆಟ್ರು , ಗುತ್ತಿ ಬಾಲರಾಜ ಶೆಟ್ರು , ಸೇರಿದಂತೆ. ಪಟ್ಟಣ ಹಾಗೂ ತಾಲೂಕಿನೆಲ್ಲೆಡೆಗಳಿಂದ ಆಗಮಿಸಿದ್ದ , ಹಿರಿಯ ನಾಗರಿಕರು , ಮಹಿಳೆಯರು , ಮಕ್ಕಳು , ವಿವಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು. ವಿವಿದ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು , ಯುವತಿಯರು , ವೃದ್ಧರಾದಿಯಾಗಿ, ನೂರಾರು ಅಭಿಮಾನಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಡಾ ॥ ವಿಷ್ಣು ವರ್ಧನರವರ ಭಾವಚಿತ್ರಕ್ಕೆ , ಪೂಜೆ ಸಲ್ಲಿಸಿ ಪುಷ್ಪ ಗುಚ್ಚವಿರಿಸಿ ಗೌರವ ಸಮರ್ಪಿಸಲಾಯಿತು. ನಂತರ ಬೃಹದಾಕಾರದ ಕೇಕ್ ಕತ್ತರಿಸಿ , ಪರಸ್ಪರ ಹಂಚಲಾಯಿತು. ನೆರೆದವರಿಗೆ ಸಿಹಿ ಖಾದ್ಯ ಸೇರಿದಂತೆ , ಅಭಿಮಾನಿಗಳಿಗ‍ಾಗಿ ಭಾರೀ ಭೋಜನಾಕೂಟ ಜರುಗಿತು. ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರನ್ನು , ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪಟಾಕಿ ಸಿಡಿಸಿ ಪರಸ್ಪರ ಸಡಗರ ಸಂಭ್ರಮದಿಂದ , ಬಹು ಅದ್ಧೂರಿಯಾಗಿ ಡಾ॥ ವಿಷ್ಣುವರ್ಧನರವರ ಹುಟ್ಟು ಹಬ್ಬ ಆಚರಿಸಲಾಯಿತು.

ವರದಿ :-ವಿಠ್ಠಲ್ ಮಟ್ಟೂರ.

ಹೆಚ್ಚಿನ ಸುದ್ದಿ